ಕರ್ನಾಟಕ

karnataka

ETV Bharat / bharat

ಛತ್ತೀಸ್​ಗಢ ಎನ್​ಕೌಂಟರ್​ನಲ್ಲಿ ಹತರಾದ ನಕ್ಸಲೀಯರ ಗುರುತು ಪತ್ತೆ - Telangana Maoists killed

ಛತ್ತೀಸ್​ಗಢ ಎನ್​ಕೌಂಟರ್​ನಲ್ಲಿ ಹತರಾದ ನಕ್ಸಲೀಯರಲ್ಲಿ ಮೂವರು ತೆಲಂಗಾಣದವರು ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಛತ್ತೀಸ್​ಗಢ ಎನ್​ಕೌಂಟರ್​ನಲ್ಲಿ ಹತರಾದ ನಕ್ಸಲೀಯರ ಗುರುತು ಪತ್ತೆ
ಛತ್ತೀಸ್​ಗಢ ಎನ್​ಕೌಂಟರ್​ನಲ್ಲಿ ಹತರಾದ ನಕ್ಸಲೀಯರ ಗುರುತು ಪತ್ತೆ

By ETV Bharat Karnataka Team

Published : May 2, 2024, 10:30 AM IST

ಹೈದರಾಬಾದ್​: ಛತ್ತೀಸ್‌ಗಢದ ಅಬುಜಮದ್‌ನಲ್ಲಿ ಮಂಗಳವಾರ ಬೆಳಗ್ಗೆ ನಡೆದಿದ್ದ ಎನ್‌ಕೌಂಟರ್‌ನಲ್ಲಿ ಹತ್ತು ಮಂದಿ ಮಾವೋವಾದಿಗಳು ಹತರಾಗಿದ್ದು, ಈ ಪೈಕಿ ಎಂಟು ಜನರ ಗುರುತು ಪತ್ತೆ ಹಚ್ಚಲಾಗಿದೆ. ಅದರಲ್ಲಿ ಮೂವರು ತೆಲಂಗಾಣದವರು ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪೆದ್ದಪಲ್ಲಿ ಜಿಲ್ಲೆಯ ಪಾಲಕುರ್ತಿ ಮಂಡಲದ ಜಿಯಾರಂ ಗ್ರಾಮದ ಜೋಗಣ್ಣ ಅಲಿಯಾಸ್ ಜಿಸ್ಸು ಅಲಿಯಾಸ್ ಚೀಮ ನರ್ಸಯ್ಯ (66), ಮಂಚಿರ್ಯಾಲ ಜಿಲ್ಲೆಯ ವಿನಯ್ ಅಲಿಯಾಸ್ ಕೇಶಬೋಯಿನಾ ರವಿ (55) ಮತ್ತು ವರಂಗಲ್‌ನ ಸುಶ್ಮಿತಾ ಅಲಿಯಾಸ್ ಚೈತೆ (26) ಎಂದು ಗುರುತಿಸಲಾಗಿದೆ.

ಮೃತ ಜೋಗಣ್ಣನ ವಿರುದ್ಧ 196 ಪ್ರಕರಣಗಳಿದ್ದು, ಈತನ ಮಾಹಿತಿ ನೀಡಿದವರಿಗೆ ಸರಕಾರ 25 ಲಕ್ಷ ರೂ.ಗಳ ಬಹುಮಾನ ಘೋಷಿಸಲಾಗಿತ್ತು. ಅಲ್ಲದೇ ಮಾವೋವಾದಿ ವಿಭಾಗೀಯ ಸಮಿತಿ ಸದಸ್ಯ ರವಿ ಬಗ್ಗೆ ಮಾಹಿತ ನೀಡಿದರೆ 8 ಲಕ್ಷ ರೂ., ಮಾವೋವಾದಿ ಪಕ್ಷದ ಸದಸ್ಯೆ ತಿಕ್ಕ ಸುಶ್ಮಿತಾ ಕುರಿತು ಮಾಹಿತಿ ನೀಡಿದವರಿಗೆ 2 ಲಕ್ಷ ರೂ. ಬಹುಮಾನ ನೀಡುವುದಾಗಿ ಸರ್ಕಾರ ಪ್ರಕಟಿಸಿತ್ತು.

ಕಳೆದ ತಿಂಗಳು 16 ರಂದು ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯ ಅರಣ್ಯದಲ್ಲಿ ನಡೆದ ಭಾರಿ ಎನ್‌ಕೌಂಟರ್‌ನಲ್ಲಿ 29 ಮಾವೋವಾದಿಗಳು ಹತರಾಗಿದ್ದರು, ಅವರಲ್ಲಿ ಭೂಪಾಲಪಲ್ಲಿ ಜಿಲ್ಲೆಯ ಶಂಕರ್ ರಾವ್ ಮತ್ತು ಅವರ ಪತ್ನಿ ಅದಿಲಾಬಾದ್ ಜಿಲ್ಲೆಯ ದಾಸರ್ವರ್ ಸುಮನಾ ಅಲಿಯಾಸ್ ರಜಿತಾ ಹತರಾಗಿದ್ದರು. ಇತ್ತೀಚೆಗಷ್ಟೇ 15 ದಿನಗಳೊಳಗೆ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ ಮೂವರು ತೆಲಂಗಾಣ ಮಾವೋವಾದಿಗಳು ಹತರಾಗಿದ್ದರು.

ಇದನ್ನೂ ಓದಿ:ಎನ್​ಕೌಂಟರ್​: ಇಬ್ಬರು ಮಹಿಳೆಯರು ಸೇರಿ ಏಳು ನಕ್ಸಲೀಯರನ್ನು ಹೊಡೆದುರುಳಿಸಿದ ಸೇನೆ - Encounter

ABOUT THE AUTHOR

...view details