ಕರ್ನಾಟಕ

karnataka

ETV Bharat / bharat

ಪ್ರೇಮ ನಿವೇದನೆ ತಿರಿಸ್ಕರಿಸಿದ ಯುವತಿ ಮೇಲೆ ಕಾರು ಹರಿಸಿದ ಯುವಕ - Man Runs Car Over Girl

ಪ್ರೇಮ, ಮದುವೆ ಪ್ರಸ್ತಾಪ ತಿರಸ್ಕರಿಸಿದ ಯುವತಿ ಮೇಲೆ ಯುವಕನೊಬ್ಬ ಕಾರು ಹರಿಸಿ ಕೊಲೆಗೈದ ಘಟನೆ ನಡೆದಿದೆ. ಕೊಲೆಯಾದ ಯುವತಿಯ ಮದುವೆ ಬೇರೆ ಯುವಕನೊಂದಿಗೆ ನವೆಂಬರ್​ನಲ್ಲಿ ನಡೆಸುವ ಬಗ್ಗೆ ನಿಶ್ಚಯವಾಗಿತ್ತು. ಈ ವಿಷಯ ಗೊತ್ತಾಗಿ ಭಗ್ನ ಪ್ರೇಮಿ ಹುಚ್ಚನಂತಾಗಿದ್ದ.

ಪ್ರೇಮ ನಿವೇದನೆ ತಿರಿಸ್ಕರಿಸಿದ ಯುವತಿ ಮೇಲೆ ಕಾರು ಹರಿಸಿದ ಯುವಕ
ಪ್ರೇಮ ನಿವೇದನೆ ತಿರಿಸ್ಕರಿಸಿದ ಯುವತಿ ಮೇಲೆ ಕಾರು ಹರಿಸಿದ ಯುವಕ (ETV Bharat)

By ETV Bharat Karnataka Team

Published : Sep 19, 2024, 12:57 PM IST

ಗೋರಖ್ಪುರ್ (ಉತ್ತರ ಪ್ರದೇಶ):ಪ್ರೀತಿಮತ್ತು ಮದುವೆಯ ಪ್ರಸ್ತಾಪ ತಿರಸ್ಕರಿಸಿದ ಯುವತಿ ಮೇಲೆ ಯುವಕ ಕಾರು ಹರಿಸಿ ಕೊಲೆಗೈದ ಆಘಾತಕಾರಿ ಘಟನೆ ಉತ್ತರಪ್ರದೇಶದ ಗೋರಖ್ಪುರ್ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. ಪ್ರಿನ್ಸ್ ಯಾದವ್ ಕೃತ್ಯ ಎಸಗಿದ ಆರೋಪಿ.

ಕೃಷ್ಣನಗರ ನಿವಾಸಿಯಾಗಿರುವ ಆರೋಪಿ ಪ್ರಿನ್ಸ್ ಯಾದವ್ ಯುವತಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಆದರೆ ಯುವತಿ ಇದನ್ನು ತಿರಸ್ಕರಿಸಿದ್ದಳು. ಆದರೂ ಬೆಂಬಿಡದೆ ಕಳೆದ ಮೂರು ತಿಂಗಳಿಂದ ಮದುವೆಯಾಗುವಂತೆ ಪೀಡಿಸುತ್ತಿದ್ದ. ಆದರೆ ಯುವತಿ ನಿರಾಕರಿಸಿದ್ದಳು. ಜೊತೆಗೆ ಯುವಕನ ಮೊಬೈಲ್ ನಂಬರ್ ಬ್ಲಾಕ್ ಮಾಡಿದರೂ ಬಿಡದೆ ವಿವಿಧ ಮೊಬೈಲ್​ ನಂಬರ್​ಗಳಿಂದ ನಿರಂತರವಾಗಿ ಯುವತಿಗೆ ಕರೆ ಮಾಡುತ್ತಲೇ ಇದ್ದ. ಯುವತಿ ಕರೆಗಳುನ್ನು ತಿರಸ್ಕರಿಸುತ್ತಲೇ ಇದ್ದಳು. ಇದರಿಂದ ಕೋಪಗೊಂಡ ಯುವಕ ಮಾನಸಿಕ ನಿಯಂತ್ರಣ ಕಳೆದುಕೊಂಡಿದ್ದ. ಯುವಕನ ಕಿರುಕುಳದ ಬಗ್ಗೆ ತಮ್ಮ ಪೋಷಕರಿಗೆ ಯುವತಿ ಮಾಹಿತಿ ನೀಡಿದ್ದಳು. ಬಳಿಕ ಅವರ ಪೋಷಕರು ಯುವಕನನ್ನು ತರಾಟೆಗೆ ತೆಗೆದುಕೊಂಡು, ತಮ್ಮ ಪುತ್ರಿಯ ತಂಟೆಗೆ ಬರದಂತೆ ಎಚ್ಚರಿಕೆ ನೀಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಯುವತಿ ಮದುವೆ ಸಿದ್ಧತೆಯಲ್ಲಿದ್ದ ಕುಟುಂಬಸ್ಥರು: ನನ್ನ ಸಹೋದರಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ನನ್ನ ಸಹೋದರಿಗೆ ಯುವಕ ಪ್ರಿನ್ಸ್ ಯಾದವ್ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ಆದರೆ ನನ್ನ ಸಹೋದರಿಗೆ ಈಗಾಗಲೇ ಮದುವೆ ನಿಶ್ಚಯವಾಗಿದ್ದರಿಂದ ಆತನ ಮದುವೆ ಪ್ರಪೋಸಲ್​ಅನ್ನು ತಿರಸ್ಕರಿಸಿದ್ದಳು. ಸಹೋದರಿಯ ಮದುವೆ ಕಾರ್ಯಕ್ರಮ ಇದೇ ನವೆಂಬರ್​ನಲ್ಲಿ ನಿಗದಿಯಾಗಿತ್ತು ಎಂದು ಕೊಲೆಯಾದ ಯುವತಿಯ ಸಹೋದರ ಕಣ್ಣೀರು ಹಾಕಿದ್ದಾರೆ.

ಮದುವೆಯಾಗಲ್ಲ ಎಂದಿದ್ದಕ್ಕೆ ಕಾರು ಹರಿಸಿದ ಯುವಕ: ಬುಧವಾರ ನನ್ನ ಸಹೋದರಿ ಕಾಲೇಜಿಗೆ ಹೋಗಲು ಬಸ್​ ನಿಲ್ದಾಣದತ್ತ ತೆರಳುತ್ತಿದ್ದಳು. ಈ ವೇಳೆ ಆಕೆಯ ಮೇಲೆ ಆರೋಪಿ ಯುವಕ ಕಾರು ಹರಿಸಿ ಕೊಲೆಗೈದಿದ್ದಾನೆ. ಘಟನೆ ವೇಳೆ ಯುವಕನೂ ಗಾಯಗೊಂಡಿದ್ದು, ಸ್ಥಳದಲ್ಲಿದ್ದ ಪೊಲೀಸರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಯುವತಿ ಸಹೋದರ ತಿಳಿಸಿದ್ದಾರೆ.

ಯುವತಿ ಕೊಲೆ ಪ್ರಕರಣ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದೇವೆ. ಆದಷ್ಟು ಬೇಗ ಸಾಕ್ಷಿಗಳನ್ನು ಕಲೆ ಹಾಕುತ್ತಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸುತ್ತಿದ್ದೇವೆ. ಆರೋಪಿ ಬಳಸಿದ ಕಾರು ರಾಜೀವ್ ಪ್ರಜಾಪತಿ ಎಂಬುವರ ಹೆಸರಲ್ಲಿ ನೋಂದಣಿಯಾಗಿದೆ. ಯುವತಿಯ ಮರಣೋತ್ತರ ಪರೀಕ್ಷೆ ಆಗಿದ್ದು, ವರದಿ ಬರಬೇಕಿದೆ ಎಂದು ಎಸ್​ಪಿ ಡಾ.ಗೌರವ್ ತಿಳಿಸಿದ್ದಾರೆ. ಬುಧವಾರ ಯುವತಿಯ ಅಂತ್ಯಕ್ರಿಯೆ ನೇರವೇರಿಸಿದ್ದು, ಆಕೆಯ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ.

ಇದನ್ನೂ ಓದಿ: ನೀರಜ್​ ಚೋಪ್ರಾಗೆ ವಿಶೇಷ ರೀತಿಯಲ್ಲಿ ಅಭಿನಂದನೆ ಸಲ್ಲಿಸಿದ ಮನು ಭಾಕರ್​; ಮತ್ತೆ ಪ್ರೀತಿ, ಮದುವೆ ವದಂತಿ! - Manu Bhakar Wishes Neeraj Chopra

ಇದನ್ನೂ ಓದಿ:8 ತಿಂಗಳಲ್ಲಿ ಈ ಮಹಾನಗರದಲ್ಲಿ 500 ಪೋಕ್ಸೋ ಪ್ರಕರಣ ದಾಖಲು: ಸ್ನೇಹ, ಪ್ರೀತಿ ಹೆಸರಲ್ಲಿ ಮೋಸ ಹೋದವರೇ ಹೆಚ್ಚು - POCSO cases

ABOUT THE AUTHOR

...view details