ಕರ್ನಾಟಕ

karnataka

ETV Bharat / business

ಲಾಭದತ್ತ ಹೊರಳಿದ ಷೇರು ಮಾರುಕಟ್ಟೆ: ಸೆನ್ಸೆಕ್ಸ್​ 57 & ನಿಫ್ಟಿ 30 ಅಂಕ ಏರಿಕೆ - STOCK MARKET

ಸೋಮವಾರದಂದು ಭಾರತದ ಷೇರು ಮಾರುಕಟ್ಟೆಗಳು ಏರಿಕೆಯೊಂದಿಗೆ ಕೊನೆಗೊಂಡಿವೆ.

ಬಾಂಬೆ ಸ್ಟಾಕ್ ಎಕ್ಸ್​ ಚೇಂಜ್
ಬಾಂಬೆ ಸ್ಟಾಕ್ ಎಕ್ಸ್​ ಚೇಂಜ್ (ians)

By ETV Bharat Karnataka Team

Published : Feb 17, 2025, 5:33 PM IST

ಮುಂಬೈ: ಭಾರತದ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳು ತಮ್ಮ 8 ದಿನಗಳ ನಷ್ಟದ ಸರಣಿಯನ್ನು ಕೊನೆಗೊಳಿಸಿ, ಸೋಮವಾರ ಲಾಭದೊಂದಿಗೆ ಸ್ಥಿರಗೊಂಡವು.

ಬಿಎಸ್ಇ ಸೆನ್ಸೆಕ್ಸ್ ಇಂದು ತನ್ನ ಹಿಂದಿನ ಮುಕ್ತಾಯಕ್ಕಿಂತ 57.65 ಪಾಯಿಂಟ್ ಅಥವಾ ಶೇಕಡಾ 0.08 ರಷ್ಟು ಏರಿಕೆ ಕಂಡು 75,996.86 ರಲ್ಲಿ ಕೊನೆಗೊಂಡಿತು. ಹಿಂದಿನ ಎಂಟು ಸತತ ವಹಿವಾಟು ಅವಧಿಗಳಲ್ಲಿ ಬಿಎಸ್ಇ ಸೆನ್ಸೆಕ್ಸ್ ಶೇಕಡಾ 3.4 ಅಥವಾ 2,645 ಪಾಯಿಂಟ್​ಗಳನ್ನು ಕಳೆದುಕೊಂಡಿತ್ತು.

ಅದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 30.25 ಅಂಕಗಳ ಏರಿಕೆಯೊಂದಿಗೆ 22,959.50 ರಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು. ಸೂಚ್ಯಂಕವು ಸೋಮವಾರ 22,974.20 ರಿಂದ 22,725.45 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು.

ನಿಫ್ಟಿಯಲ್ಲಿ ಅದಾನಿ ಎಂಟರ್ ಪ್ರೈಸಸ್, ಬಜಾಜ್ ಫಿನ್ ಸರ್ವ್, ಇಂಡಸ್ಇಂಡ್ ಬ್ಯಾಂಕ್, ಪವರ್ ಗ್ರಿಡ್ ಕಾರ್ಪೊರೇಷನ್ ಮತ್ತು ಅದಾನಿ ಪೋರ್ಟ್ಸ್ ಲಾಭ ಗಳಿಸಿದ ಪ್ರಮುಖ ಷೇರುಗಳಾಗಿವೆ. ನಿಫ್ಟಿ 50 ರ 50 ಘಟಕ ಷೇರುಗಳಲ್ಲಿ 34 ಷೇರುಗಳು ಶೇಕಡಾ 3.93 ರಷ್ಟು ಏರಿಕೆ ಕಂಡವು. ಮಹೀಂದ್ರಾ & ಮಹೀಂದ್ರಾ, ಭಾರ್ತಿ ಏರ್ ಟೆಲ್, ಇನ್ಫೋಸಿಸ್, ಟಿಸಿಎಸ್ ಮತ್ತು ಐಸಿಐಸಿಐ ಬ್ಯಾಂಕ್ ಶೇಕಡಾ 3.45 ರಷ್ಟು ನಷ್ಟದೊಂದಿಗೆ ಹಿನ್ನಡೆ ಅನುಭವಿಸಿದವು.

ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕವು ಶೇಕಡಾ 0.39 ರಷ್ಟು ಲಾಭದೊಂದಿಗೆ ಕೊನೆಗೊಳ್ಳುವುದರೊಂದಿಗೆ ವಹಿವಾಟು ಅವಧಿಯ ದ್ವಿತೀಯಾರ್ಧದಲ್ಲಿ ವಿಶಾಲ ಮಾರುಕಟ್ಟೆಗಳು ಚೇತರಿಕೆ ಕಂಡವು. ಮತ್ತೊಂದೆಡೆ, ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕವು ಶೇಕಡಾ 0.04 ರಷ್ಟು ಅಲ್ಪ ಲಾಭದೊಂದಿಗೆ ಕೊನೆಗೊಂಡಿತು.

ಆದಾಗ್ಯೂ, ಮಾರುಕಟ್ಟೆಯ ವಿಸ್ತಾರವು ನಕಾರಾತ್ಮಕವಾಗಿ ಉಳಿದಿದೆ. ಎನ್ಎಸ್ಇಯಲ್ಲಿ ವಹಿವಾಟು ನಡೆಸಿದ 2,955 ಷೇರುಗಳ ಪೈಕಿ 1,014 ಷೇರುಗಳು ಲಾಭದೊಂದಿಗೆ ಕೊನೆಗೊಂಡರೆ, 1,871 ಷೇರುಗಳು ಇಂದು ಕುಸಿದವು ಮತ್ತು 70 ಬದಲಾಗದೆ ಉಳಿದವು.

ಎನ್ಎಸ್ಇ, ಫಾರ್ಮಾ, ಬ್ಯಾಂಕುಗಳು, ಹಣಕಾಸು ಸೇವೆಗಳು, ಹೆಲ್ತ್ ಕೇರ್, ಒಎಂಸಿಗಳು, ಗ್ರಾಹಕ ಬಾಳಿಕೆ ಬರುವ ವಸ್ತುಗಳು ಮತ್ತು ಲೋಹಗಳು ಏರಿಕೆ ಕಂಡವು. ನಿಫ್ಟಿ ಫಾರ್ಮಾ ಸೂಚ್ಯಂಕವು ವಲಯಗಳಲ್ಲಿ ಅಗ್ರ ಲಾಭ ಗಳಿಸಿದ್ದು, ಗ್ಲೆನ್ ಮಾರ್ಕ್ ಫಾರ್ಮಾ ಮತ್ತು ಅಜಂತಾ ಫಾರ್ಮಾ ನೇತೃತ್ವದಲ್ಲಿ ಶೇಕಡಾ 1.27 ರಷ್ಟು ಹೆಚ್ಚಾಗಿದೆ. ಏತನ್ಮಧ್ಯೆ, ನಿಫ್ಟಿ ಆಟೋ, ಎಫ್ಎಂಸಿಜಿ, ಐಟಿ ಮತ್ತು ಮಾಧ್ಯಮ ಸೂಚ್ಯಂಕಗಳು ಶೇಕಡಾ 0.71 ರಷ್ಟು ಕುಸಿದವು.

ಇದನ್ನೂ ಓದಿ : 2025ರಲ್ಲಿ ಚಿನ್ನದ ಬೆಲೆ ಶೇ 11ರಷ್ಟು ಏರಿಕೆ; ಈಕ್ವಿಟಿ, ಬಿಟ್​ಕಾಯಿನ್ ಮೀರಿಸಿದ ಹಳದಿ ಲೋಹ - GOLD PRICE

For All Latest Updates

ABOUT THE AUTHOR

...view details