ಹೈದರಾಬಾದ್: ನಮ್ಮ ದೇಶದ ಸಂಶೋಧನಾ ಕ್ಷೇತ್ರದಲ್ಲಿ ಕೈಗಾರಿಕೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಉಪರಾಷ್ಟ್ರಪತಿಗಳಾದ ಜಗದೀಪ್ ಧನಕರ್ ಅಭಿಪ್ರಾಯ ವ್ಯಕ್ತಪಡಿಸಿದರು. ಹೈದರಾಬಾದ್‌ನ ಜಿನೋಮ್ ವ್ಯಾಲಿಯಲ್ಲಿರು ಭಾರತ್ ಬಯೋಟೆಕ್ಗೆ ಲಸಿಕಾ ಘಟಕಕ್ಕೆ ಅವರು ಭೇಟಿ ನೀಡಿದ್ದು, ಈ ವೇಳೆ ತೆಲಂಗಾಣ ಉಸ್ತುವಾರಿ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಜೊತೆಯಾದರು.
ಈ ಭೇಟಿ ನೆನಪಿಗೆ ಔಷಧಿ ಗಿಡ ನೆಟ್ಟ ಅವರು, ಡಿಜಿಟಲ್ ಹೆಲ್ತ್‌ಕೇರ್ ಪ್ರಗತಿಗೆ ಭಾರತ್ ಬಯೋಟೆಕ್‌ನ ಕೊಡುಗೆಯನ್ನು ಶ್ಲಾಘಿಸಿದರು. ಅವರು ಉದ್ಯಮ, ಶೈಕ್ಷಣಿಕ ಮತ್ತು ಎಲ್ಲಾ ವಲಯಗಳಲ್ಲಿ ಹೆಚ್ಚಿದ ಸಂಶೋಧನಾ ಬೆಂಬಲದ ನಡುವಿನ ಸಹಯೋಗದ ಮಹತ್ವವನ್ನು ಒತ್ತಿಹೇಳಿದರು. ಕೋವಿಡ್ ಸಾಂಕ್ರಾಮಿಕತೆ ಸಂದರ್ಭದಲ್ಲಿ ಸಕ್ರಿಯವಾಗಿ ಪಾತ್ರವಹಿಸಿ ಲಸಿಕೆ ಅಭಿವೃದ್ಧಿ ಮಾಡಿದ ಭಾರತ್ ಬಯೋಟೆಕ್‌ನ ಕಾರ್ಯವನ್ನು ಶ್ಲಾಘಿಸಿದರು. ಲಸಿಕೆಗಳನ್ನು ಅಭಿವೃದ್ಧಿ ಮೂಲಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟದಲ್ಲಿ ದೇಶಕ್ಕೆ ಸಹಾಯ ಮಾಡಿದೆ. ಭೇಟಿ ವೇಳೆ ವಿಜ್ಞಾನಿಗಳೊಂದಿಗೆ ಮಾತನಾಡಿದ ಅವರು, ಲಸಿಕೆ ತಯಾರಿಸುವ ಪ್ರಕ್ರಿಯೆ ಕುರಿತು ಅವರು ತಿಳಿದರು. ಸಂಸ್ಥೆಯ ಉತ್ಪಾದನೆಯ ಆಂತರಿಕ ಪ್ರಕ್ರಿಯೆ ಕುರಿತು ವರ್ಚುಯಲ್ ಟೂರ್ ನಡೆಸಿದರು.