ಕರ್ನಾಟಕ

karnataka

ETV Bharat / bharat

ವಾರದ ರಾಶಿ ಭವಿಷ್ಯ: ಈ ರಾಶಿಯವರಿಗೆ ಜಮೀನು ಅಥವಾ ಆಸ್ತಿಯಲ್ಲಿ ಹೂಡಿಕೆಗೆ ಇದು ಸಕಾಲ! - weekly horoscope

ಈ ವಾರ ನಿಮ್ಮ ರಾಶಿ ಭವಿಷ್ಯದಲ್ಲಿ ಲಾಭ, ನಷ್ಟ, ಆರೋಗ್ಯ, ಉದ್ಯೋಗ, ಶಿಕ್ಷಣ ಹೀಗಿರಲಿದೆ.

land or property  weekly horoscope of sunday
ವಾರದ ರಾಶಿ ಭವಿಷ್ಯ

By ETV Bharat Karnataka Team

Published : Mar 10, 2024, 5:51 AM IST

ಮೇಷ:ಮೇಷ ರಾಶಿಯವರಿಗೆ ಈ ವಾರದಲ್ಲಿ ಮಿಶ್ರಫಲ ದೊರೆಯಲಿದೆ. ವ್ಯವಹಾರವನ್ನು ವಿಸ್ತರಿಸಲು ಯತ್ನಿಸುವ ವ್ಯಕ್ತಿಗಳು ಯಶಸ್ಸನ್ನು ಗಳಿಸಲಿದ್ದಾರೆ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸದಲ್ಲಿ ಭಡ್ತಿ ಪಡೆಯಲಿದ್ದಾರೆ. ಹೊಸ ಕೆಲಸದ ಕೊಡುಗೆಯು ಸಿಗಬಹುದು. ಕುಟುಂಬದ ಸದಸ್ಯರ ಸಹಾಯ ಪಡೆಯಲಿದ್ದೀರಿ. ಪ್ರೇಮ ಸಂಬಂಧದಲ್ಲಿ ತಪ್ಪು ಗ್ರಹಿಕೆ ಉಂಟಾಗುವ ಕಾರಣ ಉದ್ವೇಗ ಕಾಣಿಸಿಕೊಳ್ಳಬಹುದು. ವೈವಾಹಿಕ ಬದುಕಿನಲ್ಲಿ ಯಾವುದಾದರೂ ವಿಷಯಕ್ಕೆ ಸಂಬಂಧಿಸಿದಂತೆ ವಾಗ್ವಾದ ಉಂಟಾಗಬಹುದು. ವಿದ್ಯಾರ್ಥಿಗಳು ಅಧ್ಯಯನಕ್ಕೆ ಸಂಪೂರ್ಣ ಗಮನ ನೀಡಲಿದ್ದು, ಇದರಿಂದಾಗಿ ಯಶಸ್ಸನ್ನು ಗಳಿಸಲಿದ್ದಾರೆ. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಅಧಿಕ ಖರ್ಚುವೆಚ್ಚ ಉಂಟಾಗಬಹುದು. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು. ಯಾವುದಾದರೂ ಜಮೀನು ಅಥವಾ ಮನೆಯನ್ನು ನೀವು ಖರೀದಿಸುವುದಾದರೆ ಈ ವಾರದಲ್ಲಿ ನೀವು ಖರೀದಿಸಬಹುದು. ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ. ಮನೆಯಲ್ಲಿ ಮಂಗಳದಾಯಕ ಕಾರ್ಯಕ್ರಮಗಳನ್ನು ಅಯೋಜಿಸಬಹುದು. ನಿಮ್ಮ ತಾಯಿಯ ಆಶೀರ್ವಾದ ನಿಮ್ಮ ಮೇಲಿರುತ್ತದೆ.

ವೃಷಭ: ವೃಷಭ ರಾಶಿಯವರ ಆರ್ಥಿಕ ಸ್ಥಿತಿಯು ಈ ವಾರದಲ್ಲಿ ಚೆನ್ನಾಗಿರಲಿದೆ. ನೀವು ಉದ್ಯೋಗದಲ್ಲಿ ಭಡ್ತಿ ಪಡೆಯಲಿದ್ದೀರಿ. ಹೊಸ ಕೆಲಸ ಅರಸಲು ಇದು ಸಕಾಲವಲ್ಲ. ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ಯಾರಾದರೂ ವ್ಯಕ್ತಿಯ ಸಹಾಯವನ್ನು ನೀವು ತೆಗೆದುಕೊಳ್ಳಬಹುದು. ವಿವಾಹಿತ ಜೋಡಿಗಳ ಕೌಟುಂಬಿಕ ಸಾಕಷ್ಟು ಪ್ರೀತಿಯಿಂದ ಕೂಡಿರಲಿದೆ. ನಿಮ್ಮ ಕೋಪವನ್ನು ನೀವು ನಿಯಂತ್ರಿಸಬೇಕು. ನಿಮ್ಮ ಪ್ರೇಮ ಜೀವನವು ಚೆನ್ನಾಗಿರಲಿದೆ. ಆದರೆ ಬೇರೆ ಯಾರಾದರೂ ವ್ಯಕ್ತಿಯ ಕಾರಣ ಸಂಘರ್ಷ ಉಂಟಾಗಬಹುದು. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಸ್ಪರ್ಧೆಗಳಿಗಾಗಿ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ಕಠಿಣ ಶ್ರಮ ಪಡಬೇಕು. ನಿಮ್ಮ ಆರೋಗ್ಯವು ಮೊದಲಿಗಿಂತಲೂ ಚೆನ್ನಾಗಿರಲಿದೆ. ವಾತಾವರಣದಲ್ಲಿ ಬದಲಾವಣೆ ಉಂಟಾಗುವ ಕಾರಣ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ನಿಮ್ಮ ಒಡಹುಟ್ಟಿದವರ ಉನ್ನತ ಶಿಕ್ಷಣಕ್ಕಾಗಿ ನಿಮ್ಮ ಪರಿಚಯದ ವ್ಯಕ್ತಿಯೊಂದಿಗೆ ಮಾತನಾಡಲಿದ್ದೀರಿ. ನಿಮ್ಮ ಮಗುವಿನಿಂದ ಶುಭ ಸುದ್ದಿಯನ್ನು ಪಡೆಯಲಿದ್ದೀರಿ. ಕುಟುಂಬದ ಸದಸ್ಯರೊಂದಿಗೆ ಸೇರಿ ಔತಣ ಕೂಟದಲ್ಲಿ ಪಾಲ್ಗೊಳ್ಳಲಿದ್ದೀರಿ.

ಮಿಥುನ:ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ತುಂಬಾ ಅನುಕೂಲಕರ. ನಿಮ್ಮ ಸಂಗಾತಿಗೆ ನಿಮ್ಮ ಭಾವನೆಯನ್ನು ನೀವು ವ್ಯಕ್ತಪಡಿಸಲಿದ್ದೀರಿ. ಅವಿವಾಹಿತರ ಒಳ್ಳೆಯ ಜೀವನ ಸಂಗಾತಿಯನ್ನು ಪಡೆಯಬಹುದು. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ಉದ್ಯೋಗದಲ್ಲಿರುವವರಿಗೆ ಹೊಸ ಕೆಲಸದ ಕೊಡುಗೆ ದೊರೆಯಲಿದೆ. ಉದ್ಯೋಗ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಪ್ರಯಾಣಕ್ಕೆ ಹೋಗುವ ಸಂಭವವಿದ್ದು, ಇದರಿಂದಾಗಿ ಸಾಕಷ್ಟು ಪ್ರಯೋಜನ ದೊರೆಯಲಿದೆ. ನೀವು ಹೊಸ ವ್ಯಕ್ತಿಗಳ ಸಂಪರ್ಕಕ್ಕೆ ಬರಲಿದ್ದೀರಿ. ನೀವು ಹೊಸ ಸಂಪರ್ಕಗಳನ್ನು ಪಡೆಯಬಹುದು. ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ನಿಮ್ಮ ಮನೆಯ ದುರಸ್ತಿಗಾಗಿ ನೀವು ಸಾಕಷ್ಟು ಹಣ ಖರ್ಚು ಮಾಡಲಿದ್ದೀರಿ. ಯಾವುದಾದರೂ ಜಮೀನನ್ನು ನೀವು ಖರೀದಿಸುವುದಾದರೆ ಈ ವಾರದಲ್ಲಿ ನೀವು ಖರೀದಿಸಬಹುದು. ಶೇರು ಮಾರುಕಟ್ಟೆಯಲ್ಲಿ ನೀವು ಹೂಡಿಕೆ ಮಾಡಬಹುದು. ನಿಮ್ಮ ಆರೋಗ್ಯವು ಮೊದಲಿಗಿಂತಲೂ ಚೆನ್ನಾಗಿರಲಿದೆ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಅಡಚಣೆಯ ಕಾರಣ ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗದು.

ಕರ್ಕಾಟಕ: ಕರ್ಕಾಟಕ ರಾಶಿಯವರಿಗೆ ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಜೀವನ ಸಂಗಾತಿಯ ಜೊತೆಗಿನ ಕಹಿತನವನ್ನು ಮರೆತು ಮುಂದಕ್ಕೆ ಸಾಗಲಿದ್ದಾರೆ. ನಿಮ್ಮ ಪ್ರೇಮ ಬದುಕು ಚೆನ್ನಾಗಿರಲಿದೆ. ಅವಿವಾಹಿತ ವ್ಯಕ್ತಿಗಳು ತಮ್ಮ ಆಯ್ಕೆಯ ಜೀವನ ಸಂಗಾತಿಯನ್ನು ಪಡೆಯಲಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ನಿಮ್ಮ ಸಮಯವನ್ನು ಹಾಳುವ ಮಾಡುವ ಅಂತಹ ಗೆಳೆಯರಿಂದ ದೂರವಿರಿ. ಸ್ಪರ್ಧೆಗೆ ಸಿದ್ಧತೆ ನಡೆಸುವ ಜನರು ಕಠಿಣ ಶ್ರಮ ಮಾಡಬೇಕು. ಆಗ ಮಾತ್ರವೇ ಅವರು ಯಶಸ್ಸನ್ನು ಗಳಿಸಬಹುದು. ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಸಂತಸದಿಂದಲೇ ಹಣವನ್ನು ಖರ್ಚು ಮಾಡಲಿದ್ದೀರಿ. ಶೇರು ಮಾರುಕಟ್ಟೆಯಲ್ಲಿ ನೀವು ಹೂಡಿಕೆ ಮಾಡಬಹುದು. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ನೀವು ಯಾವುದಾದರೂ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ಅರೋಗ್ಯದಲ್ಲಿ ಕಾಲಕ್ರಮೇಣ ಸುಧಾರಣೆ ಉಂಟಾಗಲಿದೆ. ಪ್ರವಾಸಕ್ಕೆ ಹೋಗುವುದರಿಂದ ದಣಿಯಲಿದ್ದೀರಿ. ನಿಮ್ಮ ಯಾವುದೇ ಸರ್ಕಾರಿ ಕೆಲಸವು ಬಾಕಿ ಇದ್ದಲ್ಲಿ ಅದು ಪೂರ್ಣಗೊಳ್ಳಲಿದೆ.

ಸಿಂಹ:ಸಿಂಹ ರಾಶಿಯವರು ತಮ್ಮ ಸಂಬಂಧದಲ್ಲಿ ಪ್ರೇಮ ಮತ್ತು ಸಾಮರಸ್ಯವನ್ನು ಕಾಪಾಡಬೇಕು. ಪ್ರೇಮ ಸಂಬಂಧದಲ್ಲಿ ಸಾಕಷ್ಟು ಎಚ್ಚರ ವಹಿಸಬೇಕು. ನೀವು ಪರಸ್ಪರ ಸಮಯ ನೀಡುವುದು ಒಳ್ಳೆಯದು. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಹೊಸ ಕಾಮಗಾರಿಗಾಗಿ ಕೆಲಸ ಮಾಡಲು ಅವಕಾಶ ದೊರೆಯಲಿದೆ. ಅರೋಗ್ಯದಲ್ಲಿ ಕಾಲಕ್ರಮೇಣ ಸುಧಾರಣೆ ಉಂಟಾಗಲಿದೆ. ಈ ವಾರದಲ್ಲಿ ನೀವು ಹೊಸ ವಾಹನವನ್ನು ಖರೀದಿಸಬಹುದು. ಶೇರು ಮಾರುಕಟ್ಟೆಯಲ್ಲಿ ನೀವು ಹೂಡಿಕೆ ಮಾಡಿದರೆ ನೀವು ಲಾಭ ಗಳಿಸಲಿದ್ದೀರಿ. ಉದ್ಯೋಗಿಗಳ ಪಾಲಿಗೆ ಈ ವಾರವು ಕಠಿಣ ಶ್ರಮ ಮತ್ತು ಹೋರಾಟದಿಂದ ಕೂಡಿರಲಿದೆ. ನಿಮ್ಮ ಕಠಿಣ ಶ್ರಮವು ಯಶಸ್ವಿಯಾಗಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ದೊಡ್ಡ ಆರ್ಡರ್‌ ಒಂದನ್ನು ಪಡೆಯಲಿದ್ದು, ನೀವು ಇದರಲ್ಲಿ ಲಾಭ ಗಳಿಸಲಿದ್ದೀರಿ. ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಶಿಕ್ಷಕರ ಸಹಕಾರ ಪಡೆಯಲಿದ್ದಾರೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವ ಜನರು ಗೆಲುವು ಸಾಧಿಸಲಿದ್ದಾರೆ.

ಕನ್ಯಾ:ಕನ್ಯಾ ರಾಶಿಯವರಿಗೆ ಈ ವಾರದಲ್ಲಿ ಶುಭ ಸುದ್ದಿ ದೊರೆಯಲಿದೆ. ನಿಮ್ಮ ವೈವಾಹಿಕ ಬದುಕಿನಲ್ಲಿ ನಿಮಗೆ ಸಂತಸ ದೊರೆಯಲಿದೆ. ಕಾಡುತ್ತಿರುವ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳಲಿವೆ. ನಿಮ್ಮ ಪ್ರೇಮ ಬದುಕು ಚೆನ್ನಾಗಿರಲಿದೆ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ನೀವು ಹೊಸ ಸಂಶೋಧನೆಯ ಕುರಿತು ಯೋಚಿಸಬಹುದು. ಉದ್ಯೋಗದಲ್ಲಿರುವವರಿಗೆ ಹೊಸ ಕೆಲಸದ ಕೊಡುಗೆ ದೊರೆಯಲಿದೆ. ವ್ಯವಹಾರವನ್ನು ನಡೆಸುವುದಕ್ಕಾಗಿ ನೀವು ದೂರಕ್ಕೆ ಹೋಗಬಹುದು. ನೀವು ಹೊಸ ಅವಕಾಶಗಳನ್ನು ಪಡೆಯಲಿದ್ದು ಇದು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಇನ್ನಷ್ಟು ಸುಧಾರಣೆ ತರಲಿದೆ. ನಿಮ್ಮ ಆರೋಗ್ಯವು ಹಿಂದಿಗಿಂತಲೂ ಚೆನ್ನಾಗಿರಲಿದೆ. ಆದರೆ ನಿಮ್ಮ ದೈನಂದಿನ ತಪಾಸಣೆನ್ನು ನಡೆಸುವುದು ಒಳ್ಳೆಯದು. ಆರ್ಥಿಕ ಸ್ಥಿತಿಯು ಚೆನ್ನಾಗಿರಲಿದೆ. ನಿಮ್ಮ ಮನೆಯ ದುರಸ್ತಿಗಾಗಿ ನೀವು ಸಾಕಷ್ಟು ಹಣ ಖರ್ಚು ಮಾಡಲಿದ್ದೀರಿ. ನೀವು ಎಲ್ಲಾದರೂ ಹೂಡಿಕೆ ಮಾಡಲು ಇಚ್ಛಿಸುವುದಾದರೆ ದೀರ್ಘ ಕಾಲಕ್ಕಾಗಿ ನೀವು ಹೂಡಿಕೆ ಮಾಡುವುದು ಒಳ್ಳೆಯದು. ನಿಮ್ಮ ಮಕ್ಕಳ ಸಂಪೂರ್ಣ ಸಹಕಾರ ಪಡೆಯಲಿದ್ದೀರಿ.

ತುಲಾ: ಈ ವಾರದಲ್ಲಿ ತುಲಾ ರಾಶಿಯವರು ಕುಟುಂಬದ ಬೆಂಬಲ ಪಡೆಯಲಿದ್ದಾರೆ. ಕುಟುಂಬದ ಸದಸ್ಯರೊಂದಿಗೆ ನೀವು ಸಮಯ ಕಳೆಯಲಿದ್ದೀರಿ. ಅಲ್ಲದೆ ಎಲ್ಲಾದರೂ ಪ್ರಯಾಣಿಸಲು ಯೋಜನೆ ರೂಪಿಸಲಿದ್ದೀರಿ. ಈ ಪ್ರಯಾಣದಲ್ಲಿ ಎಲ್ಲರೂ ಸಂತಸ ಅನುಭವಿಸಲಿದ್ದಾರೆ. ನಿಮ್ಮ ಕೌಟುಂಬಿಕ ಬದುಕಿನಲ್ಲಿ ಬೇರೆ ವ್ಯಕ್ತಿಯ ಹಸ್ತಕ್ಷೇಪದ ಕಾರಣ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳಬಹುದು. ಪ್ರೇಮ ಸಂಬಂಧದಲ್ಲಿ ಏರುಪೇರು ಉಂಟಾಗಬಹುದು. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ವಿದ್ಯಾರ್ಥಿಗಳು ಯಾವುದಾದರೂ ಹೊಸ ವಿಷಯದ ಕುರಿತು ಜ್ಞಾನವನ್ನು ಗಳಿಸಲಿದ್ದಾರೆ. ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ನಿಮ್ಮ ವ್ಯವಹಾರದಲ್ಲಿ ಬಾಕಿ ಉಳಿದಿರುವ ಯೋಜನೆಗಳಿಗೆ ಮರುಜೀವ ನೀಡುವಲ್ಲಿ ಯಶಸ್ವಿಯಾಗಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ಹೊಸ ಕೆಲಸದ ಅವಕಾಶ ದೊರೆಯಲಿದೆ. ಅಲ್ಲದೆ ತಮ್ಮ ಹಳೆಯ ಕೆಲಸದಿಂದ ಏನಾದರೂ ಹೊಸತನ್ನು ಕಲಿಯಲಿದ್ದಾರೆ. ನೀವು ಜಮೀನು ಅಥವಾ ಆಸ್ತಿಯಲ್ಲಿ ಹೂಡಿಕೆ ಮಾಡಬಹುದು. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇದು ಸಕಾಲ.

ವೃಶ್ಚಿಕ:ವೃಶ್ಚಿಕ ರಾಶಿಯವರ ಪಾಲಿಗೆ ಈ ವಾರವು ಹಿಂದಿಗಿಂತಲೂ ಒಳ್ಳೆಯದು. ಅವಿವಾಹಿತರಯ ತಮ್ಮ ನೆಚ್ಚಿನ ಜೀವನ ಸಂಗಾತಿಯನ್ನು ಪಡೆಯಬಹುದು. ನಿಮ್ಮ ಪ್ರೇಮ ಬದುಕು ಚೆನ್ನಾಗಿರಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ಜೀವನ ಸಂಗಾತಿಯು ಕೆಲಸದಲ್ಲಿ ಯಶಸ್ಸನ್ನು ಗಳಿಸಲಿದ್ದಾರೆ. ಆರ್ಥಿಕ ಸ್ಥಿತಿಯು ಚೆನ್ನಾಗಿರಲಿದೆ. ನೀವು ಯಾವುದಾದರೂ ಜಮೀನು ಅಥವಾ ಆಸ್ತಿಯನ್ನು ಖರೀದಿಸಲು ಬಯಸುವುದಾದರೆ, ಸಮಯವು ನಿಮ್ಮ ಪಾಲಿಗೆ ಚೆನ್ನಾಗಿದೆ. ನಿಮ್ಮ ಜೀವನ ಸಂಗಾತಿಯಿಂದಾಗಿ ಆರ್ಥಿಕ ಲಾಭ ದೊರೆಯುವ ಸಾಧ್ಯತೆ ಇದೆ. ಈ ವಾರವು ಶೇರು ಮಾರುಕಟ್ಟೆಯ ದೃಷ್ಟಿಯಿಂದ ಒಳ್ಳೆಯದು. ವ್ಯವಹಾರದಲ್ಲಿ ತೊಡಗಿಕೊಂಡಿರುವ ಜನರು ಹೊಸ ಗುತ್ತಿಗೆಯನ್ನು ಪಡೆಯಲಿದ್ದಾರೆ. ನಿಮ್ಮ ಯಾವುದೇ ಸರ್ಕಾರಿ ಕೆಲಸವು ಬಾಕಿ ಇದ್ದಲ್ಲಿ ಅದು ಪೂರ್ಣಗೊಳ್ಳಲಿದೆ. ಹೊಸ ಕೆಲಸದ ಕೊಡುಗೆಯು ಸಿಗಬಹುದು. ವಿದ್ಯಾರ್ಥಿಗಳು ತಮ್ಮ ಗೆಳೆಯರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲಿದ್ದಾರೆ. ಇದು ಅವರ ಅಧ್ಯಯನದಲ್ಲಿ ಅಡಚಣೆಯನ್ನುಂಟು ಮಾಡಲಿದೆ. ನಿಮ್ಮ ಆರೋಗ್ಯವು ಹಿಂದಿಗಿಂತಲೂ ಈಗ ಚೆನ್ನಾಗಿರಲಿದೆ. ಆದರೆ ಹವಾಮಾನದಲ್ಲಿ ಉಂಟಾಗುವ ಬದಲಾವಣೆಯ ಕಾರಣ ನಿಮ್ಮ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಳ್ಳಬಹುದು.

ಧನು: ಈ ವಾರವನ್ನು ನೀವು ಸುಂದರವಾಗಿ ಕಳೆಯಲಿದ್ದೀರಿ. ನಿಮ್ಮ ಜೀವನ ಸಂಗಾತಿಯ ಜೊತೆ ಅನುರಾಗದ ಕ್ಷಣಗಳನ್ನು ಕಳೆಯಲಿದ್ದೀರಿ. ಎಲ್ಲಾದರೂ ಹೊರಗಡೆಗೆ ಹೋಗಬಹುದು. ನಿಮ್ಮ ಜೀವನ ಸಂಗಾತಿಯಿಂದ ನಿಮಗೆ ಅದ್ಭುತ ಉಡುಗೊರೆ ದೊರೆಯಲಿದೆ. ನಿಮ್ಮ ಮನೆಗೆ ಹೊಸ ಅತಿಥಿಯು ಬರಬಹುದು. ವಿವಾಹಿತ ವ್ಯಕ್ತಿಗಳ ನಡುವಿನ ಸಂಬಂಧವು ಚೆನ್ನಾಗಿರಲಿದೆ. ಈ ವಾರದಲ್ಲಿ ಅನಗತ್ಯ ವಸ್ತುಗಳಿಗಾಗಿ ನೀವು ಹಣವನ್ನು ಖರ್ಚು ಮಾಡಲಿದ್ದೀರಿ. ಶೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡಬೇಡಿ. ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಈ ವಾರದಲ್ಲಿ ವ್ಯಾಪಾರೋದ್ಯಮಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ಹೊಸ ಗುತ್ತಿಗೆ ದೊರೆಯಬಹುದು. ಕೆಲಸವನ್ನು ಬದಲಾಯಿಸಲು ಇದು ಸಕಾಲವಲ್ಲ. ಕಲೆ, ವಿನ್ಯಾಸ, ಮಾರ್ಕೆಟಿಂಗ್‌ ಮುಂತಾದ ಕ್ಷೇತ್ರಗಳಲ್ಲಿ ದುಡಿಯುವವರು ಒಳ್ಳೆಯ ಲಾಭ ಪಡೆಯಲಿದ್ದಾರೆ. ವಿದ್ಯಾರ್ಥಿಗಳು ಅನಗತ್ಯ ವಿಚಾರಗಳಿಗೆ ಗಮನ ನೀಡುವ ಕಾರಣ ಅಧ್ಯಯನಕ್ಕೆ ಗಮನ ನೀಡಲು ಅವರಿಗೆ ಸಾಧ್ಯವಾಗದು. ಬದಲಾಗುತ್ತಿರುವ ಹವಾಮಾನದ ಕಾರಣ ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ನಿಮ್ಮ ಅಚ್ಚುಮೆಚ್ಚಿನ ವಿಷಯಗಳನ್ನು ಓದಲು ನಿಮಗೆ ಅವಕಾಶ ಸಿಗಬಹುದು.

ಮಕರ:ಈ ವಾರದಲ್ಲಿ ಅದೃಷ್ಟವು ನಿಮ್ಮ ನೆರವಿಗೆ ಬರಲಿದೆ. ನೀವು ವಿದೇಶದಿಂದ ಗುತ್ತಿಗೆ ಪಡೆಯಬಹುದು. ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ಹೊಸ ಕೆಲಸದ ಕೊಡುಗೆ ದೊರೆಯಲಿದೆ. ನೀವು ಕೆಲಸವನ್ನು ಬದಲಾಯಿಸಲು ಬಯಸುವುದಾದರೆ ಇದು ಸಕಾಲ. ನಿಮ್ಮ ಜೀವನ ಸಂಗಾತಿಯೊಂದಿಗೆ ಪ್ರಣಯಭರಿತ ಡಿನ್ನರ್‌ ಕೂಟಕ್ಕೆ ನೀವು ಹೋಗಲಿದ್ದು ಪ್ರೀತಿಯಿಂದ ಕೂಡಿದ ಮಾತುಗಳನ್ನು ವಿನಿಮಯ ಮಾಡಿಕೊಳ್ಳಲಿದ್ದೀರಿ. ನಿಮ್ಮ ಪ್ರೇಮ ಬದುಕು ಚೆನ್ನಾಗಿರಲಿದೆ. ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಮೊದಲು ಸಾಕಷ್ಟು ಯೋಚಿಸಿ. ಸಾಲವನ್ನು ತೆಗೆದುಕೊಳ್ಳಲು ಅಥವಾ ನೀಡಲು ಇದು ಸಕಾಲ. ವಿದ್ಯಾರ್ಥಿಗಳು ಕೆಲವೊಂದು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದು ಇದರಲ್ಲಿ ಗೆಲುವು ಸಾಧಿಸಲಿದ್ದೀರಿ. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ನಿಮ್ಮ ಕುಟುಂಬದ ಸದಸ್ಯರ ಜೊತೆ ಸಮಯ ಕಳೆಯಲು ನಿಮಗೆ ಅವಕಾಶ ಸಿಗಬಹುದು. ನಿಮ್ಮ ಆರೋಗ್ಯವು ಮೊದಲಿಗಿಂತಲೂ ಚೆನ್ನಾಗಿರಲಿದೆ. ನಿಮ್ಮ ಮಕ್ಕಳ ಸಂಪೂರ್ಣ ಸಹಕಾರ ಪಡೆಯಲಿದ್ದೀರಿ. ನೀವು ನಿಮಗಾಗಿ ಹೊಸ ವಾಹನವನ್ನು ಖರೀದಿಸಲಿದ್ದೀರಿ. ಅವಿವಾಹಿತರ ವಿಚಾರದಲ್ಲಿ ವಿವಾಹದ ಪ್ರಸ್ತಾವನೆಯ ಮಾತುಕತೆ ಉಂಟಾಗಬಹುದು.

ಕುಂಭ: ಕುಂಭ ರಾಶಿಯವರಿಗೆ ಈ ವಾರವು ವಿಶೇಷ ವಾರ ಎನಿಸಲಿದೆ. ನಿಮ್ಮ ಪ್ರೇಮ ಬದುಕು ಚೆನ್ನಾಗಿರಲಿದೆ. ನಿಮ್ಮ ಕೌಟುಂಬಿಕ ಬದುಕಿನ ಮೇಲೆ ಅಹಂ ಪ್ರಭಾವ ಬೀರದಂತೆ ನೋಡಿಕೊಳ್ಳಿ. ಇಲ್ಲದಿದ್ರೆ ನಿಮ್ಮ ಸಂಬಂಧದಲ್ಲಿ ಸಂಘರ್ಷ ಉಂಟಾಗಬಹುದು. ಆರ್ಥಿಕ ಸ್ಥಿತಿಯು ಚೆನ್ನಾಗಿರಲಿದೆ. ಇದು ಆನ್ಲೈನ್‌ ಆದಾಯದ ಮೂಲ ಎನಿಸಲಿದೆ. ಧಾರ್ಮಿಕ ಕೆಲಸದಲ್ಲಿ ನೀವು ಒಂದಷ್ಟು ಸಮಯವನ್ನು ಕಳೆಯಲಿದ್ದೀರಿ. ಶೇರು ಮಾರುಕಟ್ಟೆಯಲ್ಲಿ ಜಾಣ್ಮೆಯಿಂದ ಹೂಡಿಕೆ ಮಾಡಿ. ನಿಮ್ಮ ಕೆಲಸವನ್ನು ಬದಲಾಯಿಸುವ ಮಕುರತು ನೀವು ಯೋಚಿಸುತ್ತಿದ್ದರೆ, ನಿಮ್ಮ ಹಳೆಯ ಕೆಲಸದಲ್ಲೇ ನೀವು ಒಳ್ಳೆಯ ಅವಕಾಶ ಪಡೆಯಲಿದ್ದೀರಿ. ಮನೆಯಲ್ಲಿ ಆರಾಧನೆ ಮತ್ತು ಪ್ರವಚನವನ್ನು ಅಯೋಜಿಸಬಹುದು. ನಿಮ್ಮ ಜೀವನ ಸಂಗಾತಿಯು ಹೊಸ ಕೆಲಸವನ್ನು ಪ್ರಾರಂಭಿಸಲು ನೀವು ಸಹಾಯ ಮಾಡಬಹುದು. ಮಕ್ಕಳ ಜವಾಬ್ದಾರಿಯನ್ನು ಈಡೇರಿಸಲಿದ್ದೀರಿ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ಮನೆಯ ಅಲಂಕಾರಕ್ಕಾಗಿ ಒಂದಷ್ಟು ಶಾಪಿಂಗ್‌ ಮಾಡಬಹುದು. ನಿಮ್ಮ ವೆಚ್ಚದ ಮೇಲೆ ನಿಗಾ ಇರಿಸುವುದು ಒಳ್ಳೆಯದು.

ಮೀನ:ಈ ವಾರ ನಿಮಗೆ ಮೊದಲಿಗಿಂತಲೂ ಒಳ್ಳೆಯ ವಾರ ಎನಿಸಲಿದೆ. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಯಾವುದಾದರೂ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಲು ಎಲ್ಲರೂ ಯೋಜನೆ ರೂಪಿಸಲಿದ್ದಾರೆ. ನಿಮ್ಮ ಆರೋಗ್ಯವು ಮೊದಲಿಗಿಂತಲೂ ಚೆನ್ನಾಗಿರಲಿದೆ. ಹೊರಗಡೆ ತಿನ್ನುವುದು ಮತ್ತು ಪಾನೀಯಗಳನ್ನು ಕುಡಿಯುವುದನ್ನು ಮಾಡಬೇಡಿ. ಆರ್ಥಿಕ ಸ್ಥಿತಿಯು ಚೆನ್ನಾಗಿರಲಿದೆ. ವ್ಯವಹಾರದಲ್ಲಿ ತೊಡಗಿಕೊಂಡಿರುವ ಜನರು ಹೊಸ ಅವಕಾಶಗಳನ್ನು ಪಡೆಯಲಿದ್ದಾರೆ. ಉದ್ಯೋಗದಲ್ಲಿರುವವರು ಹೊಸ ಕೆಲಸದ ಅವಕಾಶ ಪಡೆಯಲಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ಮನೆಯಿಂದ ದೂರವಿದ್ದು ಕೆಲಸ ಮಾಡುವವರು ತಮ್ಮ ಕುಟುಂಬವನ್ನು ಮಿಸ್‌ ಮಾಡಲಿದ್ದಾರೆ. ಅವಿವಾಹಿತರಿಗೆ ಒಳ್ಳೆಯ ವಿವಾಹ ಪ್ರಸ್ತಾಪ ಬರಬಹುದು. ನೀವು ಮನೆಯ ದುರಸ್ತಿಗಾಗಿ ಸಾಕಷ್ಟು ಹಣ ಖರ್ಚು ಮಾಡಲಿದ್ದೀರಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೀವು ಒಂದಷ್ಟು ಸಮಯವನ್ನು ಖರ್ಚು ಮಾಡಲಿದ್ದು, ಇದು ನಿಮ್ಮ ಮನಸ್ಸಿಗೆ ಶಾಂತಿಯನ್ನು ನೀಡಲಿದೆ. ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಣ ಹೂಡಿಕೆ ಮಾಡಲು ನಿರ್ಧರಿಸಲಿದ್ದಾರೆ.

ಓದಿ:ವಾರದ ರಾಶಿ ಭವಿಷ್ಯ: ಉದ್ಯೋಗದಲ್ಲಿ ಬಡ್ತಿ, ದೈನಂದಿನ ಆದಾಯದಲ್ಲಿ ಹೆಚ್ಚಳ

ABOUT THE AUTHOR

...view details