ಕರ್ನಾಟಕ

karnataka

ETV Bharat / bharat

ತೆಹ್ರಿಕ್ ಇ ಹುರಿಯತ್, ಜಮ್ಮು ಕಾಶ್ಮೀರ ಮುಸ್ಲಿಂ ಲೀಗ್ ಸಂಘಟನೆಗಳ ಮೇಲೆ 5 ವರ್ಷ ನಿಷೇಧಕ್ಕೆ ಕೋರ್ಟ್​ ಮುದ್ರೆ - UAPA tribunal verdict

ಜಮ್ಮು ಕಾಶ್ಮೀರವನ್ನು ಪಾಕಿಸ್ತಾನದಲ್ಲಿ ವಿಲೀನ ಮಾಡುವ ಗುರಿ ಹೊಂದಿದ್ದ ತೆಹ್ರಿಕ್​ ಇ ಹುರಿಯತ್ ಮತ್ತು ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ (ಮಸರತ್ ಆಲಂ ಬಣ) ನಿಷೇಧವನ್ನು ಯುಎಪಿಎ ನ್ಯಾಯಮಂಡಳಿ ಎತ್ತಿಹಿಡಿದಿದೆ.

ತೆಹ್ರಿಕ್ ಇ ಹುರಿಯತ್
ತೆಹ್ರಿಕ್ ಇ ಹುರಿಯತ್ (ETV Bharat)

By PTI

Published : Jun 22, 2024, 9:14 PM IST

ನವದೆಹಲಿ:ಭಯೋತ್ಪಾದನೆ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿರುವ ಆರೋಪದ ಮೇಲೆ ಕೇಂದ್ರ ಸರ್ಕಾರದಿಂದ 5 ವರ್ಷ ನಿಷೇಧಕ್ಕೊಳಗಾಗಿರುವ ತೆಹ್ರಿಕ್ ಇ ಹುರಿಯತ್, ಜಮ್ಮು ಕಾಶ್ಮೀರ ಮುಸ್ಲಿಂ ಲೀಗ್ ಸಂಘಟನೆಗಳ ಮೇಲಿನ ನಿರ್ಬಂಧವನ್ನು ಯುಎಪಿಎ ನ್ಯಾಯಮಂಡಳಿ ಶನಿವಾರ ಎತ್ತಿಹಿಡಿದಿದೆ.

ತೆಹ್ರಿಕ್​ ಇ ಹುರಿಯತ್ ಮತ್ತು ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ (ಮಸರತ್ ಆಲಂ ಬಣ) ಸಂಘಟನೆಗಳ ಮೇಲೆ ಹೇರಲಾಗಿದ್ದ ನಿಷೇಧವನ್ನು ನಿರ್ಧರಿಸಲು ದೆಹಲಿ ಹೈಕೋರ್ಟ್ ನ್ಯಾಯಾಧೀಶ ಸಚಿನ್ ದತ್ತಾ ಅವರ ಏಕಸದಸ್ಯ ನ್ಯಾಯಮಂಡಳಿಯನ್ನು ಜನವರಿಯಲ್ಲಿ ರಚಿಸಲಾಗಿತ್ತು. ಕಠಿಣ ಯುಎಪಿಎ ಕಾಯ್ದೆಯಡಿ ಸಂಘಟನೆಗಳನ್ನು ನಿಷೇಧಿಸಿದ್ದನ್ನು ಒಪ್ಪಿಕೊಂಡಿದೆ.

ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದೊಂದಿಗೆ ವಿಲೀನಗೊಳಿಸಲು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸಲು ಉಗ್ರ ಸಂಘಟನೆಗಳ ಜೊತೆಗೂಡಿ ಈ ಎರಡೂ ಸಂಘಟನೆಗಳು ಕಾನೂನುಬಾಹಿರ ಚಟುವಟಿಕೆ ನಡೆಸಿವೆ. ಕಣಿವೆಯಲ್ಲಿ ಪ್ರತ್ಯೇಕತಾವಾದಿ ಧೋರಣೆ ಹೊಂದಿದ್ದು ಸಾಬೀತಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಪರವಾಗಿ ಈ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಕಣಿವೆಯಲ್ಲಿ ಉಗ್ರಗಾಮಿ ಕೃತ್ಯಗಳಿಗೆ ನೆರವು ನೀಡಿವೆ ಎಂಬ ಕೇಂದ್ರದ ವಾದವನ್ನೂ ನ್ಯಾಯಮಂಡಳಿ ಎತ್ತಿಹಿಡಿದಿದೆ.

ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಮತ್ತು ವಕೀಲ ರಜತ್ ನಾಯರ್ ಅವರು ನ್ಯಾಯಮಂಡಳಿಯ ಮುಂದೆ ಸರ್ಕಾರದ ಪರ ವಾದ ಮಂಡಿಸಿದರು. ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ (ಮಸರತ್ ಆಲಂ ಬಣ) ಸಂಘಟನೆಯನ್ನು ರಾಷ್ಟ್ರವಿರೋಧಿ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಕಾರಣಕ್ಕಾಗಿ 2023 ರ ಡಿಸೆಂಬರ್ 27 ರಂದು ಯುಎಪಿಎ ಅಡಿಯಲ್ಲಿ ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ನಿಷೇಧಿಸಿದರೆ, ಮೃತ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ಸ್ಥಾಪಿಸಿದ ತೆಹ್ರಿಕ್ ಇ ಹುರಿಯತ್ ಅನ್ನು ಡಿಸೆಂಬರ್ 31, 2023 ರಂದು ಐದು ವರ್ಷ ನಿಷೇಧಿಸಿ ಆದೇಶಿಸಲಾಗಿದೆ.

ಕೇಂದ್ರದ ವಾದವೇನು?:ಉಗ್ರ ಸಂಘಟನೆಗಳ ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲ, ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಲು ಪಿತೂರಿ, ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳಿಗೆ ಹಲವು ಮೂಲಗಳಿಂದ ಹಣ ಸಂಗ್ರಹಿಸಿ ನೆರವು ನೀಡುವುದು ಸೇರಿದಂತೆ ಹಲವು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೆಹ್ರಿಕ್ ಇ ಹುರಿಯತ್​ ನಾಯಕರು ಮತ್ತು ಸದಸ್ಯರು ತೊಡಗಿಸಿಕೊಂಡಿದ್ದರು. ನಿಷೇಧಿತ ಸಂಘಟನೆಗಳ ಸದಸ್ಯರ ದೇಶವಿರೋಧಿ ಚಟುವಟಿಕೆಗಳಿಂದ ಸಾಂವಿಧಾನಿಕ ಅಧಿಕಾರ ಸ್ಥಾಪನೆ, ದೇಶದ ಸಮಗ್ರತೆ, ಸಾರ್ವಭೌಮತೆ, ಭದ್ರತೆ ಮತ್ತು ಕೋಮು ಸೌಹಾರ್ದತೆಗೆ ಉಂಟಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ನಿಷೇಧಕ್ಕೆ ಕಾರಣ ನೀಡಿತ್ತು.

ಮುಸ್ಲಿಂ ಲೀಗ್ (ಮಸರತ್ ಆಲಂ ಬಣ) ಜಮ್ಮು ಕಾಶ್ಮೀರವನ್ನು ಭಾರತದಿಂದ ವಿಘಟಿಸಿ ಸ್ವತಂತ್ರವನ್ನಾಗಿ ಮಾಡುವ ದುರುದ್ದೇಶ ಹೊಂದಿತ್ತು. ಜೊತೆಗೆ ಪಾಕಿಸ್ತಾನದಲ್ಲಿ ವಿಲೀನ, ಇಸ್ಲಾಮಿಕ್​ ಆಡಳಿತವನ್ನು ಸ್ಥಾಪಿಸುವ ಸಂಘಟನೆಯ ಗುರಿಯಾಗಿತ್ತು ಎಂದು ಕೇಂದ್ರ ಸರ್ಕಾರ ಆರೋಪಿಸಿದೆ.

ಇದನ್ನೂ ಓದಿ:ಜೂನ್ 26ರಿಂದ ಹೊಸ ದೂರಸಂಪರ್ಕ ಕಾಯ್ದೆ ಜಾರಿ: ಏನಿದು ಹೊಸ ಟೆಲಿಕಾಂ ಕಾಯ್ದೆ?, ಏನೆಲ್ಲ ಬದಲಾವಣೆ? - NEW TELECOM ACT

ABOUT THE AUTHOR

...view details