ಬೆಂಗಳೂರು: ರಾಯಚೂರು ಜಿಲ್ಲೆಯ ಲಿಂಗಸೂರಿನಲ್ಲಿರುವ ರಾಜ್ಯ ಸರ್ಕಾರದ ಅಧೀನದ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದಲ್ಲಿ ಖಾಲಿ ಇರುವ ಹಲವು ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಸಹಾಯಕ ಫೋರ್ಮೆನ್, ಐಟಿಐ ಫಿಟ್ಟರ್ನ ಒಟ್ಟು 168 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ ವಿವರ:
- ಸಹಾಯಕ ಫೋರ್ಮೆನ್ (ಗಣಿ) - 16
- ಸಹಾಯಕ ಫೋರ್ಮೆನ್ (ಲೋಹ ಶಾಸ್ತ್ರ) -7
- ಲ್ಯಾಬ್ ಸಹಾಯಕ- 1
- ಸಹಾಯಕ ಫೋರ್ಮೆನ್ (ಭೂ- ಗರ್ಭಶಾಸ್ತ್ರ) - 3
- ಸಹಾಯಕ ಫೋರ್ಮೆನ್ (ಡೈಮಂಡ್ ಡ್ರಿಲ್ಲಿಂಗ್) -2
- ಸಹಾಯಕ ಫೋರ್ಮೆನ್ (ಮೆಕಾನಿಕಲ್) - 19
- ಐಟಿಐ ಫಿಟ್ಟರ್ ದರ್ಜೆ 2 (ಗಣಿ ವಿಭಾಗ)- 56
- ಐಟಿಐ ಫಿಟ್ಟರ್ ದರ್ಜೆ 2 (ಲೋಹ ವಿಭಾಗ) - 4
- ಐಟಿಐ ಎಲೆಕ್ಟ್ರಿಕಲ್ ದರ್ಜೆ 2 (ತಾಂತ್ರಿಕ ವಿಭಾಗ) -4
- ಸಹಾಯಕ ಫೋರ್ಮೆನ್ (ಸಿವಿಲ್) - 1
- ಸಹಾಯಕ ಫೋರ್ಮೆನ್ (ಎಲೆಕ್ಟ್ರಿಕಲ್ ) 1
- ಸೆಕ್ಯೂರಿಟಿ ಇನ್ಸ್ಪೆಕ್ಟರ್ - 6
- ಐಟಿಐ ಫಿಟ್ಟರ್ (ಸರ್ವೆ) -2
- ಸೆಕ್ಯೂರಿಟಿ ಗಾರ್ಡ್ - 24
ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೊಮಾ, ಬಿಎಸ್ಸಿ, ಐಟಿಐ, ಪದವಿ, 12ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ: ಅರ್ಜಿ ಸಲ್ಲಿಸುವ ಗರಿಷ್ಠ ವಯೋಮಿತಿ 35 ವರ್ಷ. ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.