ಕರ್ನಾಟಕ

karnataka

ETV Bharat / bharat

ಪಬ್ ಸೀಲಿಂಗ್ ಕುಸಿದು ಮೂವರ ಸಾವು: ಮುಂದುವರಿದ ರಕ್ಷಣಾ ಕಾರ್ಯಾಚರಣೆ - Three died in Pub ceiling - THREE DIED IN PUB CEILING

ಚೆನ್ನೈನ ಅಲ್ವಾರ್‌ಪೇಟ್‌ನಲ್ಲಿರುವ ಪಬ್ ಸೀಲಿಂಗ್ ಕುಸಿದು ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.

Three died in Pub ceiling collapsed in Chennai
ಚೆನ್ನೈನಲ್ಲಿ ಪಬ್ ಸೀಲಿಂಗ್ ಕುಸಿದು ಮೂವರು ಸಾವು

By ETV Bharat Karnataka Team

Published : Mar 28, 2024, 9:58 PM IST

ಚೆನ್ನೈ (ತಮಿಳುನಾಡು):ಚೆನ್ನೈನ ಅಲ್ವಾರ್‌ಪೇಟ್‌ನಲ್ಲಿರುವ ಪ್ರಸಿದ್ಧ ಹೋಟೆಲ್/ಕ್ಲಬ್/ಪಬ್ ಹೆಸರಿನ 'ಸೆಖ್ಮೆಟ್ ಕ್ಲಬ್' ಕಟ್ಟಡದ ಮೊದಲ ಮಹಡಿಯ ಮೇಲ್ಛಾವಣಿ ಕುಸಿದಿದೆ. ಈ ಅವಘಡದಲ್ಲಿ 3 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಮೃತರು ಮೂವರೂ ಬಾರ್‌ನ ಉದ್ಯೋಗಿಗಳಾಗಿದ್ದು, ಮಣಿಪುರದ ಲಾಲಿ ( 22), ಮ್ಯಾಕ್ಸ್ ( 21) ಮತ್ತು ತಮಿಳುನಾಡಿನ ಸೈಕ್ಲೋನ್ ರಾಜ್ ( 45) ಎಂಬುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಗ್ರೇಟರ್ ಚೆನ್ನೈ ಪೊಲೀಸ್ ಹೆಚ್ಚುವರಿ ಕಮಿಷನರ್, ಪ್ರೇಮ್ ಆನಂದ್ ಸಿನ್ಹಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, "ಇನ್ನೂ ಮೂವರು ಕಟ್ಟಡದಲ್ಲಿ ಸಿಲುಕಿದ್ದಾರೆ. ಅವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಅವಘಡದ ಬಗ್ಗೆ ಅಭಿರಾಮಪುರಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೆಟ್ರೋ ಕಾಮಗಾರಿ ವೇಳೆ ಮೇಲ್ಛಾವಣಿ ಕುಸಿದಿದ್ದು, ಮೂರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸಂತ್ರಸ್ತರನ್ನು ಸ್ಥಳಾಂತರಿಸಲು ಮೂರು ಆಂಬ್ಯುಲೆನ್ಸ್‌ಗಳನ್ನು ಖಾಸಗಿ ಹೋಟೆಲ್‌ನ ಹೊರಗೆ ನಿಲ್ಲಿಸಲಾಗಿದೆ'' ಎಂದಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 40 ಮಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅವಶೇಷಗಳಡಿ ಮೂವರು ಸಿಲುಕಿಕೊಂಡಿದ್ದಾರೆ. ಇಬ್ಬರ ಮೃತದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿದೆ. ಉಳಿದವರ ಸ್ಥಿತಿಗತಿ ತಿಳಿದು ಬಂದಿಲ್ಲ. ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ :ನಿರ್ಮಾಣ ಹಂತದಲ್ಲಿದ್ದ ಐದಂತಸ್ತಿನ ಕಟ್ಟಡ ಕುಸಿತ: ಸಾವಿನ ಸಂಖ್ಯೆ 7ಕ್ಕೇರಿಕೆ

ABOUT THE AUTHOR

...view details