ಮೀರತ್: ಪತಿಯೊಂದಿಗೆ ಜಗಳವಾಡಿ ಮನೆ ತೊರೆದಿದ್ದ ಮಹಿಳೆಯನ್ನು 20 ಸಾವಿರ ರೂ.ಗೆ ಮಾರಾಟ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕುಮಾರ್ ಸಿಂಗ್ ಅಲಿಯಾಸ್ ಕುನ್ವರ್‌ಪಾಲ್ ಮತ್ತು ಬದನ್ ಸಿಂಗ್ ಬಂಧಿತ ಆರೋಪಿಗಳು. ಬಂಧಿತರಿಂದ ಮಹಿಳೆಯನ್ನು ರಕ್ಷಿಸಿದ ಪೊಲೀಸರು, ಪುನಃ ಮೀರತ್ಗೆ ಕರೆತಂದು ಬಿಟ್ಟಿದ್ದಾರೆ.
ಮನೆ ಬಿಟ್ಟುಹೋದ ಮಹಿಳೆ ವೃಂದಾವನಕ್ಕೆ ತೆರಳಿದ್ದು ಅಲ್ಲಿ ದಲ್ಲಾಳಿಗಳ ಕೈಗೆ ಸಿಕ್ಕಿಬಿದ್ದಿದ್ದಳು. ದಲ್ಲಾಳಿ ಆಕೆಯನ್ನು ಮೊದಲು ಆಗ್ರಾದ ವೇಶ್ಯಾಗೃಹಕ್ಕೆ ಮತ್ತು ನಂತರ ರಾಜಸ್ಥಾನದ ಭರತ್ ಎಂಬಾತನಿಗೆ 20 ಸಾವಿರ ರೂ.ಗೆ ಮಾರಾಟ ಮಾಡಿದ್ದ. ಸುದ್ದಿ ತಿಳಿದ ಖಾರ್ಖೋಡಾ ಠಾಣಾ ಪೊಲೀಸರು ಮಹಿಳೆಯನ್ನು ರಕ್ಷಿಸಿ ಇಬ್ಬರನ್ನು ಬಂಧಿಸಿದ್ದಾರೆ.
ಘಟನೆಯ ವಿವರ:ಸೆ. 21 ರಂದು ತನ್ನ ಗಂಡನ ಜೊತೆ ಜಗಳ ಮಾಡಿ ಮಹಿಳೆ ಮನೆ ತೊರೆದಿದ್ದಳು. ವೃಂದಾವನದಲ್ಲಿ ಒಬ್ಬಂಟಿಯಾಗಿ ಕಂಡ ಈಕೆಯನ್ನು ರಾಜಸ್ಥಾನ ಮೂಲದ ಕುನ್ವರ್‌ಪಾಲ್ ಎಂಬಾತ ಭೇಟಿಯಾಗಿದ್ದ. ಮನೆಗೆ ಬಿಡುವುದಾಗಿ ಹೇಳಿ ಆಕೆಯನ್ನು ಕಾರಿನಲ್ಲಿ ಆಗ್ರಾಕ್ಕೆ ಕರೆದೊಯ್ದು 6 ದಿನ ಹೋಟೆಲ್ವೊಂದರಲ್ಲಿ ಇರಿಸಿದ್ದ. ಬಳಿಕ ಚಿನ್ನಾಭರಣ ದೋಚಿದ್ದ ಆರೋಪಿ, ಮಹಿಳೆಯನ್ನು ಅಲ್ಲಿಂದ ರಾಜಸ್ಥಾನದ ಭರತ್‌ಪುರ ಜಿಲ್ಲೆಯ ವೇಶ್ಯಾಗೃಹಕ್ಕೆ 20 ಸಾವಿರ ರೂ.ಗೆ ಮಾರಾಟ ಮಾಡಿದ್ದನು.