ನವದೆಹಲಿ:ಹಿಂಡನ್ಬರ್ಗ್ ವರದಿಯಿಂದ ಭಾರೀ ಆಸ್ತಿ ನಷ್ಟ ಕಂಡಿದ್ದ ಉದ್ಯಮಿ ಗೌತಮ್ ಅದಾನಿ ಸಿರಿವಂತರ ಪಟ್ಟಿಯಲ್ಲಿ ಮತ್ತೆ ಮೇಲಕ್ಕೆ ಏರುತ್ತಿದ್ದಾರೆ. ಹೊಸ ಅಂಕಿಅಂಶಗಳ ಪ್ರಕಾರ, ಅವರ ಕಂಪನಿಯ ಷೇರುಗಳಲ್ಲಿ ಭಾರೀ ಏರಿಕೆಯಾಗಿದ್ದು, ಏಷ್ಯಾದ ನಂಬರ್ 1 ಸಿರಿವಂತ ಪಟ್ಟವನ್ನು ಮರಳಿ ಪಡೆದಿದ್ದಾರೆ. ಈ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿದ್ದಾರೆ.
ಅದಾನಿ ಗ್ರೂಪ್ನ ಸೇಬು ಉದ್ಯಮದಿಂದ ಹಿಡಿದು ವಿಮಾನ ನಿಲ್ದಾಣದವರೆಗಿನ ಕಂಪನಿಗಳ ಷೇರುಗಳು ಪ್ರಗತಿ ಕಂಡಿವೆ. ಇದರಿಂದ ಅವರು ಸಿರಿವಂತರ ಪಟ್ಟಿಯಲ್ಲಿ ಮತ್ತೆ ಅಧಿಪತ್ಯ ಸಾಧಿಸುತ್ತಿದ್ದಾರೆ ಎಂದು ಬ್ಲೂಮ್ಬರ್ಗ್ ಬಿಲಿಯನೇರ್ ಇಂಡೆಕ್ಸ್ ತಿಳಿಸಿದೆ.
ಅಮೆರಿಕದ ಉದ್ಯಮಿ ಜೆಫರೀಸ್ ಅವರು ಮುಂದಿನ 10 ವರ್ಷಗಳಲ್ಲಿ 90 ಬಿಲಿಯನ್ ಅಮೆರಿಕನ್ ಡಾಲರ್ ಬಂಡವಾಳ ಹೂಡಿಕೆಯನ್ನು ವಿಸ್ತರಿಸಿದ ಬಳಿಕ ಅದಾನಿ ಗ್ರೂಪ್ನ ಎಲ್ಲ ಕಂಪನಿಗಳ ಷೇರುಗಳು ಶುಕ್ರವಾರ ಶೇಕಡಾ 14ರಷ್ಟು ಏರಿಕೆ ಕಂಡಿವೆ. ಇದರಿಂದ 111 ಬಿಲಿಯನ್ ಡಾಲರ್ ನಿವ್ವಳ ಆಸ್ತಿಯೊಂದಿಗೆ ಗೌತಮ್ ಅದಾನಿ ವಿಶ್ವದ 11ನೇ ಸಿರಿವಂತರಾಗಿ ಹೊರಹೊಮ್ಮಿದರೆ, 109 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಮುಖೇಶ್ ಅಂಬಾನಿ ವಿಶ್ವದ ನಂಬರ್ 12ರಲ್ಲಿ ಮುಂದುವರಿದರು.