ನವದೆಹಲಿ:ಸ್ಟಾರ್ಟ್ಅಪ್ಗಳು 'ವಿಕಸಿತ ಭಾರತ್' ಅಭಿಯಾನದ ರಾಯಭಾರಿಗಳಾಗಿದ್ದು, 2029ರ ವೇಳೆಗೆ ದೇಶದಲ್ಲಿ ಕನಿಷ್ಠ 10-15 ಲಕ್ಷ ಸ್ಟಾರ್ಟ್ಅಪ್ಗಳು ಮತ್ತು ಸುಮಾರು 500 ಯುನಿಕಾರ್ನ್ಗಳು ಇರಲಿವೆ ಎಂದು ಬಿಜೆಪಿ ಮುಂಬೈ ಪ್ರದೇಶ ಉಪಾಧ್ಯಕ್ಷ ಹಿತೇಶ್ ಜೈನ್ ಮಂಗಳವಾರ ಇಲ್ಲಿ ಹೇಳಿದರು.
'ವಿಕಸಿತ ಭಾರತ್ ಸ್ಟಾರ್ಟ್ಅಪ್ ಮಹಾಕುಂಭ 2024' ಸಮಾವೇಶದಲ್ಲಿ ಐಎಎನ್ಎಸ್ ಜೊತೆ ಮಾತನಾಡಿದ ಜೈನ್, 2047ರ ವೇಳೆಗೆ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಮತ್ತು ಸ್ಟಾರ್ಟ್ಅಪ್ಗಳು ಆರ್ಥಿಕತೆ ಬೆಳವಣಿಗೆಯ ಪ್ರಮುಖ ಮಾರ್ಗವಾಗಲಿವೆ ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಭಾವನೆಯಾಗಿದೆ ಎಂದರು.
"2014ರಲ್ಲಿ ದೇಶದಲ್ಲಿ ಕೇವಲ 350 ಸ್ಟಾರ್ಟ್ಅಪ್ಗಳಿದ್ದವು. ಆದರೆ ಇಂದು ಹಲವಾರು ವಿಭಿನ್ನ ವಲಯಗಳಲ್ಲಿ 1.25 ಲಕ್ಷಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳ ಶ್ರೀಮಂತ ಮತ್ತು ಅದ್ಭುತ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ದೇಶ ಹೊಂದಿದೆ. ಮುಂದಿನ ಐದು ವರ್ಷಗಳಲ್ಲಿ ನಾವು ಕನಿಷ್ಠ 10-15 ಲಕ್ಷ ಸ್ಟಾರ್ಟ್ಅಪ್ಗಳನ್ನು ಹೊಂದಲಿದ್ದೇವೆ" ಎಂದು ಅವರು ನುಡಿದರು.
'ಸ್ಟಾರ್ಟ್ಅಪ್ ಮಹಾಕುಂಭ 2024' ನಲ್ಲಿ ಹಾಜರಿರುವ ಸಾವಿರಾರು ನವೋದ್ಯಮಿಗಳು ಮತ್ತು ಹೂಡಿಕೆದಾರರು ವಿಕಸಿತ ಭಾರತ್ ಕಲ್ಪನೆಯ ಬಗ್ಗೆ ಭರವಸೆ ಹೊಂದಿದ್ದು, ಉಜ್ವಲ ಭವಿಷ್ಯವನ್ನು ಅವರು ಎದುರು ನೋಡುತ್ತಿದ್ದಾರೆ ಎಂದು ಜೈನ್ ತಿಳಿಸಿದರು.