ಕರ್ನಾಟಕ

karnataka

ETV Bharat / bharat

ತೃಣಮೂಲ ಕಾಂಗ್ರೆಸ್​ಗೆ ಮತ್ತೊಂದು ಆಘಾತ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿರಿಯ ನಾಯಕ ತಪಸ್ ರಾಯ್ - TMC Party

ಹಿರಿಯ ಮುಖಂಡ ಹಾಗೂ ಬಾರಾನಗರ್ ಶಾಸಕ ತಪಸ್ ರಾಯ್ ಅವರು ಇಂದು ಟಿಎಂಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

tmc-mla-tapas-roy-quits-party
ತೃಣಮೂಲ ಕಾಂಗ್ರೆಸ್​ಗೆ ಮತ್ತೊಂದು ಅಘಾತ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿರಿಯ ನಾಯಕ ತಪಸ್ ರಾಯ್

By ETV Bharat Karnataka Team

Published : Mar 4, 2024, 10:21 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಪಕ್ಷಕ್ಕೆ ರಾಜೀನಾಮೆ ನೀಡಿದ ಕೇವಲ 48 ಗಂಟೆಗಳಲ್ಲೇ, ಪಕ್ಷದ ಮತ್ತೊಬ್ಬ ಹಿರಿಯ ಮುಖಂಡ ಹಾಗೂ ಬಾರಾನಗರ್ ಶಾಸಕ ತಪಸ್ ರಾಯ್ ಅವರು ಇಂದು ಟಿಎಂಸಿಗೆ ರಾಜೀನಾಮೆ ನೀಡಿದ್ದಾರೆ. ಮತ್ತೊಂದೆಡೆ, ತಪಸ್ ರಾಯ್ ಅವರ ಕೋಪ ಮತ್ತು ಅಸಮಾಧಾನ ಶಮನಗೊಳಿಸಲು ಸಚಿವ ಬ್ರಾತ್ಯ ಬಸು ಮತ್ತು ಕುನಾಲ್ ಘೋಷ್ ಅವರು ರಾಯ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಆದರೆ, ರಾಯ್ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಮನಸ್ಥಿತಿಯಲ್ಲಿಲ್ಲ ಎಂಬುದು ಸ್ಪಷ್ಟವಾಗಿದೆ.

ಬ್ರಾತ್ಯ ಮತ್ತು ಕುನಾಲ್ ಮನೆಯಿಂದ ಹೊರಟ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಯ್, ಪಕ್ಷದ ಕೆಲವು ನಿರ್ಧಾರಗಳಿಂದ ನಿರಾಶೆಗೊಂಡಿದ್ದೇನೆ. ಪಕ್ಷದಲ್ಲಿ ತುಂಬಾ ಭ್ರಷ್ಟಾಚಾರವಿದೆ ನಂತರ ಸಂದೇಶಖಾಲಿ ಘಟನೆ. ಅದಕ್ಕೆ ನನ್ನ ವೈಯಕ್ತಿಕ ಅವಮಾನ, ಅಗೌರವ ಮತ್ತು ಪರಕೀಯತೆ ಇವೆಲ್ಲವೂ ನನ್ನನ್ನು ಕಾಡುತ್ತಿವೆ. ಕಳೆದ ಕೆಲವು ದಿನಗಳಿಂದ ನಾನು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದೇನೆ. ಇಷ್ಟು ವರ್ಷಗಳಲ್ಲಿ ನಾನು ಬಜೆಟ್ ಅಧಿವೇಶನಕ್ಕೆ ಸರಿಯಾಗಿ ಹಾಜರಾಗದಿರುವುದು ಇದೇ ಮೊದಲ ಬಾರಿಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನು ಕಳೆದ 24 ವರ್ಷಗಳಿಂದ ತೃಣಮೂಲ ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿದ್ದೇನೆ. ಕಳೆದ ಜನವರಿ 12 ರಂದು ಜಾರಿ ನಿರ್ದೇಶನಾಲಯ ನನ್ನ ಮನೆಗೆ ದಾಳಿ ನಡೆಸಿತ್ತು. ಹತ್ತಿರದ ಸ್ವಾಮಿ ವಿವೇಕಾನಂದರ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಕೆಲವು ಹಿರಿಯ ನಾಯಕರು ಭಾಗವಹಿಸಿದ್ದರು. ಆ ಕಾರ್ಯಕ್ರಮಕ್ಕೆ ಪಕ್ಷದ ಯಾರೂ ನನ್ನನ್ನು ಕರೆಯಲಿಲ್ಲ. ಟಿಎಂಸಿ ಪಕ್ಷದ ಪರಿಸ್ಥಿತಿ ಹೇಗಿದೆ ಎಂದರೆ, ಇಂದು ಬೆಳಗ್ಗೆ ಕುನಾಲ್ ಮತ್ತು ಬ್ರಾತ್ಯ ನನ್ನ ಮನೆಗೆ ಬಂದು ನನ್ನ ಮುಂದೆ ಕುಳಿತಿದ್ದಾಗ, ಪಕ್ಷದ ಮುಖಂಡ ಸುಬ್ರತಾ ಬಕ್ಷಿ ಕುನಾಲ್‌ಗೆ ಶೋಕಾಸ್ ನೋಟಿಸ್ ನೀಡಿದರು ಎಂದು ತಪಸ್ ರಾಯ್ ಹೇಳಿದರು.

ನನ್ನ ಮನೆಯ ಮೇಲೆ ಇಡಿ ದಾಳಿಯ ಹಿಂದೆ ನನ್ನದೇ ಪಕ್ಷದ ಕೆಲವು ವ್ಯಕ್ತಿಗಳ ಕೈವಾಡ ಇದೆ ಎಂದು ನಾನು ವಿವಿಧ ಮೂಲಗಳಿಂದ ತಿಳಿದುಕೊಂಡಿದ್ದೇನೆ. ವಿಧಾನಸಭೆಯಲ್ಲಿ ಮಾಡಿದ ಭಾಷಣದಲ್ಲಿ ಮುಖ್ಯಮಂತ್ರಿಗಳು ಸಂದೇಶಖಾಲಿ ವಿಷಯವನ್ನು ಪ್ರಸ್ತಾಪಿಸಿ, ಶೇಖ್ ಶಹಜಹಾನ್ ಅವರ ಹೆಸರನ್ನು ಪ್ರಸ್ತಾಪಿಸಿದ್ದನ್ನು ನೋಡಿದಾಗ ನನಗೆ ತುಂಬಾ ನಿರಾಶೆಯಾಯಿತು, ಆದರೆ ನನ್ನ ಹೆಸರನ್ನು ಅವರು ಉಲ್ಲೇಖಿಸಲಿಲ್ಲ. ಸಿಎಂ ಮಮತಾ ನನ್ನ ಮನೆ ಮೇಲೆ ನಡೆದ ದಾಳಿಯ ಬಗ್ಗೆ ಒಮ್ಮೆಯಾದರೂ ಮಾತನಾಡುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ. ಅವರು ಮಾತನಾಡಿಲಿಲ್ಲ ಅದರಿಂದ ನನಗೆ ನೋವಾಯಿತು. ರಾಜಕೀಯದಲ್ಲಿ ನನ್ನ ಪ್ರಾಮಾಣಿಕತೆ ಯಾರೂ ಪ್ರಶ್ನಿಸಿಲ್ಲ. ನನ್ನದೇ ಪಕ್ಷ ನನ್ನ ವಿರುದ್ಧ ಹೋದರೆ ಅದು ದುರದೃಷ್ಟಕರ. ನನ್ನ ಮನೆ ಮೇಲೆ ಇಡಿ ದಾಳಿ ನಡೆದು 52 ದಿನಗಳು ಕಳೆದಿವೆ, ಆದರೆ ಮಮತಾ ಬ್ಯಾನರ್ಜಿಯಿಂದ ನನಗೆ ಇನ್ನೂ ಕರೆ ಬಂದಿಲ್ಲ. ಇದು ನನ್ನ ಮನಸ್ಸಿಗೆ ಗಾಸಿಯನ್ನು ಉಂಟುಮಾಡಿದೆ ಎಂದರು.

ಇದನ್ನೂ ಓದಿ:ಪ್ರಧಾನಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಲಾಲೂ ಪ್ರಸಾದ್, ತೇಜಸ್ವಿ ಯಾದವ್ ವಿರುದ್ಧ ದೂರು ದಾಖಲು

ABOUT THE AUTHOR

...view details