ಮುಂಬೈ :ರಿಲಯನ್ಸ್, ಎಚ್ಡಿಎಫ್ಸಿ ಬ್ಯಾಂಕ್, ಇನ್ಫೋಸಿಸ್ ಮತ್ತು ಭಾರ್ತಿ ಏರ್ಟೆಲ್ನಂಥ ಪ್ರಮುಖ ಸೂಚ್ಯಂಕ ಹೆವಿವೇಯ್ಟ್ ಷೇರುಗಳ ನಿರಂತರ ಮಾರಾಟದಿಂದ ಈಕ್ವಿಟಿ ಬೆಂಚ್ಮಾರ್ಕ್ ಸೂಚ್ಯಂಕಗಳು ಮಂಗಳವಾರ ಇಳಿಕೆಯಲ್ಲಿ ವಹಿವಾಟು ನಡೆಸಿದವು.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್ಇ) 362 ಅಂಕ ಇಳಿಕೆ ಕಂಡು 72,470ರಲ್ಲಿ ಕೊನೆಗೊಂಡಿತು. ಈ ಮೂಲಕ ಬಿಎಸ್ಇ ಬೆಂಚ್ಮಾರ್ಕ್ ತನ್ನ 3 ದಿನಗಳ ಏರಿಕೆಯ ಓಟವನ್ನು ಕೊನೆಗೊಳಿಸಿತು. ಮೂರು ದಿನಗಳ ಸತತ ಏರಿಕೆಯ ಅವಧಿಯಲ್ಲಿ ಬಿಎಸ್ಇ ಬೆಂಚ್ಮಾರ್ಕ್ 821 ಅಂಕಗಳನ್ನು ಗಳಿಸಿತ್ತು.
ಎನ್ಎಸ್ಇ ನಿಫ್ಟಿ-50 ವಹಿವಾಟಿನ ಒಂದು ಹಂತದಲ್ಲಿ 21,948 ಕ್ಕೆ ಇಳಿಕೆಯಾಗಿತ್ತು. ಆದರೆ, ಅಂತಿಮವಾಗಿ 22,000ರ ಗಡಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನಿಫ್ಟಿ ಮಂಗಳವಾರ 92 ಪಾಯಿಂಟ್ಗಳ ನಷ್ಟದೊಂದಿಗೆ 22,005 ರಲ್ಲಿ ಕೊನೆಗೊಂಡಿತು.
ಸೆನ್ಸೆಕ್ಸ್-30 ರಲ್ಲಿ ಪವರ್ ಗ್ರಿಡ್ ಮತ್ತು ಭಾರ್ತಿ ಏರ್ಟೆಲ್ ತಲಾ 2 ಪ್ರತಿಶತದಷ್ಟು ನಷ್ಟ ಅನುಭವಿಸಿದವು. ಬಿಎಸ್ಇ ಬೆಂಚ್ಮಾರ್ಕ್ನಲ್ಲಿ ಎಚ್ಡಿಎಫ್ಸಿ ಬ್ಯಾಂಕ್, ರಿಲಯನ್ಸ್ ಮತ್ತು ಭಾರ್ತಿ ಏರ್ಟೆಲ್ ಒಟ್ಟಾರೆಯಾಗಿ 250 ಪಾಯಿಂಟ್ಗಳ ನಷ್ಟ ಅನುಭವಿಸಿವೆ. ಮತ್ತೊಂದೆಡೆ, ಬಜಾಜ್ ಫೈನಾನ್ಸ್, ಲಾರ್ಸನ್ ಆಂಡ್ ಟೂಬ್ರೊ, ಎನ್ಟಿಪಿಸಿ ಮತ್ತು ಆಕ್ಸಿಸ್ ಬ್ಯಾಂಕ್ ಏರಿಕೆ ಕಂಡವು. ವಿಶಾಲ ಮಾರುಕಟ್ಟೆಯಲ್ಲಿ ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕವು ಉತ್ತಮವಾಗಿ ಕಾರ್ಯನಿರ್ವಹಿಸಿತು ಮತ್ತು ಶೇಕಡಾ 0.7 ರಷ್ಟು ಲಾಭದೊಂದಿಗೆ ಕೊನೆಗೊಂಡಿತು. ಸ್ಮಾಲ್ ಕ್ಯಾಪ್ ಸೂಚ್ಯಂಕವು ಶೇಕಡಾ 0.1 ರಷ್ಟು ಕುಸಿದಿದೆ.
ರೂಪಾಯಿ 33 ಪೈಸೆ ಏರಿಕೆ: ಅಮೆರಿಕನ್ ಡಾಲರ್ ಕುಸಿತ ಮತ್ತು ಏಷ್ಯಾದ ಕರೆನ್ಸಿಗಳ ಬಲವರ್ಧನೆಯಿಂದಾಗಿ ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡು ಮಂಗಳವಾರ ಯುಎಸ್ ಡಾಲರ್ ವಿರುದ್ಧ 33 ಪೈಸೆ ಏರಿಕೆಯಾಗಿ 83.28 ಕ್ಕೆ (ತಾತ್ಕಾಲಿಕ) ಕೊನೆಗೊಂಡಿತು. ದುರ್ಬಲ ದೇಶೀಯ ಮಾರುಕಟ್ಟೆಗಳು ಮತ್ತು ಕಚ್ಚಾ ತೈಲ ಬೆಲೆಗಳ ಏರಿಕೆಯ ಕಾರಣದಿಂದ ರೂಪಾಯಿ ಏರಿಕೆಯಾಗಿದೆ ಎಂದು ಫಾರೆಕ್ಸ್ ವ್ಯಾಪಾರಿಗಳು ತಿಳಿಸಿದ್ದಾರೆ.
ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿಯು ಡಾಲರ್ ವಿರುದ್ಧ 83.33 ರಲ್ಲಿ ಪ್ರಾರಂಭವಾಯಿತು. ರೂಪಾಯಿ ಇಂಟ್ರಾ-ಡೇ ಗರಿಷ್ಠ 83.26 ಮತ್ತು ಕನಿಷ್ಠ 83.37 ರಲ್ಲಿ ವಹಿವಾಟು ನಡೆಸಿತು. ಅಂತಿಮವಾಗಿ ರೂಪಾಯಿ ಡಾಲರ್ ವಿರುದ್ಧ 83.28 (ತಾತ್ಕಾಲಿಕ) ರಲ್ಲಿ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ 33 ಪೈಸೆ ಹೆಚ್ಚಾಗಿದೆ.
ಇದನ್ನೂ ಓದಿ: ₹3 ಸಾವಿರ ಕೋಟಿ ನೀಡಿ ಒಡಿಶಾದ ಗೋಪಾಲ್ಪುರ ಬಂದರು ಪಾಲು ಖರೀದಿಸಿದ ಅದಾನಿ ಪೋರ್ಟ್ಸ್ - Adani Ports