ನವದೆಹಲಿ: ಈ ಹಿಂದೆ ಭಾರತೀಯರು ವಿದೇಶದಲ್ಲಿ ಉದ್ಯೋಗ ಅರಸುತ್ತಿದ್ದರು. ಆದರೆ, ಇದೀಗ ಈ ಮನಸ್ಥಿತಿ ಬದಲಾಗುತ್ತಿದೆ. ವಿದೇಶಿಗರೇ ಭಾರತದಲ್ಲಿ ಉದ್ಯೋಗ ಹುಡುಕುತ್ತಿದ್ದಾರೆ.
ಭಾರತ ಆರ್ಥಿಕ ಬೆಳವಣಿಗೆಯ ಜೊತೆಗೆ ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಡಿಜಿಟಲ್ ಸೇವಾ ವಲಯದಲ್ಲೂ ವಿಶೇಷವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಜೂನ್ 2021ರಿಂದ ವಿದೇಶದಿಂದ ಭಾರತಕ್ಕೆ ಉದ್ಯೋಗ ಹುಡುಕಾಟ ಪ್ರಮಾಣ ಶೇ 60 ರಷ್ಟು ಹೆಚ್ಚಾಗಿದೆ ಎಂದು ವರದಿಯೊಂದು ಗುರುವಾರ ಬಹಿರಂಗಪಡಿಸಿದೆ.
ಭಾರತ ಪ್ರತಿಭಾವಂತರ ಪ್ರಮುಖ ತಾಣವಾಗಿ ರೂಪುಗೊಳ್ಳುತ್ತಿದೆ. ಈ ನಡುವೆ ಬ್ಲೂ ಕಲರ್ ಉದ್ಯೋಗಿಗಳು ಕೂಡ ಹೊಸ ಮಾರುಕಟ್ಟೆಗಳ ಬೇಡಿಕೆಗಳಿಗೆ ತಕ್ಕಂತೆ ಹೊಂದಾಣಿಕೆ ಮಾಡುತ್ತಿದ್ದಾರೆ ಎಂದು ಜಾಗತಿಕ ನೇಮಕಾತಿ ಸಂಸ್ಥೆ ಇಂಡಿಡ್ ವರದಿ ಮಾಡಿದೆ.
ಪ್ರತಿಭೆಗಳ ವಿನಿಮಯಗಳಲ್ಲಿ ಹೆಚ್ಚಾಗಿ ಯುಎಇ, ಅಮೆರಿಕ ಮತ್ತು ಯುಕೆಗಳು ಪ್ರಮುಖವಾಗಿವೆ. 2021 ಜೂನ್ನಿಂದ 2024ರ ಜೂನ್ವರೆಗೆ ಈ ದೇಶಗಳು ಭಾರತದಲ್ಲಿ ಬೇಡಿಕೆ ಪ್ರಮಾಣವನ್ನು ಕ್ರಮವಾಗಿ ಶೇ 13, 12 ಮತ್ತು 7ರಷ್ಟು ಪ್ರಮಾಣದಲ್ಲಿ ನಡೆಸಿವೆ. ಭಾರತ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದು, ಈ ನಡುವೆ ಇಲ್ಲಿಂದ ವಿದೇಶಗಳಲ್ಲಿ ಉದ್ಯೋಗ ಹುಡುಕಾಟದ ಸಂಖ್ಯೆ ಕೂಡ ಜೂನ್ 2021-ಜೂನ್ 2024 ರ ನಡುವೆ ಶೇಕಡಾ 17ರಷ್ಟು ಕಡಿಮೆಯಾಗಿದೆ.
ಭಾರತ ಜಾಗತಿಕವಾಗಿ ಪ್ರತಿಭೆಗಳನ್ನು ಆಕರ್ಷಿಸುತ್ತಿದೆ. ವೃತ್ತಿಪರರಿಗೆ ಅವಕಾಶದ ಸ್ಥಳವಾಗಿ ರೂಪುಗೊಳ್ಳುತ್ತಿದೆ. ಆರ್ಥಿಕ ಬೆಳವಣಿಗೆಯ ವಿಶ್ವಾಸ ಮತ್ತು ಪ್ರಮುಖ ಉದ್ಯಮಗಳಲ್ಲಿ ನೇತೃತ್ವದ ಸಾಮರ್ಥ್ಯಗಳು ವಿದೇಶಿರಗನ್ನು ಸೆಳೆಯುತ್ತಿದೆ ಎಂದು ಇಂಡಿಡ್ ಇಂಡಿಯಾದ ಟ್ಯಾಲೆಂಟ್ ಸ್ಟಾಟರ್ಜಿ ಅಡ್ವೈಸರ್ ರೋಹಲ್ ಸೈಲ್ವೆಸ್ಟರ್ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ರಾಜೇಶ್ ನಂಬಿಯಾರ್ ರಾಜೀನಾಮೆ: ಕಾಗ್ನಿಜೆಂಟ್ ಕಂಪನಿಗೆ ರಾಜೇಶ್ ವಾರಿಯರ್ ಇಂಡಿಯಾ ಸಿಎಂಡಿ