ಕರ್ನಾಟಕ

karnataka

ETV Bharat / bharat

ಉತ್ತರ ಪ್ರದೇಶ: ತಂದೂರಿ ರೋಟಿ ಮೇಲೆ ಎಂಜಲು ಉಗಿದಿದ್ದ ಕೀಚಕ, ಮಾಲೀಕನ ಬಂಧನ

ತಂದೂರಿ ರೋಟಿಯ ಮೇಲೆ ಎಂಜಲು ಉಗುಳಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಉತ್ತರಪ್ರದೇಶದ ಸಹರಾನ್​​ಪುರದಲ್ಲಿ ಘಟನೆ ನಡೆದಿತ್ತು.

By PTI

Published : 6 hours ago

ತಂದೂರಿ ರೋಟಿ ಮೇಲೆ ಎಂಜಲು ಉಗಿದಿದ್ದ ಕೀಚಕ
ತಂದೂರಿ ರೋಟಿ ಮೇಲೆ ಎಂಜಲು ಉಗಿದಿದ್ದ ಕೀಚಕ (ETV Bharat)

ಸಹರಾನ್‌ಪುರ (ಉತ್ತರ ಪ್ರದೇಶ):ಉತ್ತರಪ್ರದೇಶದಲ್ಲಿ ಆಹಾರ ಕಲಬೆರಕೆ ಮತ್ತು ವಿಕೃತಿ ಮೆರೆದ ಘಟನೆಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ ತಂದೂರಿ ರೋಟಿಯ ಮೇಲೆ ಎಂಜಲು ಉಗಿದು ಬೇಯಿಸಿದ ವಿಡಿಯೋ ವೈರಲ್​ ಆಗಿತ್ತು. ಘಟನೆಗೆ ಸಂಬಂಧಿಸಿದಂತೆ ಇದೀಗ ದೂರು ದಾಖಲಾಗಿದ್ದು, ಆರೋಪಿ ಮತ್ತು ಅಂಗಡಿಯ ಮಾಲೀಕನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ತಂದೂರಿ ರೋಟಿಯನ್ನು ಮಾಡುವ ಕೆಲಸಗಾರ ಆಹಾರದ ಮೇಲೆ ಉಗುಳುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದರ ವಿರುದ್ಧ ಬಜರಂಗದಳದ ಕಾರ್ಯಕರ್ತರು ಮಂಗಳವಾರ ದೂರು ನೀಡಿದ್ದರು. ಇದರ ಬೆನ್ನಲ್ಲೇ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಉಪಹಾರ ಗೃಹದ ಮಾಲೀಕ ಹಾಗೂ ಕಾರ್ಮಿಕನನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಲಾಗಿದೆ. ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಅಭಿಮನ್ಯು ಮಾಂಗ್ಲಿಕ್ ತಿಳಿಸಿದ್ದಾರೆ.

ಕಠಿಣ ಕಾನೂನು ಜಾರಿಗೆ ಮುಂದಾದ ಸರ್ಕಾರ:ರಾಜ್ಯದಲ್ಲಿ ವರದಿಯಾಗುತ್ತಿರುವ ವಿಕೃತಿಗಳಿಗೆ ಕಡಿವಾಣ ಹಾಕಲು ಸಿಎಂ ಯೋಗಿ ಆದಿತ್ಯನಾಥ್​ ಸರ್ಕಾರ ಮುಂದಾಗಿದೆ. ಅಂಗಡಿಗಳ ಮಾಲೀಕರು ಮತ್ತು ಸಿಬ್ಬಂದಿಯ ಮಾಹಿತಿಯನ್ನು ಅಂಗಡಿಯ ಮುಂದೆ ಪ್ರದರ್ಶಿಸಬೇಕು ಎಂದು ಈಗಾಗಲೇ ಸರ್ಕಾರ ಹೇಳಿದೆ.

ಇದರ ಬೆನ್ನಲ್ಲೇ, ಆಹಾರ ಪಾನೀಯಗಳಲ್ಲಿ ಉಗುಳುವ, ಮೂತ್ರ ಬೆರೆಸುವ ಮತ್ತು ಇನ್ನಿತರ ತ್ಯಾಜ್ಯವನ್ನು ಕಲಬೆರಕೆ ಮಾಡುವುದರ ವಿರುದ್ಧ ಹೊಸ ಕಾನೂನನ್ನು ಪರಿಚಯಿಸುವುದಾಗಿ ಹೇಳಿದೆ. ಇದರ ಪ್ರಕಾರ, ಕಾನೂನನ್ನು ಉಲ್ಲಂಘಿಸುವವರ ವಿರುದ್ಧ ಜೈಲು ಶಿಕ್ಷೆ ಮತ್ತು ದಂಡಕ್ಕೆ ಗುರಿಪಡಿಸಲಾಗುವುದು. ಅಪರಾಧಗಳನ್ನು ಪುನರಾವರ್ತಿಸಿದಲ್ಲಿ ಜಾಮೀನು ರಹಿತ ಪ್ರಕರಣ ದಾಖಲಿಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ.

ಇದನ್ನೂ ಓದಿ:8 ವರ್ಷದಿಂದ ಕೆಲಸಕ್ಕಿದ್ದ ಮಹಿಳೆಯಿಂದ ಮೂತ್ರ ಬಳಸಿ ಅಡುಗೆ ತಯಾರಿಸಿದ ಆರೋಪ; ದೂರು ದಾಖಲು

ABOUT THE AUTHOR

...view details