ಕರ್ನಾಟಕ

karnataka

ETV Bharat / bharat

ಬೈಕ್​ ಆಯ್ತು ಹಿಟ್ಟಿನ ಗಿರಣಿ: ತೆಲಂಗಾಣ ಯುವಕನ ಹೊಸ ಐಡಿಯಾ; ಕರೆಂಟ್​ ಸಮಸ್ಯೆಗೆ ಮುಕ್ತಿ - MOTORCYCLE MOBILE FLOUR MILL

ಪದೇ ಪದೆ ಎದುರಾಗುತ್ತಿದ್ದ ವಿದ್ಯುತ್​ ಸಮಸ್ಯೆಯನ್ನೇ ಸವಾಲಾಗಿ ಸ್ವೀಕರಿಸಿದ ಯುವಕರೊಬ್ಬರು ತಮ್ಮ ಬೈಕ್​ ಅನ್ನೇ ಹಿಟ್ಟಿನ ಗಿರಣಿಯನ್ನಾಗಿ ಪರಿವರ್ತಿಸಿದ್ದಾರೆ.

Syed Majid Ali of Asifabad Telangana with his innovative flour mill
ಹಿಟ್ಟಿನ ಗಿರಣಿಯೊಂದಿಗೆ ತೆಲಂಗಾಣದ ಆಸಿಫಾಬಾದ್‌ನ ಸೈಯದ್ ಮಜೀದ್ ಅಲಿ (Social media)

By ETV Bharat Karnataka Team

Published : Jan 19, 2025, 3:57 PM IST

ಆಸಿಫಾಬಾದ್, ತೆಲಂಗಾಣ​: ಮನಸ್ಸಿದ್ದರೆ ಮಾರ್ಗ ಎಂಬಂತೆ ಯುವಕನೊಬ್ಬ ನಿತ್ಯ ಕಾಡುತ್ತಿದ್ದ ಸಮಸ್ಯೆಗೆ ಮುಕ್ತಿ ಹಾಡಿ, ವಿನೂತನ ಪ್ರಯೋಗದ ಮೂಲಕ ಗಮನ ಸೆಳೆದಿದ್ದಾನೆ. ಪದೇ ಪದೆ ಆಗುವ ವಿದ್ಯುತ್​ ಕಡಿತದ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ತೆಲಂಗಾಣದ ಆಸಿಫಾಬಾದ್​ನ ಯುವಕನೊಬ್ಬ ತಮ್ಮ ಮೋಟಾರ್​ ಸೈಕಲ್​ ಅನ್ನು ಮೊಬೈಲ್​ ಹಿಟ್ಟಿನ ಗಿರಣಿಯನ್ನಾಗಿ ಪರಿವರ್ತಿಸಿದ್ದಾರೆ.

ಆಸಿಫಾಬಾದ್​ ಪಟ್ಟಣದ ಸೈಯದ್​ ಮಜೀದ್​ ಅಲಿ ಯಾವುದೇ ಅಡೆತಡೆಗಳಿಲ್ಲದೇ ಸೇವೆ ಒದಗಿಸುವ ನಿಟ್ಟಿನಲ್ಲಿ ತಮ್ಮ ಸೃಜನಾತ್ಮಕತೆಗೆ ಕೆಲಸ ಕೊಟ್ಟಿದ್ದಾರೆ. ತಮ್ಮ ಬೈಕ್​ನ ಸೀಟಿನ ಮೇಲೆ ಹಿಟ್ಟಿನ ಗಿರಣಿಯನ್ನು ಜೋಡಿಸಿ, ಹಿಂಭಾಗದ ಟೈರ್​ಗೆ ಬೆಲ್ಟ್​ ಜೋಡಿಸಿ ಬೈಕ್​ ಚಲಿಸುವಾಗ ಗಿರಣಿ ತಿರುಗಿ ಕೆಲಸ ಮಾಡುವಂತೆ ಮಾಡಿದ್ದಾರೆ.

ಕರೆಂಟ್​ ಗೊಡವೆ ಇಲ್ಲ:ತಮ್ಮ ಚಾಕಚಕ್ಯತೆ ಉಪಯೋಗಿಸಿಕೊಂಡು ಮಾಡಿರುವ ಈ ವ್ಯವಸ್ಥೆಯಿಂದ ಮಜೀದ್​ ಅವರಿಗೆ ಪಟ್ಟಣ ಹಾಗೂ ನೆರೆಯ ಹಳ್ಳಿಗಳಿಗೆ ಹೋಗಿ ತನ್ನ ಮೂವಿಂಗ್​ ಗಿರಣಿ ಯಿಂದ ಹಿಟ್ಟು ಹಾಕಿ ಕೊಡಲು ಸಹಾಯವಾಗುತ್ತದೆ. ಈ ಮೊಬೈಲ್​ ಹಿಟ್ಟಿನ ಗಿರಣಿಯು ಸ್ಥಳೀಯವಾಗಿ ವಿಶೇಷವಾಗಿ ಗ್ರಾಮಗಳ ಒಳ ಪ್ರದೇಶಗಳಲ್ಲಿ ಜನಪ್ರಿಯವಾಗಿದೆ. ತಾಜಾ ಹಿಟ್ಟು ನೇರವಾಗಿ ಮನೆ ಬಾಗಿಲಿಗೆ ತಲುಪುವ ಕಾರಣ ನಿವಾಸಿಗಳಿಗೂ ಇದು ಆತ್ಮೀಯವಾಗಿದೆ.

ಮನೆ ಬಾಗಿಲಕ್ಕೆ ಹಿಟ್ಟಿನ ಗಿರಣಿ, ಜನರು ಫಿದಾ:ಸಾಂಪ್ರದಾಯಿಕ ವಿದ್ಯುತ್​ ಚಾಲಿತ ಗಿರಣಿಗಳಿಗೆ ವಿರುದ್ಧವಾಗಿ ಮಜೀದ್​ ಅವರು ತಯಾರಿಸಿದ ಹೊಸ ವಿಧಾನ ಹಿಟ್ಟಿನ ಗಿರಣಿ ಅನುಕೂಲಕರ ಹಾಗೂ ಪರಿಣಾಮಕಾರಿಯಾಗಿದೆ. ಈ ಹಿಂದೆ ಮಜೀದ್​ ಟ್ರ್ಯಾಕ್ಟರ್​ನಲ್ಲಿ ಹಿಟ್ಟಿನ ಗಿರಣಿಯನ್ನು ಸೆಟ್​ ಮಾಡಿದ್ದರು. ಆದರೆ ಟ್ರ್ಯಾಕ್ಟರ್​ ಓಡಿಸಲು ಬೇಕಾಗುವ ವೆಚ್ಚ ತುಂಬಾ ಹೆಚ್ಚಿದ್ದ ಕಾರಣ ಅವರು ಗಿರಣಿಗೆ ಬೈಕ್​ ಅನ್ನು ಆಯ್ಕೆ ಮಾಡಿದರು.

ಈ ನೂತನ ಪ್ಲ್ಯಾನ್​ ಮಜೀದ್​ ಅವರ ಚಾಕಚಕ್ಯತೆ ಹಾಗೂ ಅವರ ಕಾಯಕದ ಮೇಲಿನ ಬದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ನೂತನ ಯೋಜನೆಯಿಂದಾಗಿ ಮಜೀದ್​ ನೇರವಾಗಿ ಗ್ರಾಹಕರ ಮನೆಗೆ ಸೇವೆ ತಲುಪಿಸುವಂತಾಗಿದೆ. ಮಾತ್ರವಲ್ಲದೇ ಗ್ರಾಹಕರು ಗಿರಣಿ ವರೆಗೆ ಬರುವ ಸಮಸ್ಯೆಯನ್ನು ಇಲ್ಲದಾಗಿಸಿದೆ.

ಗಿರಣಿ ಇದ್ದಲ್ಲಿಗೆ ಹೋಗಿ ಕಾಯುವ ಪ್ರಮೇಯವೇ ಇಲ್ಲ: ಮಜೀದ್​ ಅವರ ಈ ಪ್ರಯತ್ನದಿಂದ ಜನರೀಗ ಗಿರಣಿಗಳಿಗಾಗಿ ಅಲೆಯುವುದು ಹಾಗೂ ಅಲ್ಲಿ ಹೋಗಿ ಗಂಟೆ ಗಟ್ಟಲೆ ಕಾಯುವುದನ್ನು ತಪ್ಪಿಸಿದೆ. ಮನೆ ಬಾಗಿಲಲ್ಲೇ ತಮಗೆ ಬೇಕಾದಷ್ಟು ಕಾಳು- ಕಡಿಗಳನ್ನು ಹಿಟ್ಟು ಮಾಡಿಸಿಕೊಂಡು ಗ್ರಾಹಕರು ಓಡಾಟದ ತಾಪತ್ರಯ ತಪ್ಪಿಸಿಕೊಂಡಿದ್ದಾರೆ.

ಇದನ್ನೂ ಓದಿ:ಪಂಜರ ಮೀನು ಕೃಷಿಯಲ್ಲಿ ಮೇರು ಸಾಧನೆ: ಗಣತಂತ್ರದ ದಿನ ರಾಷ್ಟ್ರಪತಿಗಳಿಂದ ಸನ್ಮಾನಿಸಲು ಪ್ರಗತಿಪರ ರೈತನಿಗೆ ಆಹ್ವಾನ

ABOUT THE AUTHOR

...view details