ಅಜ್ಮೀರ: ತೀರ್ಥರಾಜ ಗುರು ಪುಷ್ಕರ ನಗರ ಕೇವಲ ಆಧ್ಯಾತ್ಮಿಕ ಸ್ಥಳವಲ್ಲ. ಇದು ಲೋಕದ ಸೃಷ್ಟಿಕರ್ತ ಬ್ರಹ್ಮನ ನಗರ ಆಗಿದೆ. ಕಾರ್ತಿಕ ಏಕಾದಶಿಯಿಂದ ಕಾರ್ತಿಕ ಪೂರ್ಣಿಮೆಯವರೆಗೆ ಇಲ್ಲಿ ಬ್ರಹ್ಮದೇವ ಯಾಗ ಮಾಡಿದರು. ಈ ಯಾಗದಲ್ಲಿ ದೇವತೆಗಳು, ರಾಕ್ಷಸರು, ಯಕ್ಷರು, ಗಂಧರ್ವರು, ಹಾವು ಇತ್ಯಾದಿಗಳು ಕೂಡ ಭಾಗಿಯಾಗಿದ್ದರು. ಆದರೆ, ಈಶ್ವರನಿಗೆ ಈ ಯಾಗಕ್ಕೆ ಆಹ್ವಾನ ನೀಡಿರಲಿಲ್ಲ. ಇದರಿಂದ ಈಶ್ವರನೇ ಸ್ವತಃ ಪುಷ್ಕರಕ್ಕೆ ಬಂದು ಇಲ್ಲಿ ಅದ್ಬುತ ಲೀಲೆಗಳನ್ನು ಸೃಷ್ಟಿಸಿದ. ಇಲ್ಲಿ ಆತ ಆತ್ಮದ ರೂಪದಲ್ಲಿ ನೆಲೆಸಿದ್ದು, ಆತ್ಮೇಶ್ವರ ಮಹಾದೇವನೆಂದು ಜಗತ್ಪ್ರಸಿದ್ಧಿ ಪಡೆದಿದ್ದಾನೆ.
ಕೋಟ್ಯಂತರ ಹಿಂದೂಗಳ ನಂಬಿಕೆ ಕೇಂದ್ರವಾಗಿರುವ ಪುಷ್ಕರ್ ಸ್ಥಳಕ್ಕೆ ದೇಶ ವಿದೇಶದಿಂದ ಭಕ್ತರು ಆಗಮಿಸುತ್ತಾರೆ. ಇಲ್ಲಿನ ಜಗತ್ಪಿತ ಬ್ರಹ್ಮನ ಭೇಟಿ ಮಾಡುವ ಮೊದಲು ಆತ್ಮೇಶ್ವರ ಮಹಾದೇವನ ದರ್ಶನ ಅಗತ್ಯವಾಗಿದೆ. ಈ ರೀತಿ ಮಾಡಿದಲ್ಲಿ ಮಾತ್ರ, ಈ ಯಾಗದ ಫಲ ದೊರೆಯುತ್ತದೆ.
ಅಘೋರಿ ರೂಪದಲ್ಲಿ ಕಂಡ ಮಹಾದೇವ: ಇಲ್ಲಿನ ಪುಷ್ಕರ ಬ್ರಹ್ಮ ದೇವ ಯಾಗ ಮಾಡಿದ ಸ್ಥಳ ಎಂದು ನಂಬಲಾಗಿದೆ. ಎಲ್ಲರಿಗೂ ಯಾಗಕ್ಕೆ ಆಹ್ವಾನ ನೀಡಿದ ಬ್ರಹ್ಮ ಮಹಾದೇವನಿಗೆ ಮಾತ್ರ ಆಹ್ವಾನಿಸಲಿಲ್ಲ. ಆಗ ಶಿವನು ಅಘೋರ ತಂತ್ರಿಕ ರೂಪದಲ್ಲಿ ಕೈಯಲ್ಲಿ ತಲೆಬುರಡೆ ಹಿಡಿದು ಯಾಗ ಸ್ಥಳಕ್ಕೆ ಆಗಮಿಸಿದ. ಈ ಅಘೋರಿಯಲ್ಲಿದ್ದ ಶಿವನನ್ನು ಯಾರು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಅಲ್ಲದೇ, ಅಘೋರ ರೂಪದಲ್ಲಿದ್ದ ಶಿವನನ್ನು ಯಾಗದ ಸ್ಥಳಕ್ಕೆ ಬಾರದಂತೆ ತಡೆಯಲು ಬ್ರಾಹ್ಮಣರು ಮುಂದಾದರು. ಅಘೋರ ಶಿವ ಸ್ಥಳಕ್ಕೆ ಬರಲು ಮುಂದಾದಾಗ ತಾಮಸಿಕ ಮತ್ತು ಅಶುದ್ಧ ವಸ್ತುವನ್ನು ತರುವಂತಿಲ್ಲ ಎಂದು ತಾಕೀತು ಮಾಡಿದರು. ಇದರಿಂದ ಅಘೋರಿ ರೂಪದ ಶಿವ ಅವುಗಳನ್ನು ಹೊರಗೆ ಇಟ್ಟು, ಕರೆಯಲ್ಲಿ ಸ್ನಾನ ಮಾಡಲು ಹೋದರು.
ಈ ವೇಳೆ, ಯಜ್ಞಸ್ಥಳದ ಹೊರಗಡೆ ಇಟ್ಟಿದ್ದ ತಲೆಬುರಡೆಯನ್ನು ಕೋಲಿನಿಂದ ಹೊರಗೆ ಎಸೆದರು. ಆಗ ಆ ತಲೆಬುರುಡೆ ಪುಷ್ಕರದ ಸುತ್ತ ಸಾವಿರಾರು ತಲೆಬುರುಡೆಯಾಗಿ ಹುಟ್ಟಲು ಪ್ರಾರಂಭಿಸಿದವು. ಇದನ್ನು ನೀಡಿದ ಮಂದಿ ಭೀತಿಗೊಂಡು, ಕಂಗಾಲಾಗಿ ಓಡಿದರು. ಬ್ರಹ್ಮನ ಬಳಿ ಬಂದು ನಡೆದ ವಿಷಯವನ್ನು ವಿವರಿಸಿದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಬ್ರಹ್ಮನಿಗೆ ಇದು ಶಿವನ ಲೀಲೆ ಎಂದು ಅರಿವಾಯಿತು. ಜೊತೆಗೆ ತಾನು ಆಹ್ವಾನ ನೀಡಲು ಮರೆತಿರುವುದು ನೆನಪಾಯಿತು.
ಶಿವನ ಸಿಟ್ಟು ತಣ್ಣಗೆ ಮಾಡಲು ಮುಂದಾದ ಬ್ರಹ್ಮ ಚಂದ್ರಶೇಖರ ಸ್ತೋತ್ರ ಪಾರಾಯಣ ನಡೆಸಿದ, ಇದಾದ ಬಳಿಕ ತಪ್ಪು ತಿದ್ದುಕೊಂಡ ಬ್ರಹ್ಮ ಯಗ್ಞ ಸ್ಥಳದಲ್ಲಿ ಮಹಾದೇವನನ್ನು ಆಹ್ವಾನಿಸಿದ. ಬ್ರಹ್ಮ ಎಲ್ಲಾ ವಿಶೇಷ ಪೂಜೆಗಳಲ್ಲಿ ಮಹಾದೇವನನ್ನು ಕಡ್ಡಾಯವಾಗಿ ಭಾಗಿಯಾಗುವಂತೆ ಮಾಡಿದ. ಅಂದಿನಿಂದ ಯಾವುದೇ ಯಜ್ಞಗಳು ಮಹಾದೇವನಿಲ್ಲದೇ ಸಂಪೂರ್ಣವಾಗುವುದಿಲ್ಲ.