ಮುಂಬೈ(ಮಹಾರಾಷ್ಟ್ರ):ಅದಾನಿ ಸಮೂಹದ ಷೇರುಗಳು ಮತ್ತೊಮ್ಮೆ ಮಾರಾಟದ ಒತ್ತಡ ಎದುರಿಸುತ್ತಿವೆ. ಲಂಚದ ಆರೋಪದ ಮೇಲೆ US ಸರ್ಕಾರವು ಗುಂಪು ತನಿಖೆ ನಡೆಸುತ್ತಿದೆ ಎಂಬ ಸುದ್ದಿಯ ಹಿನ್ನೆಲೆ ಅವರ ಷೇರುಗಳ ಮೌಲ್ಯವು ಕುಸಿತ ಕಾಣುತ್ತಿದೆ. ಸಮೂಹದ ಎಲ್ಲ ಕಂಪನಿಗಳ ಷೇರುಗಳು ಆರಂಭದಲ್ಲಿ ಭಾರೀ ನಷ್ಟವನ್ನು ಎದುರಿಸಿದರೂ ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಚೇತರಿಸಿಕೊಂಡು ಕೊಂಚ ನಷ್ಟದೊಂದಿಗೆ ಮುಂದುವರಿದವು.
ಪ್ರಮುಖ ಕಂಪನಿಯಾದ ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಬೆಳಗ್ಗೆ 4 ಪ್ರತಿಶತದಷ್ಟು ಕಳೆದುಕೊಂಡಿದ್ದರೆ, ಅದು ಈಗ 1 ಪ್ರತಿಶತಕ್ಕೆ ಚೇತರಿಸಿಕೊಂಡಿತ್ತು. ಅದಾನಿ ಪೋರ್ಟ್ಸ್ ಅಂಡ್ ಎಕನಾಮಿಕ್ ಝೋನ್ ಲಿಮಿಟೆಡ್ ಒಂದು ಹಂತದಲ್ಲಿ ಶೇ.3ರಷ್ಟು ಕುಸಿದಿದ್ದು, ಕೊನೆಗೆ ಶೇ.1.5ರಷ್ಟು ನಷ್ಟದೊಂದಿಗೆ ವಹಿವಾಟು ನಡೆಸಿತು. ಅದಾನಿ ವಿಲ್ಮಾರ್, ಅದಾನಿ ಪವರ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಎನರ್ಜಿ ಸಲ್ಯೂಷನ್ಸ್ ಹೀಗೆ ಎಲ್ಲಾ ಷೇರುಗಳು ಕುಸಿತ ಕಂಡಿವೆ. ಮತ್ತು ಈ ಗುಂಪಿಗೆ ಸೇರಿದ ಡಾಲರ್ ಬಾಂಡ್‌ಗಳು ಸಹ ಮೌಲ್ಯದಲ್ಲಿ ಕಡಿಮೆಯಾಗಿವೆ.