ಕರ್ನಾಟಕ

karnataka

ETV Bharat / education-and-career

ನಾಗರಿಕ ಸೇವಾ ಪರೀಕ್ಷೆ : ಮತ್ತೊಮ್ಮೆ ಅರ್ಜಿ ದಿನಾಂಕ ವಿಸ್ತರಿಸಿದ UPSC - UPSC CIVIL SERVICES EXAM

ಐಎಎಸ್​, ಐಪಿಎಸ್​, ಐಎಫ್​ಎಸ್​ನಂತಹ ದೇಶದ ಅತ್ಯುನ್ನತ 'ಎ' ಶ್ರೇಣಿಯ ಹುದ್ದೆಗಳ ನೇಮಕಾತಿ ಬಗ್ಗೆ ಪ್ರಕಟಿಸಿತ್ತು. ಇದೀಗ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ಯುಪಿಎಸ್​ಸಿ ಮತ್ತೊಮ್ಮೆ ವಿಸ್ತರಿಸಿದೆ.

Again UPSC Extends Civil Services Prelims Exam Apply Date
ಯುಪಿಎಸ್ಸಿ (ETV Bharat)

By ETV Bharat Karnataka Team

Published : Feb 19, 2025, 12:09 PM IST

ನವದೆಹಲಿ : ದೇಶದ ಅತ್ಯುನ್ನತ ಹುದ್ದೆಗಳಿಗೆ ನಡೆಯುವ ನಾಗರಿಕಾ ಸೇವಾ ಪರೀಕ್ಷೆಗೆ ಅರ್ಜಿ ಸಲ್ಲಿಕೆ ದಿನಾಂಕವನ್ನು ಎರಡನೇ ಬಾರಿಗೆ ಕೇಂದ್ರ ಲೋಕ ಸೇವಾ ಆಯೋಗ ವಿಸ್ತರಣೆ ಮಾಡಿದೆ. ಇದರ ಅನುಸಾರ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶವನ್ನು ಪಡೆದಿದ್ದು, ಫೆ. 21 ಕಡೆಯ ದಿನಾಂಕವಾಗಿದೆ.

ಜನವರಿ 22ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮೊದಲಿಗೆ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕವನ್ನು ಫೆ.11ಕ್ಕೆ ನಿಗದಿಸಲಾಗಿತ್ತು. ಬಳಿಕ ಫೆ 18ರ ವರೆಗೆ ವಿಸ್ತರಣೆ ಮಾಡಲಾಯಿತು. ಇದೀಗ ಎರಡನೇ ಬಾರಿ ವಿಸ್ತರಣೆಯಲ್ಲಿ ಫೆ. 21ರ ವರೆಗೆ ಕಾಲಾವಕಾಶವನ್ನು ನೀಡಲಾಗಿದೆ.

ಹುದ್ದೆ ವಿವರ : ಒಟ್ಟು ಹುದ್ದೆಗಳು - 1129

ನಾಗರಿಕ ಸೇವಾ ಪರೀಕ್ಷೆ - 979

ಭಾರತೀಯ ಅರಣ್ಯ ಸೇವಾ ಪರೀಕ್ಷೆ - 150

ವಯೋಮಿತಿ :ಕನಿಷ್ಠ 21 ವರ್ಷ, ಗರಿಷ್ಠ 32 ವರ್ಷ ವಯೋಮಿತಿ ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಸಮುದಾಯದ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

ವಿದ್ಯಾರ್ಹತೆ: ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

ಅರಣ್ಯ ಸೇವೆ ಪರೀಕ್ಷೆ ತೆಗೆದುಕೊಳ್ಳಲು ಬಯಸುವ ಅಭ್ಯರ್ಥಿ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ವಿಜ್ಞಾನ, ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಭೂವಿಜ್ಞಾನ, ಗಣಿತ, ಭೌತಶಾಸ್ತ್ರ, ಕೃಷಿ ಪದವಿ, ಅರಣ್ಯಶಾಸ್ತ್ರವನ್ನು ಪದವಿಯಲ್ಲಿ ಒಂದು ವಿಷಯವಾಗಿ ಅಭ್ಯಾಸ ಮಾಡಿರಬೇಕು.

ಅರ್ಜಿ ಸಲ್ಲಿಕೆ, ಶುಲ್ಕ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಮಹಿಳಾ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ವಿಕಲಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ಇದೆ. ಇತರೆ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿಸಲಾಗಿದೆ.

ಆಯ್ಕೆ : ಪ್ರಿಲಿಮ್ಸ್,​ ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ.

ಈ ಹುದ್ದೆಗಳಿಗೆ ಮೇ 25ರಂದು ಪ್ರಿಲಿಮನರಿ ಪರೀಕ್ಷೆಗಳು ನಡೆಯಲಿವೆ. ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಸೇರಿದಂತೆ ಇತರೆ ವಿವರಗಳಿಗೆ ಅಧಿಕೃತ ಜಾಲತಾಣ upsconline.gov.in. ಭೇಟಿ ನೀಡಬಹುದು.

ಇದನ್ನೂ ಓದಿ: UPSC ನೇಮಕಾತಿ : IES, ISS ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ

ಇದನ್ನೂ ಓದಿ:ಬಿಎ, ಐಟಿಐ ಆದವರಿಗೆ ಉಡುಪಿ ಕೊಚ್ಚಿನ್​ ಶಿಪ್​ಯಾರ್ಡ್​ನಲ್ಲಿದೆ ಉದ್ಯೋಗಾವಕಾಶ

ABOUT THE AUTHOR

...view details