Significance of World Bamboo Day - ಹೈದರಾಬಾದ್:ಪ್ರತಿ ವರ್ಷ ಸೆಪ್ಟೆಂಬರ್ 18 ರಂದು ವಿಶ್ವ ಬಿದಿರು ದಿನವನ್ನು ಆಚರಿಸಲಾಗುತ್ತದೆ. ವೇಗವಾಗಿ ಬೆಳೆಯುವ ಈ ಸಸ್ಯದ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ವಿಶೇಷತೆ ಆಗಿದೆ. ಜಾಗತಿಕ ಮಟ್ಟದಲ್ಲಿ ಇಂದಿನ ದಿನವನ್ನು ಬಿದಿರಿನ ಮಹತ್ವ ಗುರುತಿಸುವ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಬಿದಿರು ವಿವಿಧ ಉದ್ದೇಶಗಳಿಗಾಗಿ ಬಳಸಲಾಗುವ ಅತ್ಯಂತ ಸಮರ್ಥನೀಯ - ಪರಿಸರ ಸ್ನೇಹಿ - ನವೀಕರಿಸಬಹುದಾದ ನೈಸರ್ಗಿಕ ಸಂಪನ್ಮೂಲವಾಗಿದೆ. ಇದನ್ನು ಸಣ್ಣ ಉತ್ಪನ್ನಗಳು, ಪೀಠೋಪಕರಣಗಳು ಮತ್ತು ಮನೆಗಳು ಮತ್ತು ರಚನೆಗಳನ್ನು ನಿರ್ಮಿಸಲು ಬಳಸಲಾಗುತ್ತದೆ.
ವಿಶ್ವ ಬಿದಿರು ದಿನವು ಬಿದಿರಿನ ಕೃಷಿ ಮತ್ತು ಬಳಕೆಯನ್ನು ಉತ್ತೇಜಿಸಲು ಜಾಗತಿಕವಾಗಿ ಬಿದಿರಿನ ಅರಿವನ್ನು ಹೆಚ್ಚಿಸಲು ಮತ್ತು ಸ್ಥಳೀಯವಾಗಿ ಸಮುದಾಯ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಸಾಂಪ್ರದಾಯಿಕ ಬಳಕೆಗಳನ್ನು ಆಚರಿಸುವ ದಿನವಾಗಿದೆ.
ಬಿದಿರು ಮರವೋ ಅಥವಾ ಹುಲ್ಲೋ?:ವೈಜ್ಞಾನಿಕವಾಗಿ ಬಿದಿರು ಮರವಲ್ಲ, ಹುಲ್ಲು. ಆದರೆ ಭಾರತೀಯ ಅರಣ್ಯ ಕಾಯಿದೆ, 1927 ಇದನ್ನು ಮರ ಎಂದು ಪರಿಗಣಿಸಿದೆ. ಅದರಂತೆ, ಹೊರಗಿನ ಕಾಡುಗಳಿಂದ ಬಿದಿರನ್ನು ಕತ್ತರಿಸಿ ಸಾಗಿಸುವುದನ್ನು ಕಾನೂನು ಬಾಹಿರ ಎಂದು ಸಾರಲಾಗಿದೆ. 2017 ರಲ್ಲಿ ಭಾರತೀಯ ಅರಣ್ಯ ಕಾಯಿದೆ, 1927 ಗೆ ತಿದ್ದುಪಡಿ ಮಾಡಲಾಯಿತು ಮತ್ತು ಬಿದಿರನ್ನು ಮರದ ವರ್ಗದಿಂದ ತೆಗೆದು ಹಾಕಲಾಗಿದೆ. ಈಗ ಕಾಡಿನ ಹೊರಗೆ ಬಿದಿರು ಮರಗಳನ್ನು ಬೆಳೆಸಲು ಅಥವಾ ಕತ್ತರಿಸಲು ಯಾವುದೇ ನಿಷೇಧ ಇರುವುದಿಲ್ಲ.
ವಿಶ್ವ ಬಿದಿರು ದಿನದ ಇತಿಹಾಸ: ವಿಶ್ವ ಬಿದಿರು ಸಂಸ್ಥೆ (WBO) 2009 ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಎಂಟನೇ ವಿಶ್ವ ಬಿದಿರು ಕಾಂಗ್ರೆಸ್‌ನಲ್ಲಿ, ಸೆಪ್ಟೆಂಬರ್ 18ರ ದಿನವನ್ನು ವಿಶ್ವ ಬಿದಿರು ದಿನ ಎಂದು ಘೋಷಿಸಿತು. ಸುಮಾರು 100 ರಾಷ್ಟ್ರಗಳ ಪ್ರತಿನಿಧಿಗಳ ಸರ್ವಾನುಮತದ ಒಪ್ಪಿಗೆಯೊಂದಿಗೆ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ಆಚರಣೆಯನ್ನು WBO ನ ಮಾಜಿ ಅಧ್ಯಕ್ಷರಾದ ಕಾಮೇಶ್ ಸಲಾಂ ಶುರು ಮಾಡಿದರು. ಅಂದಿನಿಂದ, ಈ ದಿನವು ಮಾನವೀಯತೆಗೆ ಸಸ್ಯದ ಒಡನಾಡಿಯಾಗಿ ಬಿದಿರಿನ ಪ್ರಾಮುಖ್ಯತೆ ತಿಳಿಸಲು ಒಟ್ಟುಗೂಡುವ ಅಭಿಮಾನಿಗಳ ದಿನವೂ ಆಗಿ ಜನಪ್ರಿಯವಾಗಿದೆ.
ಸೆಪ್ಟೆಂಬರ್ 18 ರಂದು ಥಾಯ್ಲೆಂಡ್ ರಾಯಲ್ ಸರ್ಕಾರದ ರಾಯಲ್ ಥಾಯ್ ಫಾರೆಸ್ಟ್ರಿ ದಿನದಂದು ಈ ದಿನವನ್ನು ಸರ್ವಾನುಮತದಿಂದ ಘೋಷಿಸಲಾಯಿತು. ವಿಶ್ವ ಬಿದಿರು ದಿನದ ಉದ್ದೇಶ ಏನೆಂದತರೆ ಬಿದಿರು ಆರ್ಥಿಕವಾಗಿ ನೀಡುವ ಪ್ರಯೋಜನಗಳು ಹಾಗೂ ಉದಯೋನ್ಮುಖ ಕೈಗಾರಿಕೆಗಳಿಗೆ ಅದನ್ನು ಬೆಳೆಯುವ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಾಗಿದೆ.
ಇದನ್ನು ಓದಿ:ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಎಂದರೇನು?: ಅದರ ಇತಿಹಾಸ, ಮಹತ್ವ ಏನು? - International Day of Democracy
ವಿಶ್ವ ಬಿದಿರು ದಿನದ ಮಹತ್ವ:ಆಗ್ನೇಯ ಏಷ್ಯಾ, ಪೂರ್ವ ಏಷ್ಯಾ ಮತ್ತು ದಕ್ಷಿಣ ಏಷ್ಯಾದಲ್ಲಿ ಬಿದಿರು ಆರ್ಥಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನದಿಂದ ಅತ್ಯಂತ ಮೌಲ್ಯಯುತವಾದ ಒಂದು ಮರವಾಗಿದೆ. ವಿಶ್ವ ಬಿದಿರು ದಿನದ ಮಹತ್ವ ಎಂದರೆ, ಬಿದಿರನ್ನು ಬಳಸಿಕೊಳ್ಳುವ ಮತ್ತು ರಕ್ಷಿಸುವ ಪ್ರಯೋಜನಗಳ ಬಗ್ಗೆ ತಿಳಿಸುವ ಮೂಲಕ ಜಾಗೃತಿ ಮೂಡಿಸುವುದಾಗಿದೆ. ಬಿದಿರು ಅದರ ಅಸಾಧಾರಣ ಶಕ್ತಿಯಿಂದಾಗಿ ಸಂಗೀತ ವಾದ್ಯಗಳು, ಕಲೆ ಮತ್ತು ಕಟ್ಟಡ ಸಾಮಗ್ರಿಗಳನ್ನು ತಯಾರಿಸಲು ಅತ್ಯಂತ ಉಪಯುಕ್ತವಾದ ವಸ್ತುವಾಗಿದೆ.
ಬಿದಿರಿನ ಉಪಯೋಗಗಳು:ಕಟ್ಟಡ ಕಟ್ಟಲು ಇದು ಬೇಕೇಬೇಕು: ಇಂದು ವಿಶ್ವದ ಒಂದು ಶತಕೋಟಿ ಜನರು ಬಿದಿರಿನ ಮನೆಗಳಲ್ಲಿ ವಾಸಿಸುತ್ತಿದ್ದಾರೆ. UNESCO ಪ್ರಕಾರ 70 ಹೆಕ್ಟೇರ್ ಬಿದಿರು 1000 ಮನೆಗಳನ್ನು ನಿರ್ಮಿಸಲು ಸಾಕಾಗುವಷ್ಟು ವಸ್ತುಗಳನ್ನು ಉತ್ಪಾದಿಸುತ್ತದೆ