ನವದೆಹಲಿ: ವಿವಾಹ ಮಹೋತ್ಸವಗಳ ಸರಣಿ ಆರಂಭವಾಗಿದೆ. ಸ್ಥಳೀಯ ಆಭರಣ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳ ಬಳಿ ಖರೀದಿ ಭರಾಟೆ ಆರಂಭವಾಗಿದೆ. ಕಳೆದೆರಡು ದಿನಗಳಿಂದ ಕುಸಿತದ ಹಾದಿ ಹಿಡಿದಿದ್ದ ಬಂಗಾರದ ಬೆಲೆಯಲ್ಲಿ ಶುಕ್ರವಾರ 500 ರೂದಷ್ಟು ಏರಿಕೆ ಆಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪರಿಶುದ್ಧ 24 ಕ್ಯಾರೆಟ್ ಬಂಗಾರಕ್ಕೆ 80,000 ರೂ.ಗಳ ಗಡಿಯಲ್ಲಿ ಮಾರಾಟವಾಗುತ್ತಿದೆ.
ನವದೆಹಲಿಯಲ್ಲಿ ಹಳದಿ ಲೋಹದ ಬೆಲೆ: 99.9 ರಷ್ಟು ಶುದ್ಧತೆಯ ಬೆಲೆಬಾಳುವ ಲೋಹವು ಗುರುವಾರ 10 ಗ್ರಾಂಗೆ 79,500 ರೂಗೆ ವಹಿವಾಟು ನಡೆಸಿತು. ಬೆಳ್ಳಿ ಕೂಡ ಪ್ರತಿ ಕೆಜಿಗೆ ನಿನ್ನೆ ದರ 93,800 ರೂ.ಗೆ ಹೋಲಿಸಿದರೆ, ಇಂದು 800 ರೂ. ಏರಿಕೆ ಕಂಡು 94,600 ರೂ.ದಲ್ಲಿ ವ್ಯವಹಾರ ನಡೆಸಿತು.
ಇನ್ನು 99.5 ಶುದ್ಧತೆಯ ಚಿನ್ನದ ಬೆಲೆ 10 ಗ್ರಾಂಗೆ 500 ರೂ. ಏರಿಕೆ ಕಂಡು 79,600ಕ್ಕೆ ಜಿಗಿತ ಕಂಡಿತು. ಗುರುವಾರ 10 ಗ್ರಾಂಗೆ 79,100 ರೂ. ದರ ಇತ್ತು.
ಬೆಂಗಳೂರಿನಲ್ಲಿ ಎಷ್ಟಿದೆ ಬಂಗಾರದ ಬೆಲೆ:ಸಿಲಿಕಾನ್ ಸಿಟಿಯಲ್ಲಿ ನಿನ್ನೆ 22 ಕ್ಯಾರೆಟ್ನ 10 ಗ್ರಾಂನ ಬಂಗಾರದ ಬೆಲೆ 72 ಸಾವಿರ ಇತ್ತು. ಅದು ಇಂದು 850 ರೂ ಏರಿಕೆ ಕಂಡು 72850 ರೂಗೆ ಏರಿಕೆ ಕಂಡಿದೆ.
ಅದೇ ರೀತಿ 24 ಕ್ಯಾರೆಟ್ ಬಂಗಾರ ಬೆಲೆ 910 ರೂ ಏರಿಕೆ ಕಂಡಿದೆ. ನಿನ್ನೆ 78560 ರೂಗೆ ಮಾರಾಟ ವಾಗುತ್ತಿದ್ದ ಹಳದಿ ಲೋಹ ಇಂದು 910 ರೂ ಏರಿಕೆ ದಾಖಲಿಸಿ 79,470 ರೂಗೆ ವಹಿವಾಟು ನಡೆಸಿತು.
ಮಾರುಕಟ್ಟೆ ತಜ್ಞರು ಹೇಳುವುದಿಷ್ಟು: ಮದುವೆ ಸೀಸನ್‌ಗೆ ಸ್ಥಳೀಯ ಆಭರಣ ವ್ಯಾಪಾರದಿಂದ ಬೇಡಿಕೆ ಹೆಚ್ಚಾಗಿರುವುದರಿಂದ ಈ ಏರಿಕೆ ಅಂತಾರೆ ವ್ಯಾಪಾರಿಗಳು. ಅದಲ್ಲದೇ ಅಮೆರಿಕದ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿದಿದ್ದರಿಂದ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆ ಹೆಚ್ಚಳ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಗಾರ ಮತ್ತೆ ಏರಿಕೆಯತ್ತ ಸಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್ (MCX)ನ ಭವಿಷ್ಯದ ವಹಿವಾಟಿನಲ್ಲಿ ಡಿಸೆಂಬರ್ ವಿತರಣೆಗಾಗಿ ಚಿನ್ನದ ಒಪ್ಪಂದಗಳು ರೂ 198 ಅಥವಾ ಶೇಕಡಾ 0.26 ರಷ್ಟು ಕುಸಿದು 10 ಗ್ರಾಂಗೆ ರೂ 77,213 ಕ್ಕೆ ವ್ಯವಹಾರ ನಡೆಸಿದವು.