ಕರ್ನಾಟಕ

karnataka

ETV Bharat / business

37.5 ಕೋಟಿ ಗ್ರಾಹಕರ ಡೇಟಾ ಸೋರಿಕೆ ಆರೋಪ ಅಲ್ಲಗಳೆದ ಏರ್​ಟೆಲ್ - Airtel Denies Data Breach - AIRTEL DENIES DATA BREACH

ತನ್ನ ಗ್ರಾಹಕರ ಖಾಸಗಿ ಮಾಹಿತಿಯನ್ನು ಕದಿಯಲಾಗಿದೆ ಎಂಬ ಆರೋಪಗಳನ್ನು ಏರ್​ಟೆಲ್ ನಿರಾಕರಿಸಿದೆ.

37.5 ಕೋಟಿ ಗ್ರಾಹಕರ ಡೇಟಾ ಸೋರಿಕೆ ಆರೋಪ ಅಲ್ಲಗಳೆದ ಏರ್​ಟೆಲ್
ಏರ್‌ಟೆಲ್ (IANS)

By ETV Bharat Karnataka Team

Published : Jul 5, 2024, 4:45 PM IST

ನವದೆಹಲಿ: 37.5 ಕೋಟಿ ಏರ್​ಟೆಲ್ ಗ್ರಾಹಕರ ಖಾಸಗಿ ಮಾಹಿತಿಯನ್ನು ಕದ್ದು ಡಾರ್ಕ್​ ವೆಬ್​ನಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂಬ ಆರೋಪಗಳನ್ನು ಭಾರ್ತಿ ಏರ್​ಟೆಲ್ ಅಲ್ಲಗಳೆದಿದೆ. ಡಾರ್ಕ್ ವೆಬ್​ನಲ್ಲಿ 37.5 ಕೋಟಿ ಭಾರತೀಯ ಬಳಕೆದಾರರ ಡೇಟಾವನ್ನು ಮಾರಾಟಕ್ಕೆ ಇಡಲಾಗಿದೆ ಎಂಬ ಆರೋಪವು ಪಟ್ಟಭದ್ರ ಹಿತಾಸಕ್ತಿಗಳಿಂದ ಏರ್​ಟೆಲ್​ನ ಹೆಸರು ಕೆಡಿಸುವ ಹತಾಶ ಪ್ರಯತ್ನದ ಹೊರತಾಗಿ ಬೇರೇನೂ ಅಲ್ಲ ಎಂದು ಕಂಪನಿ ಹೇಳಿದೆ.

37.5 ಕೋಟಿ ಏರ್​ ಟೆಲ್ ಬಳಕೆದಾರರ ಫೋನ್ ಸಂಖ್ಯೆ, ಇಮೇಲ್, ವಿಳಾಸ, ಹುಟ್ಟಿದ ದಿನಾಂಕ, ತಂದೆಯ ಹೆಸರು ಮತ್ತು ಆಧಾರ್ ಸಂಖ್ಯೆ ಸೇರಿದಂತೆ ಎಲ್ಲ ಖಾಸಗಿ ವಿವರಗಳು ಡಾರ್ಕ್ ವೆಬ್​ನಲ್ಲಿ ಮಾರಾಟಕ್ಕೆ ಲಭ್ಯವಿವೆ ಎಂದು ಹೇಳಲಾಗಿತ್ತು. ಆದರೆ ಈ ಆರೋಪಗಳನ್ನು ದೃಢೀಕರಿಸಲು ಸಾಧ್ಯವಾಗಿಲ್ಲ.

"ಏರ್​ಟೆಲ್ ಗ್ರಾಹಕರ ಡೇಟಾವನ್ನು ಹ್ಯಾಕ್ ಮಾಡಲಾಗಿದೆ ಎಂಬ ಆರೋಪದ ವರದಿಗಳು ಕೇಳಿ ಬರುತ್ತಿವೆ. ಈ ಬಗ್ಗೆ ನಾವು ಸಮಗ್ರ ತನಿಖೆ ನಡೆಸಿದ್ದೇವೆ ಮತ್ತು ಏರ್​ಟೆಲ್ ಕಡೆಯಿಂದ ಯಾವುದೇ ಗ್ರಾಹಕರ ಮಾಹಿತಿ ಸೋರಿಕೆಯಾಗಿಲ್ಲ ಎಂಬುದು ನಮಗೆ ಖಚಿತವಾಗಿದೆ" ಎಂದು ಏರ್​ಟೆಲ್ ವಕ್ತಾರರು ಶುಕ್ರವಾರ ಐಎಎನ್ಎಸ್​ಗೆ ತಿಳಿಸಿದರು.

ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಡಾರ್ಕ್ ವೆಬ್ ಇನ್ಫಾರ್ಮರ್ ಹ್ಯಾಂಡಲ್ ಪ್ರಕಾರ- 'ಕ್ಸೆನ್ಜೆನ್' (xenZen) ಎಂದು ಗುರುತಿಸಲ್ಪಟ್ಟ ಆರೋಪಿಯು ಡಾರ್ಕ್ ವೆಬ್​ನ ಬ್ರೀಚ್ ಫೋರಂಸ್ ಎಂಬ ಸಮುದಾಯದಲ್ಲಿ ಏರ್​ಟೆಲ್ ಬಳಕೆದಾರರ ಡೇಟಾವನ್ನು ಮಾರಾಟ ಮಾಡುವುದಾಗಿ ಹೇಳಿಕೊಂಡಿದ್ದಾನೆ. ಈ ಮಾಹಿತಿಗೆ 50 ಸಾವಿರ ಡಾಲರ್​ ಬೆಲೆ ನಿಗದಿಪಡಿಸಲಾಗಿದೆ ಎಂದು ಹೇಳಲಾಗಿದೆ.

ಜಿಯೋ ಮತ್ತು ವೊಡಾಫೋನ್ ಐಡಿಯಾದಂತಹ ಇತರ ಪ್ರಮುಖ ಭಾರತೀಯ ಟೆಲಿಕಾಂ ಕಂಪನಿಗಳ ಚಂದಾದಾರರ ಡೇಟಾಬೇಸ್​ಗಳನ್ನು ಕಳವು ಮಾಡಲಾಗಿತ್ತು ಎಂದು ಈ ಹಿಂದೆ ಅನೇಕ ಬಾರಿ ಆರೋಪಿಸಲಾಗಿದೆ. ವೈಯಕ್ತಿಕ ಮಾಹಿತಿಯ ಸೋರಿಕೆಯಿಂದ ಅಂಥ ವ್ಯಕ್ತಿಯ ಐಡೆಂಟಿಟಿ ದುರುಪಯೋಗವಾಗಬಹುದು, ಆತನಿಗೆ ಹಣಕಾಸು ವಂಚನೆಯಾಗಬಹುದು ಅಥವಾ ಅನಗತ್ಯ ಮಾರ್ಕೆಟಿಂಗ್ ಕರೆಗಳು ಬರಲಾರಂಭಿಸುವುದು ಸೇರಿದಂತೆ ಇನ್ನೂ ಹಲವಾರು ವಿನಾಶಕಾರಿ ಪರಿಣಾಮಗಳು ಎದುರಾಗಬಹುದು.

ನೀವು ಏರ್​ಟೆಲ್ ಬಳಕೆದಾರರಾಗಿರಲಿ ಅಥವಾ ಇಲ್ಲದಿರಲಿ, ಭಾರತೀಯ ಕಂಪನಿಗಳಿಗೆ ಸೇರಿದ ಡೇಟಾ ಈ ಹಿಂದೆ ಸೋರಿಕೆಯಾಗಿದೆ ಅಥವಾ ಹ್ಯಾಕ್ ಮಾಡಲಾಗಿದೆ ಎಂಬುದನ್ನು ಗಮನಿಸುವುದು ಮುಖ್ಯ. ಹೀಗಾಗಿ ನಿಮ್ಮ ಡೇಟಾವನ್ನು ಸುರಕ್ಷಿತವಾಗಿಡಲು ನೀವು ಸೈಬರ್ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ.

ಇದನ್ನೂ ಓದಿ : 5 ವರ್ಷದಲ್ಲಿ ಬೆಂಗಳೂರಿನ ವಸತಿ ಕಟ್ಟಡಗಳ ಬೆಲೆ ಶೇ 57ರಷ್ಟು ಹೆಚ್ಚಳ - Bengaluru Residential Prices

ABOUT THE AUTHOR

...view details