ಬೆಂಗಳೂರು: ರಕ್ಷಣಾ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಪದವೀಧರ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ತಾಂತ್ರಿಕ ಮತ್ತು ತಾಂತ್ರಿಕೇತರ ವಿಭಾಗದಲ್ಲಿ ಒಟ್ಟು 150 ಹುದ್ದೆಗಳ ನೇಮಕಾತಿ ನಡೆಯಲಿದೆ. ಈ ಹುದ್ದೆಗಳನ್ನು ಒಂದು ವರ್ಷದ ಅವಧಿಗೆ ನೇಮಕ ಮಾಡಲಾಗುತ್ತದೆ.
ಹುದ್ದೆಗಳ ವಿವರ:
- ತಾಂತ್ರಿಕ ಪದವೀಧರ ಅಪ್ರೆಂಟಿಸ್ - 75
- ತಾಂತ್ರಿಕೇತರ ಪದವೀಧರ ಅಪ್ರೆಂಟಿಸ್ - 30
- ಡಿಪ್ಲೊಮಾ ಅಪ್ರೆಂಟಿಸ್ ಟ್ರೈನಿಸ್ - 20
- ಐಟಿಐ ಅಪ್ರೆಂಟಿಸ್ ಟ್ರೈನಿ - 25
ವಿದ್ಯಾರ್ಹತೆ: ತಾಂತ್ರಿಕ ಪದವೀಧರ ಅಪ್ರೆಂಟಿಸ್ ಹುದ್ದೆಗೆ ಅಭ್ಯರ್ಥಿಗಳು ಇಬಿ, ಬಿಟೆಕ್ ಪದವಿ ಹೊಂದಿರಬೇಕು. ತಾಂತ್ರಿಕೇತರ ಪದವೀಧರ ಅಪ್ರೆಂಟಿಸ್ ಹುದ್ದೆಗೆ ಬಿಕಾಂ, ಬಿಎಸ್ಸಿ, ಬಿಎ, ಬಿಸಿಎ, ಬಿಬಿಎ ಪದವಿ ಹಾಗೂ ಡಿಪ್ಲೊಮಾ ಮತ್ತು ಐಟಿಐ ಅಪ್ರೆಂಟಿಸ್ಗೆ ಡಿಪ್ಲೊಮಾ ಮತ್ತು ಐಟಿಐ ಉತ್ತೀರ್ಣರಾಗಿರಬೇಕು.
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಶಿಷ್ಯ ವೇತನ: ಅಪ್ರೆಂಟಿಸ್ ಅವಧಿಯಲ್ಲಿ ಪದವೀಧರ ಅಪ್ರೆಂಟಿಸ್ಗೆ ಮಾಸಿಕ 9 ಸಾವಿರ, ಡಿಪ್ಲೊಮಾ ಅಪ್ರೆಂಟಿಸ್ಗೆ ಮಾಸಿಕ 8 ಸಾವಿರ ಮತ್ತು ಐಟಿಐ ಅಪ್ರೆಂಟಿಸ್ಗೆ ಮಾಸಿಕ 7 ಸಾವಿರ ರೂ ಸ್ಟೈಪಂಡ್ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ: ಮೆರಿಟ್, ಲಿಖಿತ ಪರೀಕ್ಷೆ ಮತ್ತು ಸಂದರ್ಶನ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಮಾರ್ಚ್ 21ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮೇ 9 ಕಡೆಯ ದಿನಾಂಕ.
ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು rac.gov.inಅಥವಾ drdo.gov.in ಇಲ್ಲಿಗೆ ಭೇಟಿ ನೀಡಿ.
ಎಡಿಎಯಲ್ಲಿ ಸ್ಟೆನೋಗ್ರಾಫರ್ ಮತ್ತು ಡ್ರೈವರ್ ಹುದ್ದೆ:ರಕ್ಷಣಾ ಇಲಾಖೆಯ ಏರೋನಾಟಿಕಲ್ ಡೆವಲಪ್ಮೆಂಟ್ ಏಜನ್ಸಿಯಲ್ಲಿ ಒಂದು ಸ್ಟೇನೋಗ್ರಾಫರ್ ಮತ್ತು ಎರಡು ಡ್ರೈವರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಸ್ಟೆನೋಗ್ರಾಫರ್ ಹುದ್ದೆಗೆ ಪದವಿ ವಿದ್ಯಾರ್ಹತೆ ಜೊತೆಗೆ ಸರ್ಕಾರದ ಅಧಿಕೃತ ಶಿಕ್ಷಣ ಮಂಡಳಿಯಲ್ಲಿ ಶಾರ್ಟ್ಹ್ಯಾಂಡ್ ಮತ್ತು ಟೈಪ್ರೈಟಿಂಗ್ ಪ್ರಮಾಣ ಪತ್ರ ಹೊಂದಿರಬೇಕು. ಡ್ರೈವರ್ ಹುದ್ದೆಗೆ ಅಭ್ಯರ್ಥಿಗಳು 8ನೇ ತರಗತಿ ಜೊತೆಗೆ ಸರ್ಕಾರದಿಂದ ಹಗುರ ಮತ್ತು ಭಾರೀ ವಾಹನಗಳ ಚಾಲನ ಪರವಾನಗಿ ಹೊಂದಿರಬೇಕು.
ಆನ್ಲೈನ್ನಲ್ಲಿ ನಿಗದಿತ ಅರ್ಜಿ ಪಡೆದು ಅವುಗಳ ಭರ್ತಿ ಮಾಡಿ ಆಡ್ಮಿನ್ ಆಫೀಸರ್ ಗ್ರೇಡ್ 2, ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ, ವಿಭೂತಿಪುರ, ಮಾರತ್ಹಳ್ಳಿ ಪೋಸ್ಟ್, ಬೆಂಗಳೂರು- 560037 ಇಲ್ಲಿಗೆ ಕಳುಹಿಸಬೇಕು. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಏಪ್ರಿಲ್ 6. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ada.gov.in ಭೇಟಿ ನೀಡಿ.
ಇದನ್ನೂ ಓದಿ: ತುಮಕೂರು: ಗ್ರಾ.ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಆಹ್ವಾನ