ಕರ್ನಾಟಕ

karnataka

ETV Bharat / bharat

ಪರಸ್ಪರ ಹೆಲ್ಮೆಟ್ ಧರಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡ ಯುವ ಜೋಡಿ! ಇದಕ್ಕೆ ಕಾರಣ ಕುಟುಂಬದಲ್ಲಿ ನಡೆದ ದುರಂತ

ರಸ್ತೆ ಅಪಘಾತದಲ್ಲಿ ತಂದೆಯನ್ನು ಕಳೆದುಕೊಂಡ ಯುವಕನೋರ್ವ ಉಂಗುರದ ಜೊತೆಗೆ ಹೆಲ್ಮೆಟ್ ಧರಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ.

ENGAGEMENT WHILE WEARING HELMET
ಪರಸ್ಪರ ಹೆಲ್ಮೆಟ್ ಧರಿಸಿ ನಿಶ್ಚಿತಾರ್ಥ ಮಾಡಿಕೊಂಡ ಯುವ ಜೋಡಿ (ETV Bharat)

By ETV Bharat Karnataka Team

Published : Nov 28, 2024, 11:30 AM IST

ರಾಜನಂದಗಾಂವ್(ಛತ್ತೀಸ್‌ಗಢ):ಇಲ್ಲಿನ ರಾಜನಂದಗಾಂವ್​ನಲ್ಲಿ ಯುವ ಜೋಡಿಯೊಂದು ಪರಸ್ಪರ ಹೆಲ್ಮೆಟ್ ಧರಿಸಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ವಿಶೇಷವಾಗಿ ಗಮನ ಸೆಳೆದಿದೆ.

ರಾಜನಂದಗಾಂವ್ ಜಿಲ್ಲೆಯ ಜರ್ವಾಹಿ ಗ್ರಾಮದ ಬೀರೇಂದ್ರ ಸಾಹು ಮತ್ತು ಕರಿಯಾಟೋಲಾ ಗ್ರಾಮದ ನಿವಾಸಿ ಜ್ಯೋತಿ ಸಾಹು ಹೆಲ್ಮೆಟ್ ಧರಿಸಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ.

ಹೆಲ್ಮೆಟ್ ಧರಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡ ಜೋಡಿ (ETV Bharat)

ಪ್ರತಿಯೊಬ್ಬರ ಜೀವವೂ ಅಮೂಲ್ಯ. ಹೆಲ್ಮೆಟ್‌ ಧರಿಸಿ ನಿಮ್ಮ ಪ್ರಾಣವನ್ನು ನೀವೇ ಕಾಪಾಡಿಕೊಳ್ಳಿ. ಬೈಕ್‌ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ ಎಂಬ ಜಾಗೃತಿ ಸಂದೇಶದ ಹಿನ್ನೆಲೆಯಲ್ಲಿ ಬೀರೇಂದ್ರ ಮತ್ತು ಜ್ಯೋತಿ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡರು. ಯುವ ಜೋಡಿಯ ಫೋಟೋ ಮತ್ತು ವಿಡಿಯೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ.

ನಿಶ್ಚಿತಾರ್ಥಕ್ಕೂ ಮುನ್ನ ಇಬ್ಬರೂ ಮೊದಲು ಪರಸ್ಪರ ಉಂಗುರಗಳನ್ನು ಬದಲಾಯಿಸಿಕೊಂಡರು. ಬಳಿಕ ಹೆಲ್ಮೆಟ್ ಧರಿಸಿ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಅಲ್ಲದೇ, ಎಲ್ಲರೂ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರಲ್ಲಿ ಮನವಿ ಮಾಡಿದರು. ಸಾರ್ವಜನಿಕರು ಕೂಡಾ ಇವರ ಜಾಗೃತಿ ಸಂದೇಶಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪರಸ್ಪರ ಹೆಲ್ಮೆಟ್ ಧರಿಸಿ ನಿಶ್ಚಿತಾರ್ಥ ಮಾಡಿಕೊಂಡ ಯುವ ಜೋಡಿ (ETV Bharat)

ತಂದೆಯ ಸಾವಿನ ಬಳಿಕ ಹೆಲ್ಮೆಟ್‌ ಜಾಗೃತಿ:ಬೀರೇಂದ್ರ ಅವರ ತಂದೆ ಪಂಚರಾಮ್ ಗ್ರಾಮ ಪಂಚಾಯತಿ ಕಾರ್ಯದರ್ಶಿಯಾಗಿದ್ದರು. 2022ರಲ್ಲಿ ಕಾರ್ಯನಿಮಿತ್ತ ಅವಸರದಲ್ಲಿ ಬೈಕ್​ನಲ್ಲಿ ತೆರಳಿ ಮರಳಿ ಮನೆಗೆ ವಾಪಸಾಗುತ್ತಿದ್ದಾಗ ಅಪರಿಚಿತ ವಾಹನ ಅವರಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಹೆಲ್ಮೆಟ್ ಧರಿಸದ ಕಾರಣ ಪಂಚರಮ್ ತಲೆಗೆ ಗಂಭೀರವಾದ ಗಾಯವಾಗಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ನಿಧನರಾಗಿದ್ದರು. ತಂದೆ ಕಳೆದುಕೊಂಡ ಬೀರೇಂದ್ರ ಹಾಗೂ ಕುಟುಂಬದ ಸದಸ್ಯರು ಅಂದಿನಿಂದ ಹೆಲ್ಮೆಟ್ ಧರಿಸುವ ಬಗ್ಗೆ ಜನರಲ್ಲಿ ನಾನಾ ಮಾರ್ಗಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ಪರಸ್ಪರ ಹೆಲ್ಮೆಟ್ ಧರಿಸಿ ನಿಶ್ಚಿತಾರ್ಥ (ETV Bharat)

ಇದನ್ನೂ ಓದಿ: ಜನರ ಸುಕ್ಷತೆಗೆ ಕಾಳಜಿ, ಹೆಲ್ಮೆಟ್ ಉದ್ಯಮಕ್ಕೆ ಧುಮುಕುತ್ತಿರುವ ಬಾಲಿವುಡ್ ನಟ ಜಾನ್ ಅಬ್ರಹಾಂ! - John Plans to Helmet Brand

ABOUT THE AUTHOR

...view details