ಮುಂಬೈ: ಭಾರತದ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ-50 ಶುಕ್ರವಾರದ ವಹಿವಾಟಿನಲ್ಲಿ ಸಮತಟ್ಟಾಗಿ ಕೊನೆಗೊಂಡಿವೆ. ಮಾಹಿತಿ ತಂತ್ರಜ್ಞಾನ (ಐಟಿ), ಬ್ಯಾಂಕ್, ಲೋಹ ಮತ್ತು ತೈಲ ಮತ್ತು ಅನಿಲ ಷೇರುಗಳ ಮಾರಾಟದಿಂದ ಮಾರುಕಟ್ಟೆಗಳು ಅಲ್ಪ ಇಳಿಕೆಯಾದವು.
ಸಕಾರಾತ್ಮಕ ಜಾಗತಿಕ ಸೂಚನೆಗಳ ನಡುವೆ ಬೆಂಚ್ ಮಾರ್ಕ್ ಸೂಚ್ಯಂಕಗಳು ಶುಕ್ರವಾರದ ಅಧಿವೇಶನದಲ್ಲಿ ಸಣ್ಣ ಲಾಭದೊಂದಿಗೆ ಪ್ರಾರಂಭವಾದವು. ನಿಫ್ಟಿ-50 ಸೂಚ್ಯಂಕವು ಸತತ ಐದನೇ ದಿನವೂ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿತ್ತು. ಜಾಗತಿಕ ಈಕ್ವಿಟಿ ರ್ಯಾಲಿಯ ಮಧ್ಯೆ ಐಟಿ ಮತ್ತು ಬ್ಯಾಂಕ್ ಷೇರುಗಳ ಏರಿಕೆಯಿಂದ ಆರಂಭಿಕ ವಹಿವಾಟಿನಲ್ಲಿ ನಿಫ್ಟಿ-50 ಉತ್ತೇಜಿಸಲ್ಪಟ್ಟಿದ್ದರೂ, ಲಾಭದ ಬುಕಿಂಗ್ ನಡುವೆ ಅದು ಫ್ಲಾಟ್ ಆಗಿ ಕೊನೆಗೊಂಡಿತು.
30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 15.44 ಪಾಯಿಂಟ್ಸ್ ಅಥವಾ ಶೇ 0.02 ರಷ್ಟು ಕುಸಿದು 73,142.80 ಮಟ್ಟದಲ್ಲಿ ಕೊನೆಗೊಂಡರೆ, ನಿಫ್ಟಿ-50 4.75 ಪಾಯಿಂಟ್ಸ್ ಅಥವಾ ಶೇ 0.02 ರಷ್ಟು ಕುಸಿದು 22,212.70 ಮಟ್ಟದಲ್ಲಿ ಕೊನೆಗೊಂಡಿತು. ವಿಶಾಲ ಮಾರುಕಟ್ಟೆಯಲ್ಲಿ ನಿಫ್ಟಿ ಮಿಡ್ ಕ್ಯಾಪ್-100 ಶೇಕಡಾ 0.31 ರಷ್ಟು ಏರಿಕೆ ಕಂಡರೆ, ನಿಫ್ಟಿ ಸ್ಮಾಲ್ ಕ್ಯಾಪ್-100 ಶೇಕಡಾ 0.38 ರಷ್ಟು ಹೆಚ್ಚಾಗಿದೆ.