ಬರೇಲಿ, ಉತ್ತರಪ್ರದೇಶ:ಬರೇಲಿಯಲ್ಲಿ ಪೊಲೀಸರ ದೊಡ್ಡ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಶುಕ್ರವಾರ ಬರೇಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾದ ಇಬ್ಬರು ಕೈದಿಗಳು ನ್ಯಾಯಾಲಯದ ಲಾಕಪ್‌ನಿಂದ ಪರಾರಿಯಾಗಿದ್ದಾರೆ. ಜೈಲಿನ ಕಿಟಕಿಯ ಸರಳುಗಳನ್ನು ಕತ್ತರಿಸಿ ಕೈದಿಗಳು ಪರಾರಿಯಾಗಿರುವುದು ಪೊಲೀಸರ ನಿರ್ಲಕ್ಷ್ಯ ಎದ್ದು ಕಾಣುವಂತೆ ಮಾಡಿದೆ.
ಸಂಜೆ ಎಲ್ಲಾ ಕೈದಿಗಳನ್ನು ವಿಚಾರಣೆಯಿಂದ ಹಿಂದಕ್ಕೆ ಕರೆದೊಯ್ಯುವಾಗ, ಎಣಿಕೆಯಲ್ಲಿ ಇಬ್ಬರು ಕೈದಿಗಳು ಕಡಿಮೆ ಆಗಿದ್ದರು. ಈ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 3 ಪೊಲೀಸ್ ಸಿಬ್ಬಂದಿಯನ್ನು ಎಸ್‌ಎಸ್‌ಪಿ ಅಮಾನತುಗೊಳಿಸಿದ್ದಾರೆ.
ಶುಕ್ರವಾರ ಬರೇಲಿ ನ್ಯಾಯಾಲಯದಲ್ಲಿ ಸಂಚಲನ ಉಂಟಾಗಿದ್ದು, ಕೈದಿಗಳನ್ನು ಮತ್ತೆ ಜೈಲಿಗೆ ಕರೆದೊಯ್ಯುವ ಸರದಿ ಬಂದಿತ್ತು. ಎಣಿಕೆಯಲ್ಲಿ 2 ಕೈದಿಗಳು ಕಡಿಮೆ ಇದ್ದರು. ಇಬ್ಬರೂ ಕೈದಿಗಳು ಜೈಲಿನ ಕಿಟಕಿಯ ಸರಳುಗಳನ್ನು ಕತ್ತರಿಸಿ ಪರಾರಿಯಾಗಿದ್ದರು. ಮರದ ಕೊಂಬೆಯ ಸಹಾಯದಿಂದ ಗೋಡೆ ಹಾರಿ ಎಸ್ಕೇಪ್ ಆಗಿದ್ದರು. ಕೈದಿಗಳ ರಕ್ಷಣೆಯಲ್ಲಿ ನಿರತರಾಗಿರುವ ಪೊಲೀಸ್ ಸಿಬ್ಬಂದಿಗೆ ಇದರ ಅರಿವೇ ಇರಲಿಲ್ಲ. ಇದರಿಂದ ಪೊಲೀಸರಲ್ಲಿ ಆತಂಕ ಮೂಡಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ತರಾತುರಿಯಲ್ಲಿ ಎಸ್‌ಎಸ್‌ಪಿ ಮತ್ತು ಇತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನ್ಯಾಯಾಲಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಳವಡಿಸಲಾದ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಆದರೆ, ತಪ್ಪಿಸಿಕೊಂಡ ಕೈದಿಗಳ ಯಾವುದೇ ಕುರುಹು ಪತ್ತೆಯಾಗಲಿಲ್ಲ.