ಕರ್ನಾಟಕ

karnataka

ETV Bharat / business

ಚಿನ್ನ ಬೆಳ್ಳಿ ದರದಲ್ಲಿ ಕೊಂಚ ಇಳಿಕೆ: ಇಂದಿನ ಚಿನ್ನದ ದರ ಇಷ್ಟು - Gold Rate Today - GOLD RATE TODAY

ಇಂದಿನ ಚಿನ್ನ ಮತ್ತು ಬೆಳ್ಳಿಯ ದರ ಹೇಗಿದೆ. ಪೆಟ್ರೋಲ್​, ಡೀಸೆಲ್​ ಬೆಲೆ, ಸ್ಟಾಕ್​ ಮಾರ್ಕೆಟ್​ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Jun 26, 2024, 1:50 PM IST

ಬೆಂಗಳೂರು/ಹೈದರಾಬಾದ್​: ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ. ದೇಶದಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಕೊಂಚ ಇಳಿಕೆಯಾಗಿದೆ. ಇಂದು 22 ಕ್ಯಾರೆಟ್​ ಚಿನ್ನದ ಬೆಲೆ ಗ್ರಾಂಗೆ 6,600 ರೂ. ಇದ್ದು, ನಿನ್ನೆಗಿಂತ 25 ರೂ. ಇಳಿಕೆಯಾಗಿದೆ. 24 ಕ್ಯಾರೆಟ್​ ಚಿನ್ನದ ಬೆಲೆ ಗ್ರಾಂ 7200 ರೂ. ಇದ್ದು, ನಿನ್ನೆಯಿಂದ 23 ರೂ. ಇಳಿಕೆಯಾಗಿದೆ. ಕಿಲೋ ಬೆಳ್ಳಿ ದರ ಇಂದು 90000 ಸಾವಿರ ರೂಪಾಯಿ ಇದ್ದು, ನಿನ್ನೆಗಿಂತ ಇಂದು 1000 ರೂ. ದರ ಇಳಿಕೆಯಾಗಿದೆ. ಬೆಂಗಳೂರು, ಮುಂಬೈ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಪ್ರಮುಖ ನಗರಗಳ ಇಂದಿನ ಚಿನ್ನ ಬೆಳ್ಳಿ ದರದ ಮಾಹಿತಿ ಇಲ್ಲಿದೆ.

ಪ್ರಮುಖ ನಗರದಗಳ ಇಂದಿನ ಚಿನ್ನದ ದರ:

ನಗರ ಗ್ರಾಂ. 22 ಕ್ಯಾರೆಟ್ ದರ 24 ಕ್ಯಾರೆಟ್​ ದರ
ಬೆಂಗಳೂರು 1 ಗ್ರಾಂ. 6,600 ರೂ. 7,200 ರೂ.
ದೆಹಲಿ 1 ಗ್ರಾಂ. 6,615 ರೂ. 7,215 ರೂ.
ಮುಂಬೈ 1 ಗ್ರಾಂ. 6,600 ರೂ. 7,200 ರೂ.
ಹೈದರಾಬಾದ್​ 1 ಗ್ರಾಂ. 6,600 ರೂ. 7,200 ರೂ.
ಚೆನ್ನೈ 1 ಗ್ರಾಂ. 6,660 ರೂ. 7,266 ರೂ.
ಕಲ್ಕತ್ತಾ 1 ಗ್ರಾಂ. 6,600 ರೂ. 7,200 ರೂ.
ಕೇರಳ 1 ಗ್ರಾಂ. 6,600 ರೂ. 7,200 ರೂ.

ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ:

ನಗರ ಕ್ಯಾರೆಟ್​ ತೂಕ​ ದರ
ಬೆಂಗಳೂರು 24 ಕ್ಯಾರೆಟ್ 10 ಗ್ರಾಂ. 72,000 ರೂ.
22 ಕ್ಯಾರೆಟ್ 10 ಗ್ರಾಂ. 66,000 ರೂ.
18 ಕ್ಯಾರೆಟ್​ 10 ಗ್ರಾಂ. 54,000 ರೂ.
ಮೈಸೂರು 24 ಕ್ಯಾರೆಟ್ 10 ಗ್ರಾಂ. 72,000 ರೂ.
22 ಕ್ಯಾರೆಟ್ 10 ಗ್ರಾಂ. 66,000 ರೂ.
18 ಕ್ಯಾರೆಟ್​ 10 ಗ್ರಾಂ. 54,000 ರೂ.
ಮಂಗಳೂರು 24 ಕ್ಯಾರೆಟ್ 10 ಗ್ರಾಂ. 72,000 ರೂ.
22 ಕ್ಯಾರೆಟ್ 10 ಗ್ರಾಂ. 66,000 ರೂ.
18 ಕ್ಯಾರೆಟ್​ 10 ಗ್ರಾಂ. 54,000 ರೂ.

ಸ್ಪಾಟ್ ಚಿನ್ನದ ದರ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಸ್ಥಿರವಾಗಿವೆ. ಒಂದು ಔನ್ಸ್ ಚಿನ್ನದ ಬೆಲೆ 2,325 ಡಾಲರ್ ಹಾಗೂ ಒಂದು ಔನ್ಸ್ ಬೆಳ್ಳಿಯ ಬೆಲೆ 29.46 ಡಾಲರ್ ಆಗಿದೆ.

ಕ್ರಿಪ್ಟೋ ದರ: ಕ್ರಿಪ್ಟೋ ಕರೆನ್ಸಿ ವಹಿವಾಟು ಭಾರೀ ನಷ್ಟದೊಂದಿಗೆ ಮುಂದುವರಿಯುತ್ತದೆ. ಪ್ರಮುಖ ಕ್ರಿಪ್ಟೋ ಕರೆನ್ಸಿಗಳ ಪ್ರಸ್ತುತ ಮೌಲ್ಯ ರೂಪಾಯಿ ದರದಲ್ಲಿ ಹೀಗಿದೆ.

ಕ್ರಿಪ್ಟೋ ಕರೆನ್ಸಿ ಪ್ರಸ್ತುತ ದರ
ಬಿಟ್​ ಕಾಯಿನ್​ 50,20,155 ರೂ
ಎಥೆರೆಮ್ 2,63,000 ರೂ
ಟೆಥರ್ 79.25 ರೂ.
ಬಿನನ್ಸ್​ ಕಾಯಿನ್ 48,496 ರೂ.
ಸೊಲೊನಾ 11,595 ರೂ.

ಸ್ಟಾಕ್ ಮಾರ್ಕೆಟ್:ದೇಶೀಯ ಸ್ಟಾಕ್ ಮಾರುಕಟ್ಟೆಗಳು ಇಂದು ಸಮಾಂತರವಾಗಿ ಪ್ರಾರಂಭಗೊಂಡಿದೆ. ಬೆಳಗಿನ ವೇಳೆ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 37 ಅಂಕಗಳ ಏರಿಕೆಯೊಂದಿಗೆ 78,090ರಲ್ಲಿ ವಹಿವಾಟು ನಡೆಸಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 18 ಪಾಯಿಂಟ್‌ ಏರಿಕೆ ಕಂಡು 23,739ಕ್ಕೆ ತಲುಪಿದೆ.

ಲಾಭದಲ್ಲಿ ಮುಂದುವರಿಯುತ್ತಿರುವ ಷೇರುಗಳು:ಅಲ್ಟ್ರಾಟೆಕ್ ಸಿಮೆಂಟ್, ಐಸಿಐಸಿಐ ಬ್ಯಾಂಕ್, ಎಲ್ & ಟಿ, ಕೋಟಕ್ ಮಹೀಂದ್ರಾ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಟಿಸಿಎಸ್, ನೆಸ್ಲೆ ಇಂಡಿಯಾ, ಟಾಟಾ ಮೋಟಾರ್ಸ್, ಎನ್‌ಟಿಪಿಸಿ, ಬಜಾಜ್ ಫೈನಾನ್ಸ್, ಎಚ್‌ಯುಎಲ್, ಇನ್ಫೋಸಿಸ್.

ನಷ್ಟದ ಷೇರುಗಳು: JSW ಸ್ಟೀಲ್, M&M, ಟಾಟಾ ಸ್ಟೀಲ್, HDFC ಬ್ಯಾಂಕ್, ಸನ್ಫಾರ್ಮಾ, ಇಂಡಸ್ಇಂಡ್ ಬ್ಯಾಂಕ್, ಪವರ್ಗ್ರಿಡ್, ಟೈಟಾನ್, SBI, ಏಷ್ಯನ್ ಪೇಂಟ್ಸ್, ಮಾರುತಿ, ಅದಾನಿ ಪೋರ್ಟ್ಸ್, ರಿಲಯನ್ಸ್ ಷೇರು.

ರೂಪಾಯಿ ಮೌಲ್ಯ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯವು 4 ಪೈಸೆಗಳಷ್ಟು ಕಡಿಮೆಯಾಗಿದೆ. ಪ್ರಸ್ತುತ ಡಾಲರ್ ಎದುರು ರೂಪಾಯಿ ವಿನಿಮಯ ದರ ರೂ.83.45 ಆಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ: ಬೆಂಗಳೂರಿನಲ್ಲಿ ಲೀಟರ್​ ಡೀಸೆಲ್​ ಬೆಲೆ 88.94 ರೂ., ಪೆಟ್ರೋಲ್​ ಬೆಲೆ 102.86 ರೂಪಾಯಿ., ಹೈದರಾಬಾದ್​ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.39 ರೂ., ಡೀಸೆಲ್ ಬೆಲೆ 95.63 ರೂ., ವಿಶಾಖಪಟ್ಟಣಂನಲ್ಲಿ ಲೀಟರ್ ಪೆಟ್ರೋಲ್ ಬೆಲೆ 108.27 ರೂ., ಡೀಸೆಲ್ ಬೆಲೆ 96.16 ರೂ., ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ.94.76 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ರೂ.87.66 ಆಗಿದೆ.

ಗಮನಿಸಿ:ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ದರಗಳು ಬದಲಾಗುತ್ತವೆ.

ಇದನ್ನೂ ಓದಿ:PhonePeನಲ್ಲಿ ತಪ್ಪು ಕಂಡುಹಿಡಿದ ಭಾಗಲ್ಪುರದ ಮಯಾಂಕ್: ಕಂಪನಿಯಿಂದ ಹಾಲ್​ ಆಫ್​ ಫೇಮ್​ಗೆ ಆಯ್ಕೆ! - PHONEPE ERROR DETECTION

ABOUT THE AUTHOR

...view details