ಕರ್ನಾಟಕ

karnataka

ETV Bharat / business

ಆಲೂಗಡ್ಡೆ ಬೆಲೆಯಲ್ಲಿ ಕೆಜಿಗೆ ಐದು ರೂಪಾಯಿ ಇಳಿಕೆ: ಮಾರುಕಟ್ಟೆಯಲ್ಲಿ ಎಷ್ಟಿದೆ ಬೆಲೆ? - VEGETABLES PRICES IN INDIA - VEGETABLES PRICES IN INDIA

ಮಾರುಕಟ್ಟೆಯಲ್ಲಿ ಆಲೂಗಡ್ಡೆ ಪೂರೈಕೆಯಲ್ಲಿ ಹೆಚ್ಚಳ ಕಂಡು ಬಂದಿದ್ದರಿಂದ ಕೆಜಿ ಆಲೂಗೆ ಐದು ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಉತ್ತರಪ್ರದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತಿ ಕ್ವಿಂಟಾಲ್​ ಆಲೂಗಡ್ಡೆ ಬೆಲೆ ಇಂತಿದೆ.

vegetables prices
ಆಲೂಗಡ್ಡೆ ಬೆಲೆಯಲ್ಲಿ ಕೆಜಿಗೆ ಐದು ರೂಪಾಯಿ ಇಳಿಕೆ: ಮಾರುಕಟ್ಟೆಯಲ್ಲಿ ಎಷ್ಟಿದೆ ಬೆಲೆ? (ETV Bharat)

By ETV Bharat Karnataka Team

Published : Aug 28, 2024, 10:32 AM IST

ಫಾರುಖಾಬಾದ್, ಉತ್ತರಪ್ರದೇಶ:ಯುಪಿಯ ಅತಿದೊಡ್ಡ ಆಲೂಗಡ್ಡೆ ಮಾರುಕಟ್ಟೆಯಾಗಿರುವ ಫಾರುಖಾಬಾದ್‌ನಿಂದ ಬಿಗ್​ ರಿಲೀಫ್ ನೀಡುವ ಸುದ್ದಿಯೊಂದು ಬರುತ್ತಿದೆ. ಇಲ್ಲಿಂದ ಇತರ ರಾಜ್ಯಗಳಿಗೆ ಆಲೂಗಡ್ಡೆ ಪೂರೈಕೆ ಹೆಚ್ಚಾಗಲು ಪ್ರಾರಂಭಿಸಿದೆ. ಇತರ ರಾಜ್ಯಗಳಲ್ಲಿ, ಆಲೂಗೆಡ್ಡೆ ಪೂರೈಕೆಯಲ್ಲಿನ ಹೆಚ್ಚಳದಿಂದಾಗಿ ದರಗಳು ಕುಸಿಯಲು ಪ್ರಾರಂಭಿಸಿವೆ. ಆಲೂಗಡ್ಡೆ ಕಳೆದ ತಿಂಗಳವರೆಗೆ ಕ್ವಿಂಟಾಲ್‌ಗೆ 3,500 ರೂ.ಗಳವರೆಗೆ ಮಾರಾಟವಾಗುತ್ತಿತ್ತು. ಈಗ ಪ್ರತಿ ಕ್ವಿಂಟಲ್‌ಗೆ 1400 - 2650 ರೂ.ಗಳವರೆಗೂ ಇದೆ. ಈ ಕಾರಣದಿಂದಾಗಿ, ಚಿಲ್ಲರೆ ವ್ಯಾಪಾರದಲ್ಲಿ ಆಲೂಗಡ್ಡೆ ಬೆಲೆಯಲ್ಲಿ ಐದು ರೂಪಾಯಿಯಷ್ಟು ಕುಸಿತ ಕಂಡು ಬಂದಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ಮುಂಬರುವ ದಿನಗಳಲ್ಲಿ ಆಲೂಗಡ್ಡೆ ಪೂರೈಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದು ಆಲೂಗೆಡ್ಡೆ ಬೆಲೆಗಳು ಮತ್ತಷ್ಟು ಕುಸಿಯಲು ಕಾರಣವಾಗಬಹುದು.

ಫಾರುಖಾಬಾದ್‌ನಲ್ಲಿ ಈಗ ಎಷ್ಟು ಆಲೂಗೆಡ್ಡೆ ಅಂಗಡಿಗಳಿವೆ; ಈ ಮಾರುಕಟ್ಟೆಯಿಂದ ಪಶ್ಚಿಮ ಬಂಗಾಳ, ನೇಪಾಳ, ಬಿಹಾರ, ದೆಹಲಿ ಸೇರಿದಂತೆ ದೇಶದ ಅನೇಕ ನಗರಗಳಿಗೆ ಆಲೂಗಡ್ಡೆ ಸರಬರಾಜು ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 107 ಕೋಲ್ಡ್ ಸ್ಟೋರೇಜ್​​ಗಳಿವೆ ಎಂದು ಆಲೂಗಡ್ಡೆ ಮತ್ತು ಶಕಭಾಜಿ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಸಿಂಗ್ ಹೇಳಿದ್ದಾರೆ. ಒಟ್ಟು 8,62,991.69 ಮೀ. ಟನ್ ಆಲೂಗಡ್ಡೆಯನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಇಲ್ಲಿಯವರೆಗೆ, ಕೋಲ್ಡ್ ಪ್ಲಾನೆಟ್‌ನಿಂದ 2,57,603.02 ಟನ್​ ವಾಪಸ್ ಪಡೆಯಲಾಗಿದೆ. ಅಂದರೆ ಶೇ 29.85ರಷ್ಟು ಆಲೂಗೆಡ್ಡೆಯನ್ನು ಮಾರುಕಟ್ಟೆಗೆ ಬಿಡಲಾಗಿದೆ. ಇನ್ನೂ ಶೇ 70ರಷ್ಟು ಆಲೂಗಡ್ಡೆ ಕೋಲ್ಡ್ ಸ್ಟೋರ್‌ಗಳಲ್ಲಿ ಸಂಗ್ರಹಿಸಡಲಾಗಿದೆ. ಇದರಲ್ಲಿ, 40 ಪ್ರತಿಶತದಷ್ಟು ರೈತರ ಆಲೂಗಡ್ಡೆ ಇದ್ದರೆ. ಶೇ 30 ರಷ್ಟು ವ್ಯಾಪಾರಸ್ಥರು ಸಂಗ್ರಹಿಸಿಟ್ಟಿದ್ದಾರೆ.

ಸೆಪ್ಟೆಂಬರ್ ತಿಂಗಳಿನಿಂದ ಆಲೂಗಡ್ಡೆ ಬಿತ್ತನೆ ಪ್ರಾರಂಭವಾಗುತ್ತದೆ. ರೈತ ತನ್ನ ಆಲೂಗಡ್ಡೆಯನ್ನು ಕೋಲ್ಡ್ ಸ್ಟೋರೇಜ್‌ನಿಂದ ಹೊರ ತೆಗೆದು ಹೊಲಗಳಲ್ಲಿ ಬಿತ್ತನೆ ಮಾಡಿ ಉಳಿದ ಆಲೂಗಡ್ಡೆಯನ್ನು ವ್ಯಾಪಾರಿಗಳಿಗೆ ಮಾರುತ್ತಾನೆ. ಅದೇ ಸಮಯದಲ್ಲಿ, ರೈತರು ಆಲೂಗಡ್ಡೆಯನ್ನು ಬಿತ್ತಿದ ತಕ್ಷಣ, ವ್ಯಾಪಾರಿಗಳು ಆಲೂಗಡ್ಡೆ ಪೂರೈಕೆಯನ್ನು ಹೆಚ್ಚು ಮಾಡುತ್ತಾರೆ. ಇದರಿಂದ ಅವರ ಸರಕುಗಳು ಸಮಯಕ್ಕೆ ಸರಿಯಾಗಿ ಮಾರುಕಟ್ಟೆಗೆ ಹೋಗುತ್ತವೆ. ಇದು ಇತರ ರಾಜ್ಯಗಳಿಗೆ ಆಲೂಗಡ್ಡೆ ಪೂರೈಕೆಯನ್ನು ಹೆಚ್ಚಿಸುತ್ತದೆ. ಆಲೂಗೆಡ್ಡೆ ಬೆಳೆಗೆ ಸುಮಾರು ಎರಡು ಮೂರು ತಿಂಗಳುಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ಡಿಸೆಂಬರ್‌ನಿಂದ ಹೊಸ ಆಲೂಗಡ್ಡೆ ಮಾರುಕಟ್ಟೆಯಲ್ಲಿ ಬರಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ ಆಲೂಗಡ್ಡೆ ಬೆಲೆಯಲ್ಲಿ ಇಳಿಕೆ ಕಂಡು ಬರಲು ಆರಂಭಿಸುತ್ತದೆ.

ಮಳೆ ತಗ್ಗಿದ ತಕ್ಷಣ ಇತರ ರಾಜ್ಯಗಳಿಗೆ ಆಲೂಗಡ್ಡೆ ಪೂರೈಕೆ ಹೆಚ್ಚಳವಾಗುತ್ತದೆ. ಅದೇ ಸಮಯದಲ್ಲಿ, ಇತರ ರಾಜ್ಯಗಳಲ್ಲೂ ಆಲೂಗಡ್ಡೆ ಫಸಲು ಬರುವುದರಿಂದ ದರಗಳು ಕುಸಿಯಲು ಪ್ರಾರಂಭಿಸುತ್ತವೆ. ಚಿಲ್ಲರೆ ವ್ಯಾಪಾರದಲ್ಲಿ 40 ಕೆಜಿ ರೂ.ಗಳವರೆಗೆ ಮಾರಾಟವಾದ ಆಲೂಗೆಡ್ಡೆ ಬೆಲೆಗಳು ಈಗ 35 ರೂ.ಗೆ ಇಳಿಕೆ ಕಂಡಿದೆ. ಸೆಪ್ಟೆಂಬರ್‌ನಲ್ಲಿ ಪೂರೈಕೆ ಹೆಚ್ಚಾದರೆ, ಈ ಬೆಲೆ ಸುಮಾರು 25 - 30 ರೂಪಾಯಿಗಳಿಗೆ ಬರಬಹುದು. ಅದೇ ಸಮಯದಲ್ಲಿ, ಹೊಸ ಆಲೂಗಡ್ಡೆ ಮಾರುಕಟ್ಟೆಯಲ್ಲಿ ಬಂದಾಗ, ಅದರ ಬೆಲೆಗಳು ಪ್ರತಿ ಕೆಜಿಗೆ 20 ರೂ.ಗೆ ತಲುಪಬಹುದು.

ಆಗಸ್ಟ್​ 27 ರಂದು ಉತ್ತರ ಪ್ರದೇಶದ ವಿವಿಧ ಮಾರುಕಟ್ಟೆಗಳಲ್ಲಿ ಪ್ರತಿ ಕ್ವಿಂಟಾಲ್​​ ಆಲೂಗಡ್ಡೆ ಬೆಲೆ ಇಷ್ಟಿತ್ತು.

ಮಹರಾಜ್​ಗಂಜ್ 1900-2050
ಹಮೀರ್​​ಪುರ್ 1700-2500
ಶಹಜಹಾನ್ಪುರ 1500-2100
ಔರಯಾ 1500-2120
ಆಗ್ರಾ 1480-2900
ಮಿರ್ಜಾಪುರ 1960-2950
ಇಲಹಾಬಾದ್​ 1430-2550
ಅಂಬೇಡ್ಕರ್​ನಗರ 1500- 2650
ಅಲೀಗಢ 1450-2550
ಅಲಹಾಬಾದ್ 1400-2550

ಆಗಸ್ಟ್ 27 ರಂದು ಇತರ ರಾಜ್ಯಗಳಲ್ಲಿ ಆಲೂಗಡ್ಡೆಗೆ ಇದ್ದ ಬೆಲೆಗಳು

ರಾಜಸ್ಥಾನ (ಗಂಗಾನಗರ) 1500-1900
ಬಿಹಾರ (ಅರೇರಿಯಾ) 2000- 2500
ಹರಿಯಾಣ (ಯಮುನಾನಗರ) 1500-2000

ಇದನ್ನು ಓದಿ:ದೇಶದ 3 ರಿಂದ 6ನೇ ಹಂತದ ನಗರಗಳಲ್ಲಿ ಶೇ. 40ರಷ್ಟು ಗ್ರಾಹಕರಿಂದ ಡಿಜಿಟಲ್​ ಪಾವತಿ - DIGITAL PAYMENT in Rural India

ABOUT THE AUTHOR

...view details