ಹೈದರಾಬಾದ್: ಇಲ್ಲಿನ ಅಮೆರಿಕ ರಾಯಭಾರಿ ಕಚೇರಿ ಸತತ ಎರಡನೇ ವರ್ಷ ಕೂಡ ಭಾರತೀಯರಿಗೆ 1 ಮಿಲಿಯನ್ ವಲಸಿಗರಲ್ಲದ ವೀಸಾಗಳನ್ನು ಭಾರತೀಯರಿಗೆ ವಿತರಣೆ ಮಾಡುವ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಸಿರುವುದಾಗಿ ಘೋಷಿಸಿದೆ. ಈ ಬೆಳವಣಿಗೆ ಅಮೆರಿಕ ಮತ್ತು ಭಾರತದ ಸಂಬಂಧ ಬಲಗೊಳಿಸುವ ಮತ್ತು ರಾಯಭಾರ ಸೇವೆಯನ್ನು ಸಮರ್ಥವಾಗಿ ನೀಡುವ ಅಮೆರಿಕದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಯುಎಸ್ ರಾಯಭಾರ ಕಚೇರಿ ತಿಳಿಸಿದೆ.
ಅಮೆರಿಕ (ಯುನೈಟೆಡ್ ಸ್ಟೇಟ್) ಯೋಜನೆಯ ಭಾಗ : ಜನವರಿ ಮತ್ತು ನವೆಂಬರ್ 2024ರಲ್ಲಿ 2 ಮಿಲಿಯನ್ ಭಾರತೀಯರು ಅಮೆರಿಕ ಪ್ರವಾಸ ಕೈಗೊಂಡಿದ್ದು, 2023ಕ್ಕೆ ಹೋಲಿಕೆ ಮಾಡಿದಾಗ ಶೇ 26ರಷ್ಟು ಏರಿಕೆ ಕಂಡಿದೆ. 5 ಮಿಲಿಯನ್ಗೂ ಹೆಚ್ಚು ಭಾರತೀಯರಿಗೆ ಪ್ರವಾಸ, ಉದ್ಯಮ ಮತ್ತು ಶಿಕ್ಷಣ ಸೇರಿದಂತೆ ವಲಸಿಗರಲ್ಲದ ವೀಸಾವನ್ನು ವಿತರಿಸಲಾಗಿದೆ.
ವಿದ್ಯಾರ್ಥಿ ವೀಸಾದಲ್ಲಿ ದಾಖಲೆ:ಅಮೆರಿಕದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ಭಾರತೀಯರ ಸಂಖ್ಯೆ ಹೆಚ್ಚಿದೆ. 2008-09ರ ಶೈಕ್ಷಣಿಕ ವರ್ಷದಿಂದ ಈ ಸ್ಥಾನ ಮುಂದುವರೆದಿದೆ.
ಸದ್ಯ ಅಮೆರಿಕದಲ್ಲಿ ಅಂದಾಜು 3,31,000 ಭಾರತೀಯರು ಉನ್ನತ ಶಿಕ್ಷಣ ಪಡೆಯುತ್ತಿದ್ದು, ಪದವಿಗೆ 2,00,000 ವಿದ್ಯಾರ್ಥಿಗಳ ನೋಂದಣಿ ಮಾಡಿಕೊಂಡಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಇದು ಶೇ 19ರಷ್ಟು ಹೆಚ್ಚಳವಾಗಿದೆ.