ಬೆಂಗಳೂರು:ಗದಗ ಜಿಲ್ಲೆ ಮತ್ತು ತಾಲೂಕು ನಿರ್ವಹಣಾ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಹೊರಗುತ್ತಿಗೆ ಆಧಾರದ ಮೇಲೆ ಈ ಹುದ್ದೆಗಳ ನೇಮಕಾತಿ ನಡೆಸಲಾಗಿದೆ. 11 ತಿಂಗಳ ಅವಧಿಗೆ ತಾತ್ಕಾಲಿಕವಾಗಿ ಈ ಹುದ್ದೆ ನೇಮಕಾತಿ ನಡೆಯಲಿದೆ.
ಹುದ್ದೆ ವಿವರ: ಒಟ್ಟು 13 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
- ಜಿಲ್ಲಾ ಕಚೇರಿ ಸಹಾಯಕ - 1
- ಬ್ಲಾಕ್ ಮ್ಯಾನೇಜರ್ ಫಾರಂ ಲೈವ್ಲಿಹುಡ್ - 4
- ಬ್ಲಾಕ್ ಮ್ಯಾನೇಜರ್ ನಾನ್ ಫಾರಂ ಲೈವ್ಲಿಹುಡ್ - 1
- ಕ್ಲಸ್ಟರ್ ಸೂಪರ್ವೈಸರ್ - 2
- ಕ್ಲಸ್ಟರ್ ಸೂಪರ್ವೈಸರ್ ಸ್ಕಿಲ್ - 5
ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ: ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 45 ವರ್ಷ ಮೀರಿರಬಾರದು.
ಅನುಭವ: ಅಭ್ಯರ್ಥಿಗಳು ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷ ಹುದ್ದೆ ನಿರ್ವಹಣೆ ಅನುಭವ ಹೊಂದಿರಬೇಕು.