ಮುಂಬೈ, ಮಹಾರಾಷ್ಟ್ರ:ಐಟಿ ಮತ್ತು ರಿಯಾಲ್ಟಿ ಹೊರತುಪಡಿಸಿ ಎಲ್ಲಾ ವಲಯದ ಷೇರುಗಳಲ್ಲಿ ಭಾರಿ ಮಾರಾಟ ಕಂಡು ಬಂದಿದ್ದರಿಂದ ಭಾರತೀಯ ಷೇರು ಮಾರುಕಟ್ಟೆ ಮಂಗಳವಾರ ಇಳಿಕೆಯೊಂದಿಗೆ ಕೊನೆಗೊಂಡಿತು.
ಭಾರತದ ಪ್ರಮುಖ ಬೆಂಚ್ ಮಾರ್ಕ್ ಸೂಚ್ಯಂಕಗಳು ವಹಿವಾಟಿನ ಕೊನೆಯಲ್ಲಿ ಶೇಕಡಾ 1 ಕ್ಕಿಂತ ಹೆಚ್ಚು ಕುಸಿದವು. ಸೆನ್ಸೆಕ್ಸ್ 820.97 ಪಾಯಿಂಟ್ ಅಥವಾ ಶೇಕಡಾ 1.03 ರಷ್ಟು ಕುಸಿದು 78,675.18 ರಲ್ಲಿ ಕೊನೆಗೊಂಡಿದೆ ಮತ್ತು ನಿಫ್ಟಿ 257.85 ಪಾಯಿಂಟ್ ಅಥವಾ ಶೇಕಡಾ 1.07 ರಷ್ಟು ಕುಸಿದು 23,883.45 ರಲ್ಲಿ ಕೊನೆಗೊಂಡಿದೆ.
ಪ್ರಮುಖವಾಗಿ ಬ್ಯಾಂಕಿಂಗ್ ಷೇರುಗಳಲ್ಲಿ ಅತ್ಯಧಿಕ ಮಾರಾಟದ ಒತ್ತಡ ಅನುಭವಿಸಿದವು. ನಿಫ್ಟಿ ಬ್ಯಾಂಕ್ 718.95 ಪಾಯಿಂಟ್ ಅಥವಾ ಶೇಕಡಾ 1.39 ರಷ್ಟು ಕುಸಿದು 51,157.80 ಕ್ಕೆ ತಲುಪಿದೆ. ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕವು ವಹಿವಾಟಿನ ಅಂತ್ಯದಲ್ಲಿ 596.25 ಪಾಯಿಂಟ್ ಅಥವಾ ಶೇಕಡಾ 1.07 ರಷ್ಟು ಕುಸಿದು 55,257.50 ಕ್ಕೆ ಕೊನೆಗೊಂಡಿತು. ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕವು 233.55 ಪಾಯಿಂಟ್ ಅಥವಾ ಶೇಕಡಾ 1.28 ರಷ್ಟು ಕುಸಿದು 17,991.60 ರಲ್ಲಿ ಕೊನೆಗೊಂಡಿತು.
ಪ್ರಮುಖ ವಲಯಗಳಲ್ಲಿ ಮಾರಾಟ ಭರಾಟೆ:ವಲಯ ಸೂಚ್ಯಂಕಗಳಲ್ಲಿ ಪಿಎಸ್ಇ, ಆಟೋ, ಪಿಎಸ್ ಯು ಬ್ಯಾಂಕ್, ಹಣಕಾಸು ಸೇವೆ, ಫಾರ್ಮಾ, ಎಫ್ಎಂಸಿಜಿ, ಲೋಹ, ಮಾಧ್ಯಮ, ಇಂಧನ, ಖಾಸಗಿ ಬ್ಯಾಂಕ್ ಮತ್ತು ಇನ್ ಫ್ರಾ ಪ್ರಮುಖವಾಗಿ ನಷ್ಟ ಅನುಭವಿಸಿದವು.