ಕರ್ನಾಟಕ

karnataka

ETV Bharat / bharat

ಉಜ್ಜೈನಿಯಲ್ಲಿ ಭೀಕರ ಕೊಲೆ, ಬಿಜೆಪಿ ಮುಖಂಡ ಹಾಗೂ ಪತ್ನಿಯ ಹತ್ಯೆ.. ತನಿಖೆಗೆ ಎಸ್​ಐಟಿ ರಚನೆ - ಬಿಜೆಪಿ ಮುಖಂಡ ಹಾಗೂ ಪತ್ನಿಯ ಹತ್ಯೆ

ಮಧ್ಯೆ ಪ್ರದೇಶದಲ್ಲಿ ಬಿಜೆಪಿ ನಾಯಕ ಹಾಗೂ ಅವರ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಮನೆಯಲ್ಲಿ ದರೋಡೆ ಮಾಡಿ ಬಳಿಕ ಇಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.

Etv BharatBJP leader murdered in Ujjain
Etv Bharatಉಜ್ಜೈನಿಯಲ್ಲಿ ಭೀಕರ ಕೊಲೆ, ಬಿಜೆಪಿ ಮುಖಂಡ ಹಾಗೂ ಪತ್ನಿಯ ಹತ್ಯೆ.. ತನಿಖೆಗೆ ಎಸ್​ಐಟಿ ರಚನೆ

By ETV Bharat Karnataka Team

Published : Jan 27, 2024, 9:02 PM IST

ಉಜ್ಜೈನಿ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬೆಚ್ಚಿ ಬೀಳುವ ಘಟನೆಯೊಂದು ನಡೆದಿದೆ. ಅಪರಿಚಿತ ದುಷ್ಕರ್ಮಿಗಳು ಬಿಜೆಪಿ ಮುಖಂಡ ಹಾಗೂ ಮಾಜಿ ಮಂಡಲ ಅಧ್ಯಕ್ಷ ರಾಮನಿವಾಸ್ ಕುಮಾವತ್ ಮತ್ತು ಅವರ ಪತ್ನಿಯನ್ನು ಕೊಂದು ಹಾಕಿದ್ದಾರೆ. ಉಜ್ಜಯಿನಿಯ ದೇವಾಸ್ ರಸ್ತೆಯಲ್ಲಿರುವ ಪಿಪ್ಲೋಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊಲೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದಿದ್ದು, ಪರಿಸ್ಥಿತಿಯ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದುಷ್ಕರ್ಮಿಗಳು ದರೋಡೆ ನಡೆಸಿ, ಬಿಜೆಪಿ ನಾಯಕ ಹಾಗೂ ಅವರ ಪತ್ನಿಯನ್ನು ಹತ್ಯೆ ಮಾಡಿರುವುದು ಗ್ರಾಮದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗುವಂತೆ ಮಾಡಿದೆ.

ಮನೆಯಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿ: ಶನಿವಾರ ಬೆಳಗ್ಗೆ ಈ ಅವಳಿ ಕೊಲೆ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು ಕೂಡ ಹಾಜರಿದ್ದರು. ಮನೆಯೊಳಗೆ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇದನ್ನು ಗಮನಿಸಿದರೆ ದುಷ್ಕರ್ಮಿಗಳು ದರೋಡೆ ಮಾಡಿ ಬಳಿಕ ಇಬ್ಬರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕೊಲೆ ವಿಚಾರ ಗೊತ್ತಾಗುತ್ತಿದ್ದಂತೆ ಗ್ರಾಮಸ್ಥರು ಸ್ಥಳದಲ್ಲಿಜಮಾಯಿಸಿದ್ದರು. ಈ ಮಧ್ಯೆ ವಿಷಯ ತಿಳಿದು ಸ್ಥಳಕ್ಕೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಚಿನ್​ ಶರ್ಮಾ ಹಾಗೂ ಹೆಚ್ಚುವರಿ ಎಸ್​​​​ಪಿ ನಿತೇಶ್ ಭಾರ್ಗವ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ತಕ್ಷಣವೇ ದುಷ್ಕರ್ಮಿಗಳ ಬಂಧನ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದೇ ವೇಳೆ ಮಾತನಾಡಿದ ಎಸ್​​ಪಿ, ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಹೇಳಿದರು. ಈ ನಡುವೆ ಹತ್ಯೆಯಾದ ಬಿಜೆಪಿ ನಾಯಕನಿಗೆ ಒಬ್ಬ ಮಗ ಮತ್ತು ಮಗಳಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣದ ತನಿಖೆಗೆ ಎಸ್​ಐಟಿ ರಚನೆ: ಬಿಜೆಪಿ ನಾಯಕ ಮತ್ತು ಅವರ ಪತ್ನಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ ಇಬ್ಬರನ್ನೂ ಹತ್ಯೆ ಮಾಡಿದ್ದಾರೆ. ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಮನೆಯ ಸಿಸಿಟಿವಿ ಕ್ಯಾಮೆರಾಗಳಿಗೂ ಹಾನಿಯಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಫೋಸ್ಟ್​ ಮಾರ್ಟಂ ವರದಿ ಬಂದ ನಂತರ ಹತ್ಯೆಗೆ ಯಾವ ಅಸ್ತ್ರ ಬಳಸಲಾಗಿದೆ ಎಂಬುದು ಗೊತ್ತಾಗಲಿದೆ. ಇನ್ನು ಅವಳಿ ಕೊಲೆಗಳ ರಹಸ್ಯ ಭೇದಿಸಲು ಎಸ್‌ಐಟಿ ರಚನೆಯಾಗಲಿದೆ. ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಚಿನ್ ಶರ್ಮಾ ಹೇಳಿದ್ದಾರೆ.

ಇದನ್ನು ಓದಿ:ಮಾಜಿ ಪ್ರಿಯತಮೆಯ ದೂರಿನಿಂದ ಜೈಲು ಪಾಲು: ಹೊರಬಂದವನೇ ಪ್ರತಿ ದೂರು ದಾಖಲಿಸಿದ ಯುವಕ

ABOUT THE AUTHOR

...view details