ಕರ್ನಾಟಕ

karnataka

ETV Bharat / bharat

ಜೈಲಿನಲ್ಲಿ ಕೇಜ್ರಿವಾಲ್ ತೂಕ 2KG ಇಳಿಕೆ: ದೆಹಲಿ ಸಿಎಂ ಆರೋಗ್ಯ 'ರಹಸ್ಯ' ಬಿಚ್ಚಿಟ್ಟ ತಿಹಾರ್​ ಜೈಲಾಧಿಕಾರಿಗಳು - Aravind Kejriwal health report - ARAVIND KEJRIWAL HEALTH REPORT

ಸಿಎಂ ಅರವಿಂದ್​ ಕೇಜ್ರಿವಾಲ್​ ಅವರ ಆರೋಗ್ಯ ವರದಿಯನ್ನು ದೆಹಲಿ ಸರ್ಕಾರಕ್ಕೆ ತಿಹಾರ್​ ಜೈಲು ಅಧಿಕಾರಿಗಳು ರವಾನಿಸಿದ್ದಾರೆ. ಮಧ್ಯಂತರ ಜಾಮೀನಿನ ಬಳಿಕ ಜೈಲು ಸೇರಿದ ಅವಧಿಯಿಂದ ಆರೋಗ್ಯದಲ್ಲಾದ ಬದಲಾವಣೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೇಜ್ರಿವಾಲ್ ಆರೋಗ್ಯ 'ರಹಸ್ಯ' ಬಿಚ್ಚಿಟ್ಟ ತಿಹಾರ್​ ಜೈಲು ಅಧಿಕಾರಿಗಳು
ಕೇಜ್ರಿವಾಲ್ ಆರೋಗ್ಯ 'ರಹಸ್ಯ' ಬಿಚ್ಚಿಟ್ಟ ತಿಹಾರ್​ ಜೈಲು ಅಧಿಕಾರಿಗಳು (ETV Bharat)

By PTI

Published : Jul 15, 2024, 8:45 PM IST

ನವದೆಹಲಿ:ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ ವಿಪರೀತ ದೇಹ ತೂಕ ಕಳೆದುಕೊಂಡು ಅನಾರೋಗ್ಯಕ್ಕೀಡಾಗಿದ್ದಾರೆ ಎಂದು ಆಪ್​ ಆರೋಪಿಸಿದ ಬೆನ್ನಲ್ಲೇ, ತಿಹಾರ್​​ ಜೈಲು ಅಧಿಕಾರಿಗಳು ಆಪ್​ ಸಂಚಾಲಕರ ಆರೋಗ್ಯ ವರದಿ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಈವರೆಗೂ ಕೇಜ್ರಿವಾಲ್ ತೂಕದಲ್ಲಿ 2 ಕೆಜಿ ಇಳಿದಿದೆ. ಏಮ್ಸ್​ ವೈದ್ಯರ ನಿಯಮಿತ ತಪಾಸಣೆಯಲ್ಲಿದ್ದಾರೆ ಎಂದಿದೆ.

ಅಬಕಾರಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯಾಗಿರುವ ದೆಹಲಿ ಸಿಎಂ ಅವರನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ಬಂಧಿಸಿದೆ. ನಿರಂತರವಾಗಿ ಜೈಲು ಶಿಕ್ಷೆಗೆ ಒಳಗಾಗಿರುವುದರಿಂದ ಆರೋಗ್ಯ ಹದಗೆಟ್ಟಿದೆ. ಅಪಾಯದ ಮುನ್ಸೂಚನೆ ಇದೆ ಎಂದು ಆಪ್​ ಆರೋಪಿಸಿದೆ.

ದಾರಿ ತಪ್ಪಿಸಲು ಆಪ್​ ಆರೋಪ:ಈ ಬಗ್ಗೆ ತಿಹಾರ್​​ ಜೈಲಧಿಕಾರಿಗಳು ದೆಹಲಿ ಸರ್ಕಾರದ ಗೃಹ ಇಲಾಖೆಗೆ ವರದಿ ಕಳುಹಿಸಿದ್ದಾರೆ. ಕೇಜ್ರಿವಾಲ್ ಅವರ ಆರೋಗ್ಯದ ಬಗ್ಗೆ ಆಪ್ ನಾಯಕರು ಮಾಡುತ್ತಿರುವ ಆರೋಪ ಜನರಲ್ಲಿ ಗೊಂದಲ ಮತ್ತು ದಾರಿತಪ್ಪಿಸುತ್ತಿದೆ. ಏಮ್ಸ್​ ವೈದ್ಯರು ನಿರಂತರವಾಗಿ ತಪಾಸಣೆ ಮಾಡುತ್ತಿದ್ದಾರೆ. ತೂಕದಲ್ಲಿ 2 ಕೆಜಿ ಕಡಿಮೆಯಾಗಿದೆ. ಸಕ್ಕರೆಯ ಮಟ್ಟವೂ ನಿಯಮಿತವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕೇಜ್ರಿವಾಲ್​ ಅವರು ಬಂಧನವಾದ ಮೊದಲ ದಿನ ಅಂದರೆ ಏಪ್ರಿಲ್​​ 1 ರಂದು 65 ಕೆಜಿ ತೂಕವಿದ್ದರು. ನಂತರದ ತಿಂಗಳಲ್ಲಿ 66 ಕೆಜಿ ಏರಿತ್ತು. 21 ದಿನಗಳ ಮಧ್ಯಂತರ ಜಾಮೀನು ಪಡೆದ ಚುನಾವಣಾ ಪ್ರಚಾರದಲ್ಲಿ ತೊಡಗಿದ ಬಳಿಕ ಅವರು ಜೂನ್​​ 2 ರಂದು ಮತ್ತೆ ಜೈಲಿಗೆ ಮರಳಿದರು. ಅಂದು 63.5 ಕೆಜಿ ತೂಕ ಹೊಂದಿದ್ದರು. ಜುಲೈ 14 ರಂದು ಅವರ ದೇಹ ತೂಕ 61.5ಕೆಜಿ ಇದೆ. ಅಂದರೆ, 2 ಕೆಜಿ ಇಳಿಕೆಯಾಗಿದೆ ಎಂದು ವಿವರವಾದ ಮಾಹಿತಿ ಹಂಚಿಕೊಂಡಿದೆ.

ಕೇಜ್ರಿವಾಲ್​ಗೆ ನಿತ್ಯ ಮನೆ ಊಟ:ಕೇಜ್ರಿವಾಲ್ ಜೈಲಿನಲ್ಲಿ ಮನೆಯಿಂದ ಬೇಯಿಸಿ ತಂದ ಆಹಾರವನ್ನು ಸೇವಿಸುತ್ತಿದ್ದಾರೆ. ಕೆಲವೊಮ್ಮೆ ಆಹಾರವನ್ನು ತಿನ್ನದೆ ವಾಪಸ್​ ಕಳುಹಿಸುತ್ತಿದ್ದಾರೆ. ಏಮ್ಸ್‌ನ ವೈದ್ಯರ ತಂಡ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಕೇಜ್ರಿವಾಲ್​ ಪತ್ನಿ ಸುನೀತಾ ಅವರು ವೈದ್ಯರ ಜೊತೆಗೆ ನಿಕಟ ಸಂಪರ್ಕದಲ್ಲಿದ್ದಾರೆ ಎಂದು ವರದಿ ತಿಳಿಸಿದೆ.

ಆಪ್​ನ ಆಕ್ಷೇಪವೇನು?:ಆಮ್​ ಆದ್ಮಿ ಪಕ್ಷದ ಹಿರಿಯ ನಾಯಕ ಸಂಜಯ್ ಸಿಂಗ್, ಕೇಜ್ರಿವಾಲ್​ ಅವರ ಆರೋಗ್ಯದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೈಲು ಅಧಿಕಾರಿಗಳು ಆರೋಗ್ಯ ವರದಿಯನ್ನು ಸೋರಿಕೆ ಮಾಡಿದ್ದಾರೆ. 8.5 ಕೆಜಿಗೂ ಅಧಿಕ ತೂಕವನ್ನು ಕಳೆದುಕೊಂಡಿದ್ದಾರೆ. ಕೇಜ್ರಿವಾಲ್ ಕೆಲವು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ. ರಕ್ತದಲ್ಲಿನ ಸಕ್ಕರೆ ಮಟ್ಟವು ಐದು ಬಾರಿ 50 mg/dl ಗಿಂತ ಕಡಿಮೆಯಾಗಿದೆ. ಜೈಲಿನಲ್ಲಿ ಏನೋ ಅಹಿತಕರ ಘಟನೆಗಳು ನಡೆಯುತ್ತಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:ದೆಹಲಿ ಸಿಎಂ ಕೇಜ್ರಿವಾಲ್​ಗೆ ಮತ್ತೆ ಸೆರೆವಾಸ: 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್​ - Arvind Kejriwal

ABOUT THE AUTHOR

...view details