ಬೆಂಗಳೂರು: ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ಸಿಬ್ಬಂದಿ ಹುದ್ದೆ ಭರ್ತಿಗೆಯಾದಗಿರಿ ಜಿಲ್ಲಾಡಳಿತ ಅರ್ಜಿ ಆಹ್ವಾನಿಸಿದೆ. ಹನ್ನೊಂದು ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
ವಿದ್ಯಾರ್ಹತೆ: ವಿಜ್ಞಾನ, ಸಮಾಜ ವಿಜ್ಞಾನ, ಗ್ರಾಮೀಣಾಭಿವೃದ್ಧಿ, ಪರಿಸರ ವಿಜ್ಞಾನ, ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು. ಸಂಬಂಧಿಸಿದ ಕ್ಷೇತ್ರದಲ್ಲಿ 3ರಿಂದ 5 ವರ್ಷದ ಅನುಭವ ಹೊಂದಿದ್ದು, ಈಗಾಗಲೇ ವಿಪತ್ತು ನಿರ್ವಹಣಾ ಕಾರ್ಯದಲ್ಲಿ ಅನುಭವ ಹೊಂದಿದ್ದರೆ ಉತ್ತಮ.
ವೇತನ: ಮಾಸಿಕ 48,400 ರೂಪಾಯಿ ವೇತನದ ಜೊತೆಗೆ ಪ್ರವಾಸ ಭತ್ಯೆ.
ಅರ್ಜಿ ಸಲ್ಲಿಸುವ ವಿಧಾನ: ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಧಿಕೃತ ಅಧಿಸೂಚನೆಯೊಂದಿಗೆ ನೀಡಲಾಗಿರುವ ನಿಗದಿತ ಅರ್ಜಿ ಭರ್ತಿ ಮಾಡಿ, ಕೆಳಗಿನ ವಿಳಾಸಕ್ಕೆ ಸಲ್ಲಿಸಿ.
ಉಪಜಿಲ್ಲಾಧಿಕಾರಿ (ವಿಪತ್ತು ನಿರ್ವಹಣಾ ಘಟಕ) ಉಪ ಆಯುಕ್ತರ ಕಚೇರಿ, ಯಾದಗಿರಿ ಜಿಲ್ಲೆ.
ಆಗಸ್ಟ್ 21ರೊಳಗೆ ಅರ್ಜಿ ಸಲ್ಲಿಸಬೇಕು. ಈ ಕುರಿತು ಹೆಚ್ಚಿನ ಮಾಹಿತಿಗೆ yadgir.nic.inಇಲ್ಲಿಗೆಭೇಟಿ ನೀಡಿ.