ಕರ್ನಾಟಕ

karnataka

ETV Bharat / business

ಪ್ಯಾನ್​-ಆಧಾರ್‌ ಲಿಂಕ್‌ಗೆ ಮೇ 31 ಡೆಡ್​ಲೈನ್: ತಪ್ಪಿದರೆ! - PAN Aadhaar Link

ಪ್ಯಾನ್​ ಕಾರ್ಡ್‌-ಆಧಾರ್‌ ಲಿಂಕ್ ಕುರಿತು ಆದಾಯ ತೆರಿಗೆ ಇಲಾಖೆ ಮಹತ್ವದ ಸೂಚನೆ ನೀಡಿದೆ.

TDS deduction  IT DEPARTMENT
ಆದಾಯ ತೆರಿಗೆ ಇಲಾಖೆ (ETV Bharat)

By PTI

Published : May 29, 2024, 8:46 AM IST

ನವದೆಹಲಿ:ಹೆಚ್ಚಿನ ದರದಲ್ಲಿ ತೆರಿಗೆ ಕಡಿತ ತಪ್ಪಿಸಲು ಮೇ 31ರೊಳಗೆ ಸಾರ್ವಜನಿಕರು ತಪ್ಪದೇ ಪ್ಯಾನ್ ಕಾರ್ಡ್​ನೊಂದಿಗೆ ಆಧಾರ್‌ ಸಂಖ್ಯೆಯನ್ನು ಲಿಂಕ್ ಮಾಡುವಂತೆ ಆದಾಯ ತೆರಿಗೆ ಇಲಾಖೆ (ಐಟಿ) ಮಂಗಳವಾರ ತೆರಿಗೆದಾರರಿಗೆ ತಿಳಿಸಿದೆ.

ಆದಾಯ ತೆರಿಗೆ ನಿಯಮಗಳ ಪ್ರಕಾರ, ಶಾಶ್ವತ ಖಾತೆ ಸಂಖ್ಯೆ (PAN) ಅನ್ನು ಬಯೋಮೆಟ್ರಿಕ್ ಆಧಾರ್‌ನೊಂದಿಗೆ ಲಿಂಕ್ ಮಾಡದೇ ಇದ್ದರೆ, ಟಿಡಿಎಸ್ (ಮೂಲದಲ್ಲೇ ತೆರಿಗೆ ಕಡಿತ) ಅನ್ನು ಅನ್ವಯಿಸುವ ದರಕ್ಕಿಂತ ಎರಡು ಪಟ್ಟು ಕಡಿತಗೊಳಿಸಲಾಗುತ್ತದೆ. ಅಂದರೆ, ಶೇ.10ರ ಬದಲಾಗಿ ಶೇ.20ರಷ್ಟು ಟಿಡಿಎಸ್‌ ಮಾಡಲಾಗುತ್ತದೆ ಎಂದು ಹೇಳಿದೆ.

ಕಳೆದ ತಿಂಗಳು ಆದಾಯ ತೆರಿಗೆ ಇಲಾಖೆ ಈ ಕುರಿತು ಮೊದಲ ಸುತ್ತೋಲೆ ಹೊರಡಿಸಿದೆ. ತೆರಿಗೆದಾರರು ಮೇ 31ರೊಳಗೆ ತಮ್ಮ ಪ್ಯಾನ್ ಜೊತೆಗೆ ಆಧಾರ್‌ ಲಿಂಕ್ ಮಾಡಿದರೆ ಹೆಚ್ಚಿನ ಟಿಡಿಎಸ್‌ ಕಡಿತಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದಿತ್ತು. ಇದೇ ವೇಳೆ, ಬ್ಯಾಂಕ್‌ಗಳು ಹಾಗು ಹಣಕಾಸು ವ್ಯವಹಾರ ನಡೆಸುವ ಇತರೆ ಸಂಸ್ಥೆಗಳು ಕೂಡಾ ವ್ಯವಹಾರದ ವಿವರವಾದ ಮಾಹಿತಿ ಸಲ್ಲಿಸಬೇಕು ಎಂದು ಸೂಚಿಸಿತ್ತು.

ಇದನ್ನೂ ಓದಿ:ಸಕ್ಕರೆ ಉತ್ಪಾದನೆ ಕುಸಿತ ಸಂಭವ: ಜುಲೈ ನಂತರವೇ ರಫ್ತು ಅನುಮತಿ ಬಗ್ಗೆ ನಿರ್ಧಾರ - Sugar exports

ABOUT THE AUTHOR

...view details