ಕರ್ನಾಟಕ

karnataka

ETV Bharat / bharat

ಪ್ರತಿ ವರ್ಷ ರಾಮನವಮಿ ದಿನ ಶ್ರೀರಾಮನ ವಿಗ್ರಹದ ಹಣೆಗೆ ಸೂರ್ಯ ತಿಲಕ! - ಶ್ರೀರಾಮನ ವಿಗ್ರಹ

Ayodhya Ram Mandir: ಅಯೋಧ್ಯೆಯಲ್ಲಿ ಪ್ರತಿ ವರ್ಷ ಶ್ರೀರಾಮ ನವಮಿಯ ಸಂದರ್ಭದಲ್ಲಿ ಶ್ರೀರಾಮನ ವಿಗ್ರಹದ ಹಣೆಯ ಮೇಲೆ ಸೂರ್ಯನ ಕಿರಣಗಳು ಮೂಡುವಂತೆ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.

surya tilak a mirror and ens system  ram lalla idol  surya tilak  ಶ್ರೀರಾಮ ನವಮಿ  ಶ್ರೀರಾಮನ ವಿಗ್ರಹ  ಸೂರ್ಯ ತಿಲಕ
ಪ್ರತಿ ವರ್ಷ ಶ್ರೀರಾಮ ನವಮಿಯ ಸಂದರ್ಭದಲ್ಲಿ ಶ್ರೀರಾಮನ ವಿಗ್ರಹದ ಹಣೆಗೆ ಸೂರ್ಯ ತಿಲಕ!

By ETV Bharat Karnataka Team

Published : Jan 21, 2024, 1:27 PM IST

ಅಯೋಧ್ಯೆ(ಉತ್ತರ ಪ್ರದೇಶ): ಇನ್ನು ಕೆಲವೇ ಗಂಟೆಗಳಲ್ಲಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಪವಿತ್ರ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ. ಈ ಅಮೃತ ಗಳಿಗೆಗಾಗಿ ಇಡೀ ದೇಶವೇ ಹಲವು ವರ್ಷಗಳಿಂದ ಕಾಯುತ್ತಿದೆ. ಕೋಟ್ಯಂತರ ಹಿಂದೂಗಳ ಕನಸು ನನಸಾಗುತ್ತಿರುವ ಈ ಶುಭ ಸಂದರ್ಭದಲ್ಲಿ ಅಯೋಧ್ಯೆ ಮಂದಿರದಲ್ಲಿ ಪ್ರತಿಷ್ಠಾಪಿಸುತ್ತಿರುವ 'ಸೂರ್ಯ ತಿಲಕ'ದ ವಿಶೇಷತೆಗಳನ್ನು ತಿಳಿಯೋಣ. ತಂತ್ರಜ್ಞಾನ ಮತ್ತು ಸಂಪ್ರದಾಯಗಳು ಮೇಳೈಸಿರುವ ಈ ವಿಶೇಷ ವ್ಯವಸ್ಥೆ ಹೇಗೆ ರೂಪುಗೊಂಡಿದೆ ಎಂಬುದರ ಮಾಹಿತಿ ಇಲ್ಲಿದೆ.

ಮಧ್ಯಾಹ್ನ 12 ಗಂಟೆಗೆ ರಾಮನವಮಿ: ರಾಮಾಲಯ (ಅಯೋಧ್ಯೆ ರಾಮಮಂದಿರ) ನಿರ್ಮಾಣದ ಅಂಗವಾಗಿ ಪ್ರತಿ ವರ್ಷ ಶ್ರೀರಾಮ ನವಮಿಯಂದು ಮಧ್ಯಾಹ್ನ 12 ಗಂಟೆಯಿಂದ ಆರು ನಿಮಿಷಗಳ ಕಾಲ ಗರ್ಭಗುಡಿಯಲ್ಲಿರುವ ಶ್ರೀರಾಮನ ಮೂರ್ತಿಯ ಹಣೆಯ ಮೇಲೆ ಸೂರ್ಯನ ಕಿರಣಗಳು ಬೆಳಗಲು ವಿಶೇಷ ವ್ಯವಸ್ಥೆಯಾಗಿದೆ. ಇದನ್ನು ರಾಮನಿಗೆ ‘ಸೂರ್ಯ ತಿಲಕ’ ಎಂದು ಪರಿಗಣಿಸಲಾಗುತ್ತಿದೆ. ಇದಕ್ಕಾಗಿ ಸಿಎಸ್​ಐಆರ್ ಅಡಿಯಲ್ಲಿರುವ 'ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ ಸ್ಟಿಟ್ಯೂಟ್' (ಸಿಬಿಆರ್​ಐ) ಯೋಜನೆ ರೂಪಿಸಿದೆ. ಇದಕ್ಕಾಗಿ 'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐಐಎ)' ನೆರವು ಪಡೆಯಲಾಗಿದೆ. ಅಷ್ಟೇ ಅಲ್ಲ, ಅಗತ್ಯವಿರುವ ವಸ್ತುಗಳನ್ನು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಆಪ್ಟಿಕ್ಸ್’ ಕಂಪನಿ ತಯಾರಿಸಿದೆ.

ರಾಮನವಮಿಯಂದು ಮಧ್ಯಾಹ್ನ 12 ಗಂಟೆಗೆ ಶ್ರೀರಾಮನ ಹಣೆಯ ಮೇಲೆ ಸೂರ್ಯನ ಕಿರಣಗಳು ಪ್ರಜ್ವಲಿಸುವಂತೆ ವಿಶೇಷ ಲೆನ್ಸ್, ಕನ್ನಡಿ, ಗೇರ್ ಬಾಕ್ಸ್ ಮತ್ತು ಪೈಪ್‌ಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಮೂರನೇ ಮಹಡಿಯಿಂದ ಸೂರ್ಯನ ಕಿರಣಗಳು ಗರ್ಭಗುಡಿಯಲ್ಲಿರುವ ವಿಗ್ರಹಕ್ಕೆ ಪ್ರಸರಿಸುವಂತೆ ಅವುಗಳನ್ನು ಜೋಡಿಸಲಾಗಿದೆ. ಚಂದ್ರನ ಪಂಚಾಂಗದ ಪ್ರಕಾರ ಶ್ರೀರಾಮನವಮಿಯನ್ನು ನಿರ್ಧರಿಸಲಾಗುತ್ತದೆ. ಆದರೆ, ಸೂರ್ಯನ ಚಲನೆಯೇ ಬೇರೆ. ಅಂದರೆ ಶ್ರೀರಾಮನವಮಿಯ ದಿನದಂದು ಸೂರ್ಯನ ಕಿರಣಗಳು ಒಂದೇ ರೀತಿಯಲ್ಲಿ ಪ್ರಜ್ವಲಿಸುವುದಿಲ್ಲ. ಇದರಿಂದಾಗಿ ವಿಗ್ರಹದ ಹಣೆಯಲ್ಲಿ ಸೂರ್ಯತಿಲಕನ ಸ್ಥಾನ ಬದಲಾವಣೆಯು ಈ ವ್ಯವಸ್ಥೆಯ ವಿನ್ಯಾಸದಲ್ಲಿ ಸಮಸ್ಯೆಯಾಯಿತು.

ಆದರೆ ಐಐಎ ಇದಕ್ಕೆ ವಿನೂತನ ಪರಿಹಾರ ಕಂಡುಕೊಂಡಿದೆ. ಸೂರ್ಯ ಮತ್ತು ಚಂದ್ರನ ದಿನಾಂಕಗಳು ಪ್ರತಿ 19 ವರ್ಷಗಳಿಗೊಮ್ಮೆ ಕೂಡುತ್ತವೆ. ಇದರ ಆಧಾರದ ಮೇಲೆ ರಾಮನವಮಿಯ ದಿನ ಸೂರ್ಯನ ಚಲನೆಯ ಬದಲಾವಣೆಗೆ ಅನುಗುಣವಾಗಿ ಲೆನ್ಸ್ ಮತ್ತು ಕನ್ನಡಿಗಳನ್ನು ಗೇರ್ ಬಾಕ್ಸ್​ಗಳ ಸಹಾಯದಿಂದ ಜೋಡಿಸಲಾಗುತ್ತದೆ. ಅದಕ್ಕಾಗಿ 19 ಗೇರ್ ಬಾಕ್ಸ್ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ ಚಂದ್ರನ ತಿಥಿಗೆ ಅನುಗುಣವಾಗಿ ಪ್ರತಿ ವರ್ಷ ರಾಮನವಮಿಯಂದು ಭಗವಾನ್ ರಾಮನ ಹಣೆಯ ಮೇಲೆ ಅದೇ ಸ್ಥಳದಲ್ಲಿ ಸೂರ್ಯನ ಕಿರಣಗಳು ಹೊಳೆಯುವಂತೆ ಮಾಡಲಾಗುತ್ತದೆ. ಈ ಸೂರ್ಯ ತಿಲಕ್​ಗಾಗಿ ರೂಪಿಸಲಾಗುತ್ತಿರುವ ವಿಶೇಷ ವ್ಯವಸ್ಥೆಯಲ್ಲಿ ಉಕ್ಕು, ಕಬ್ಬಿಣ, ಬ್ಯಾಟರಿ ಅಥವಾ ವಿದ್ಯುತ್ ಬಳಸಿಲ್ಲ ಎಂದು ಸಿಬಿಆರ್​ಐ ತಿಳಿಸಿದೆ. ಮೂರನೇ ಅಂತಸ್ತಿನ ಶಿಖರದಿಂದ ಸೂರ್ಯನ ಕಿರಣಗಳು ಬರಬೇಕಾಗಿರುವುದರಿಂದ ಸಂಪೂರ್ಣ ನಿರ್ಮಾಣ ಪೂರ್ಣಗೊಂಡ ನಂತರವೇ ದೇವಾಲಯದ ಉದ್ಘಾಟನೆ ಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಗರ್ಭಗುಡಿ ಪ್ರವೇಶಿಸಿದ ರಾಮಲಲ್ಲಾ: ಮೂರನೇ ದಿನದ ಪೂಜೆಗಳು ಸಂಪನ್ನ..

ABOUT THE AUTHOR

...view details