ಕರ್ನಾಟಕ

karnataka

ETV Bharat / business

ಗಗನಕ್ಕೇರುತ್ತಿರುವ ಬೆಲೆಯಿಂದ ಭಾರತದಲ್ಲಿ ಕುಸಿದ ಚಿನ್ನದ ಬೇಡಿಕೆ: ಡಬ್ಲ್ಯೂಜಿಸಿ - ಭಾರತದಲ್ಲಿ ಕುಸಿತ ಚಿನ್ನದ ಬೇಡಿಕೆ

ಭಾರತೀಯರು ಚಿನ್ನದ ಮೋಹಿಗಳಾಗಿದ್ದರೂ, ಹೆಚ್ಚುತ್ತಿರುವ ಬೆಲೆ ಏರಿಕೆ, ಆಮದು ಸುಂಕ ಸೇರಿದಂತೆ ಇತರ ಅಂಶಗಳು ಅದರ ಬೇಡಿಕೆ ಕುಸಿತಕ್ಕೆ ಕಾರಣವಾಗಿದೆ.

indias-demand-for-gold-dips-3percent-in-2023
indias-demand-for-gold-dips-3percent-in-2023

By IANS

Published : Jan 31, 2024, 2:51 PM IST

Updated : Jan 31, 2024, 4:16 PM IST

ನವದೆಹಲಿ: ಭಾರತದಲ್ಲಿ ಚಿನ್ನದ ಬೇಡಿಕೆಯು ಕಳೆದ ವರ್ಷ ಅಂದರೆ 2023ರಲ್ಲಿ ಶೇ 3ರಷ್ಟು ಕುಸಿತ ಕಂಡಿದೆ. ಭಾರತದಲ್ಲಿ ಈ ಹಿಂದೆಯೆಲ್ಲಾ ಚಿನ್ನದ ಬೇಡಿಕೆ ಸಾಮಾನ್ಯವಾಗಿ 800 ರಿಂದ 900 ಟನ್​ಗಳ ಮಧ್ಯೆ ಇರುತ್ತಿತ್ತು. ಆದರೆ, 2023ರಲ್ಲಿ ಭಾರತ ಬಂಗಾರದ ಬೇಡಿಕೆ 747.5 ರಷ್ಟಾಗಿದೆ ಎಂದು ವರ್ಲ್ಡ್​​ ಗೋಲ್ಡ್​ ಕೌನ್ಸಿಲ್​ ತಿಳಿಸಿದೆ.

2022ರಲ್ಲಿ ಭಾರತದ ಚಿನ್ನದ ಬೇಡಿಕೆ 774.1 ಆಗಿತ್ತು ಎಂದು ವರದಿಯಲ್ಲಿ ಡಬ್ಲ್ಯೂಜಿಸಿ ತಿಳಿಸಿದೆ. ಭಾರತದಲ್ಲಿ ಗಗಮುಖಿಯಾಗುತ್ತಿರುವ ಬಂಗಾರದ ಬೆಲೆಯು ಈ ಕುಸಿತದಲ್ಲಿ ಸಾಕಷ್ಟು ಪ್ರಭಾವ ಹೊಂದಿದೆ. ಆದಾಗ್ಯೂ ಚಿನ್ನದ ಮೇಲೆ ಗ್ರಾಹಕರ ಒಲವು ಹೆಚ್ಚಿದೆ. ಅಕ್ಟೋಬರ್​ ದರ ಪರಿಷ್ಕರಣೆ ಬಳಿಕ ನವರಾತ್ರಿಯಲ್ಲಿ ಗ್ರಾಹಕರ ಚಿನ್ನದ ಕೊಳ್ಳುವಿಕೆ ಹೆಚ್ಚಿದೆ. ಇದಕ್ಕೆ ದೀಪಾವಳಿ ಸೇಲ್ಸ್​ ಕೂಡ ಪುಷ್ಠಿ ನೀಡಿದೆ.

ಆದಾಗ್ಯೂ ಚಿನ್ನದ ಬೆಲೆ ಡಿಸೆಂಬರ್​ನಲ್ಲಿ ಕುಸಿತ ಕಂಡಿದೆ. 2022ರ ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದಾಗ 2023ರಲ್ಲಿ ಶೇ 9ರಷ್ಟು ಕುಸಿತ ಕಂಡಿದೆ ಎಂದು ಡಬ್ಲ್ಯೂಜಿಸಿ ಪ್ರಾದೇಶಿಕ ಸಿಇಒ ಸೋಮಸುಂದರಂ ಪಿಆರ್​ ತಿಳಿಸಿದ್ದಾರೆ.

2023ರಲ್ಲಿ ಹಳದಿ ಲೋಹದ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ಕಳೆದ ಮೇನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ಗರಿಷ್ಠ 61.845 ತಲುಪಿತು. ಜಾಗತಿಕ ಮಾರುಕಟ್ಟೆಯಲ್ಲಿ ಔನ್ಸ್​​ಗೆ 2.083 ಅಮೆರಿಕನ್​ ಡಾಲರ್​ ಆಗಿತ್ತು. ಈ ಬೆಲೆ ಏರಿಕೆಯ ಟ್ರೆಂಡ್​​​ ನವೆಂಬರ್​ನಲ್ಲಿ ಮತ್ತಷ್ಟು ಹೆಚ್ಚಾಗಿದ್ದು, ನವೆಂಬರ್​​ 16ರಂದು ಚಿನ್ನದ ಬೆಲೆ 10 ಗ್ರಾಂಗೆ 61.914 ರೂ ಇತ್ತು.

ಕಳೆದ ಅಕ್ಟೋಬರ್​ನಿಂದ ಡಿಸೆಂಬರ್​​ವರೆಗಿನ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಶೇ 4ರಷ್ಟು ಕುಸಿದಿದೆ. ಆಭರಣದ ಬೇಡಿಕೆ ಕಡಿಮೆಯಾಗಿದ್ದರೂ ಹೂಡಿಕೆ ಉದ್ದೇಶದಿಂದ ಚಿನ್ನದ ನಾಣ್ಯ ಮತ್ತು ಬಾರ್​​ಗಳ ಮಾರಾಟ ಹೆಚ್ಚಿದೆ. ಈ ವರ್ಷ ಅಂದರೆ 2024ರಲ್ಲಿ ಪ್ರಸ್ತುತ ಸಕಾರಾತ್ಮಕ ಆರ್ಥಿಕ ಪರಿಸ್ಥಿತಿಯು ಚಿನ್ನದ ಬೇಡಿಕೆಗೆ ಪ್ರಯೋಜನ ನೀಡಬಹುದು. ಚಿನ್ನದ ಬೆಲೆಯು ಕಳೆದ ವರ್ಷದಂತೆ ಏರಿಕೆ ಹಾದಿ ಮುಂದುವರೆಸದೇ ಹೋದಲ್ಲಿ ಬೇಡಿಕೆ 800 ರಿಂದ 900 ಟನ್​ ಆಗಬಹುದು ಎಂಬ ಲೆಕ್ಕಾಚಾರವನ್ನು ಹಾಕಲಾಗಿದೆ.

2019 ರಿಂದ ಚಿನ್ನದ ಬೇಡಿಕೆ ದರ 700 ರಿಂದ 800 ಟನ್​ ನಡುವೆ ನಿಂತಿರಲು ಕಾರಣ ನಿರಂತರ ಬೆಲೆ ಏರಿಕೆ, ಆಮದು ಸುಂಕ ಏರಿಕೆ ಮತ್ತು ಷೇರು ಮಾರುಕಟ್ಟೆಯಾಗಿದೆ. ಭಾರತಕ್ಕೆ ಸ್ವಿಜರ್ಲೆಂಡ್​ ಮತ್ತು ಯುನೈಡೆಟ್​​ ಅರಬ್​ ಎಮಿರೇಟ್ಸ್​​ ಹೆಚ್ಚು ಬಂಗಾರ ಪೂರೈಸುವ ದೇಶಗಳಾಗಿದೆ.

ವರದಿಯಲ್ಲಿ ಗಮನಿಸಿದಂತೆ ಜಾಗತಿಕ ಆಭರಣ ಮಾರುಕಟ್ಟೆಯು ದಾಖಲೆಯ ಬೆಲೆ ಏರಿಕೆ ನಡುವೆ ಗಮನಾರ್ಹವಾಗಿ ಸ್ಥಿತಿಸ್ಥಾಪಕವಾಗಿದೆ. ಏಕೆಂದರೆ, ವರ್ಷದಿಂದ ವರ್ಷಕ್ಕೆ ಬೇಡಿಕೆ 3 ಟನ್​ಗಳಷ್ಟು ಹೆಚ್ಚಿದೆ ಇದರಲ್ಲಿ ಚೀನಾವೂ ಪ್ರಮುಖ ಪಾತ್ರವನ್ನು ಹೊಂದಿದ್ದು, ಇಲ್ಲಿ ಬಂಗಾರದ ಬೇಡಿಕೆ ಶೇ 17ರಷ್ಟು ಹೆಚ್ಚಿಸಿಕೊಳ್ಳುವ ಮೂಲಕ ಭಾರತದ ಶೇ 9ರಷ್ಟು ಇಳಿಕೆಯನ್ನು ಸರಿದೂಗಿಸಿದೆ.

ಇದನ್ನೂ ಓದಿ: ಚಿನ್ನ, ಬೆಳ್ಳಿ ಆಮದು ಸುಂಕ ಶೇ 15ಕ್ಕೆ ಏರಿಕೆ

Last Updated : Jan 31, 2024, 4:16 PM IST

ABOUT THE AUTHOR

...view details