ಕರ್ನಾಟಕ

karnataka

ETV Bharat / bharat

ಸರ್ಜರಿ ವೇಳೆ ಮಹಿಳೆಯ ಕಿಡ್ನಿ ಕಳವು; ಅಂಗಾಂಗ ಕಳ್ಳಸಾಗಣೆ ಆರೋಪ- ಪೊಲೀಸರು ಹೇಳಿದ್ದಿಷ್ಟು! - WOMANS KIDNEY STOLEN DURING SURGERY

ಸ್ಥಳೀಯ ನ್ಯಾಯಾಲಯದ ಆದೇಶದ ಮೇರೆಗೆ ನರಸೇನಾ ಪೊಲೀಸರು 6 ವೈದ್ಯರು ಮತ್ತು ಇತರ ನೌಕರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

Womans Kidney Stolen During Surgery Meerut Hospital Faces Organ Trafficking Allegations
ಸಾಂದರ್ಭಿಕ ಚಿತ್ರ (ಐಎಎನ್​ಎಸ್​)

By ETV Bharat Karnataka Team

Published : Jan 15, 2025, 5:09 PM IST

ಮೀರತ್​​, ಉತ್ತರಪ್ರದೇಶ : ಚಿಕಿತ್ಸೆಗೆ ಎಂದು ಬಂದ ಮಹಿಳೆಯನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದ ವೈದ್ಯರು ಆಕೆಯ ಎಡ ಮೂತ್ರಪಿಂಡವನ್ನು ಕಳವು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಉತ್ತರ ಪ್ರದೇಶದ ಬುಲಂಧ್​ಶಹರ್​ನ ಬುಗ್ರಸಿ ಮಹಿಳೆ ನರಸೇನಾ ಪೊಲೀಸ್​ ಠಾಣೆಯಲ್ಲಿ ಆರು ಜನ ವೈದ್ಯರು ಮತ್ತು ಇತರೆ ಉದ್ಯೋಗಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಘಟನೆ ಸಂಬಂಧ ಮಹಿಳೆ ವೈದ್ಯರನ್ನು ಪ್ರಶ್ನಿಸಿದಾಗ, ಆಕೆಯ ಬಳಿಯಿದ್ದ ದಾಖಲೆಗಳನ್ನು ವಶಕ್ಕೆ ಪಡೆದು, ಹಲ್ಲೆ ನಡೆಸುವ ಯತ್ನ ಕೂಡ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಫ್​ಐಆರ್​ ನಲ್ಲಿ ಹೇಳಲಾಗಿದೆ.

ಏನಿದು ಘಟನೆ?: 2017ರಲ್ಲಿ ಮಹಿಳೆ ಅನಾರೋಗ್ಯಕ್ಕೆ ಒಳಗಾದ ಹಿನ್ನೆಲೆ ಮೀರತ್​ನ ಬಾಗ್ಪತ್​ ರಸ್ತೆಯಲ್ಲಿನ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗೆ ಮುಂದಾಗಿದ್ದಾರೆ. ಆಕೆಯನ್ನು ಪರೀಕ್ಷಿಸಿದ ವೈದ್ಯರು ಶಸ್ತ್ರ ಚಿಕಿತ್ಸೆಗೆ ಶಿಫಾರಸು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅದರಂತೆ ಮಹಿಳೆ 2017ರ ಮೇ 20ರಂದು ಆಸ್ಪತ್ರೆಗೆ ದಾಖಲಾಗಿ, ಸರ್ಜರಿಗೆ ಒಳಗಾಗಿದ್ದಾರೆ. ಈ ವೇಳೆ, ಆಕೆಯ ಎರಡು ಕಿಡ್ನಿಗಳನ್ನು ಮರು ಬದಲಾವಣೆ ಮಾಡಲಾಗಿದೆ. 2017ರ ಮೇ 24ರಂದು ಆಕೆ ಡಿಸ್ಚಾರ್ಜ್​ ಆಗಿದ್ದಾರೆ.

2022ರ ಅಕ್ಟೋಬರ್​ನಲ್ಲಿ ಮತ್ತೊಬ್ಬ ವೈದ್ಯರಿಂದ ಪರೀಕ್ಷೆಗೆ ಒಳಗಾದಾಗ ಆಕೆಯ ಎಡ ಮೂತ್ರಪಿಂಡ ಕಣ್ಮರೆಯಾಗಿರುವುದು ಕಂಡು ಬಂದಿದೆ. ಈ ವೇಳೆ ಶಸ್ತ್ರಚಿಕಿತ್ಸೆಯಲ್ಲಿ ಆಕೆಯ ಕಿಡ್ನಿ ಅಪಹರಣ ಮಾಡಿರುವುದು ಕಂಡು ಬಂದಿದ್ದು, ಅದನ್ನು ಮತ್ತೊಬ್ಬರಿಗೆ ಮಾರಾಟ ಮಾಡಲಾಗಿದೆ. ಮೊದಲು ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ, ಅಂಗಾಂಗ ಊನವಾಗುವಂತೆ ಮಾಡಿದ್ದು, ಮಾನವ ಅಂಗಾಂಗ ಕಳ್ಳಸಾಗಣೆಯಲ್ಲಿ ತೊಡಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ದೂರುದಾರೆ ಹೇಳಿದ್ದೇನು?:ಈ ಸಂಬಂಧ ಈಟಿವಿ ಭಾರತ್​ ಜೊತೆ ಮಹಿಳೆ ಮಾತನಾಡಿದ್ದು, ಮೀರತ್​ ಮೂಲಕ ಕೆಎಂಸಿ ಆಸ್ಪತ್ರೆ ವೈದ್ಯರು ಕಳೆದ ಎರಡು ಮೂರು ವರ್ಷದ ಹಿಂದೆ ನನ್ನ ಮೂತ್ರಪಿಂಡವನ್ನು ಕಳುವು ಮಾಡಿದ್ದಾರೆ. ಅಲ್ಲದೇ, ನನ್ನ ದಾಖಲಾತಿ ಮತ್ತು ಶಸ್ತ್ರಚಿಕಿತ್ಸೆಯ ಪೇಪರ್​ ಅನ್ನು ಅವರು ಪ್ರಶ್ನಿಸಿದ್ದಕ್ಕೆ ಹರಿದು ಎಸೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣದ ಬಗ್ಗೆ ಪೊಲೀಸರು ನೀಡಿರುವ ಮಾಹಿತಿ ಇದು:ಘಟನೆ ಸಂಬಂಧ ಮಾತನಾಡಿರುವ ನಗರ ಎಸ್​ಪಿ ಶಂಕರ್​ ಪ್ರಸಾದ್​, ಈ ಸಂಬಂಧ ದೂರು ದಾಖಲಾಗಿದ್ದು, ನ್ಯಾಯಾಲಯದ ಆದೇಶದ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮಹಿಳೆ 2017ರಲ್ಲಿ ಮೀರತ್ ಮೂಲದ ಕೆಎಂಸಿ ಆಸ್ಪತ್ರೆ ವೈದ್ಯರಿಂದ ಈ ಕೃತ್ಯ ನಡೆದಿರುವುದಾಗಿ ಆರೋಪಿಸಿದ್ದಾರೆ. ಸದ್ಯ ಪ್ರಕರಣದ ತನಿಖೆ ಸಾಗಿದೆ. ಆಸ್ಪತ್ರೆ ವೈದ್ಯರು ಮತ್ತು ಅವರ ಪತ್ನಿ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮಹಾಕುಂಭ ಮೇಳ: ಹೊತ್ತಿ ಉರಿದ ಬಸ್, ತೆಲಂಗಾಣದ ಓರ್ವ ಸಾವು

ABOUT THE AUTHOR

...view details