ಕರ್ನಾಟಕ

karnataka

ETV Bharat / bharat

ತಮಿಳುನಾಡಿನ ಉಪ ಮುಖ್ಯಮಂತ್ರಿಯಾಗಿ ಉದಯನಿಧಿ ಸ್ಟಾಲಿನ್ ನಾಳೆ ಪ್ರಮಾಣ ವಚನ ಸ್ವೀಕಾರ - Udhayanidhi Stalin

ಭಾನುವಾರ (ನಾಳೆ) ಮಧ್ಯಾಹ್ನ 3.30ಕ್ಕೆ ಚೆನ್ನೈನ ರಾಜಭವನದಲ್ಲಿ ನಿಯೋಜಿತ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ತಮಿಳುನಾಡಿನ ಉಪಮುಖ್ಯಮಂತ್ರಿಯಾಗಿ ಉದಯನಿಧಿ ಸ್ಟಾಲಿನ್​​ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Udhayanidhi Stalin
ಉದಯನಿಧಿ ಸ್ಟಾಲಿನ್ (ETV Bharat)

By ETV Bharat Karnataka Team

Published : Sep 28, 2024, 10:55 PM IST

ಚೆನ್ನೈ (ತಮಿಳುನಾಡು): ತಮಿಳುನಾಡಿನ ಉಪ ಮುಖ್ಯಮಂತ್ರಿಯಾಗಿ ಉದಯನಿಧಿ ಸ್ಟಾಲಿನ್ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಅವರಿಗೆ ಈಗಿರುವ ಖಾತೆಗಳ ಜೊತೆಗೆ ಯೋಜನೆ ಮತ್ತು ಅಭಿವೃದ್ಧಿ ಖಾತೆ ಹಂಚಿಕೆ ಮಾಡಲು ತಮಿಳುನಾಡು ಮುಖ್ಯಮಂತ್ರಿ ಎಂ. ಕೆ ಸ್ಟಾಲಿನ್ ಅವರು ತಮಿಳುನಾಡು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದಾರೆ.

ಇದಲ್ಲದೇ ಮಾನ್ಯ ಮುಖ್ಯಮಂತ್ರಿಗಳು ವಿ. ಸೆಂಥಿಲ ಬಾಲಾಜಿ, ಡಾ. ಗೋವಿ ಅವರನ್ನು ಸೇರ್ಪಡೆಗೊಳಿಸಲು ಶಿಫಾರಸು ಮಾಡಿದ್ದಾರೆ. ಸಚಿವ ಸಂಪುಟದಲ್ಲಿ ಚೆಜಿಯಾನ್, ಆರ್. ರಾಜೇಂದ್ರನ್ ಮತ್ತು ಎಸ್. ಎಂ ನಾಸರ್ ಇದ್ದಾರೆ.

ರಾಜ್ಯಪಾಲರು ಶಿಫಾರಸುಗಳನ್ನು ಅನುಮೋದಿಸಿದ್ದಾರೆ ಎಂದು ರಾಜಭವನ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ನಾಳೆ (29.9.2024) ಭಾನುವಾರ ಮಧ್ಯಾಹ್ನ 3.30 ಗಂಟೆಗೆ ಚೆನ್ನೈನ ರಾಜಭವನದಲ್ಲಿ ನಿಯೋಜಿತ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.

ಹಾಲು ಮತ್ತು ಡೈರಿ ಅಭಿವೃದ್ಧಿ ಸಚಿವ ಟಿ. ಮನೋ ತಂಗರಾಜ್, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಅನಿವಾಸಿ ತಮಿಳರ ಕಲ್ಯಾಣ ಸಚಿವ ಗಿಂಗಿ ಕೆ. ಎಸ್ ಮಸ್ತಾನ್ ಮತ್ತು ಪ್ರವಾಸೋದ್ಯಮ ಸಚಿವ ತಿರು ಕೆ. ರಾಮಚಂದ್ರನ್ ಅವರನ್ನು ಸಂಪುಟದಿಂದ ಕೈಬಿಡಲು ಮುಖ್ಯಮಂತ್ರಿಗಳು ಮಾಡಿರುವ ಶಿಫಾರಸನ್ನು ರಾಜ್ಯಪಾಲರು ಅನುಮೋದಿಸಿದ್ದಾರೆ. ಅಲ್ಲದೆ, ಕೆಲ ಸಚಿವರ ಖಾತೆಗಳ ಬದಲಾವಣೆ ಮತ್ತು ವಿಷಯ ಹಂಚಿಕೆಗಾಗಿ ಗೌರವಾನ್ವಿತ ಮುಖ್ಯಮಂತ್ರಿಯವರ ಶಿಫಾರಸನ್ನು ರಾಜ್ಯಪಾಲರು ಅನುಮೋದಿಸಿದ್ದಾರೆ.

ಇದನ್ನೂ ಓದಿ :20 ಸಾವಿರ ಮಂದಿಗೆ ಉದ್ಯೋಗ: ರಾಣಿಪೇಟೆಗೆ ಬರಲಿದೆ ಟಾಟಾದ ಜಾಗ್ವಾರ್, ಲ್ಯಾಂಡ್‌ರೋವರ್ ಕಾರ್ಖಾನೆ! - Job ready for 20 thousand people

ABOUT THE AUTHOR

...view details