ಹೈದರಾಬಾದ್:ದಕ್ಷಿಣ ಕೇಂದ್ರ ರೈಲ್ವೆ ದಾಖಲೆಯ ಆದಾಯ ಗಳಿಸಿದೆ. ಮೊದಲ ಬಾರಿಗೆ ಎಸ್ಸಿಆರ್ ಆದಾಯ 20 ಸಾವಿರ ಕೋಟಿ ದಾಟುವ ಮೂಲಕ ಮೈಲಿಗಲ್ಲೊಂದನ್ನು ಸ್ಥಾಪಿಸಿದೆ. 2023-24ರ ಆರ್ಥಿಕ ವರ್ಷದಲ್ಲಿ ಎಲ್ಲ ವಿಭಾಗದಲ್ಲಿ ದಕ್ಷಿಣ ಕೇಂದ್ರ ರೈಲ್ವೆ 20,339,36 ರೂ ಆದಾಯ ಕಂಡಿದೆ. ಈ ವಲಯ ಆರಂಭವಾದಗಿನಿಂದ ಇಷ್ಟು ಮಟ್ಟದ ಆದಾಯ ಇದೇ ಮೊದಲು ಎಂದು ಹೇಳಲಾಗುತ್ತಿದೆ.
2022 - 23ರಲ್ಲಿ ಈ ವಲಯವೂ 18,976 ಕೋಟಿ ಆದಾಯ ಗಳಿಸಿದೆ. ಇದೀಗ ಈ ವರ್ಷದಲ್ಲಿ ಈ ಆದಾಯ ಶೇ 7ರಷ್ಟು ಹೆಚ್ಚಾಗಿದೆ. ಈ ಆದಾಯದ ಹೆಚ್ಚಳಕ್ಕೆ ಹಲವು ಅಂಶಗಳು ಕಾರಣವಾಗಿವೆ. ಆದಾಯ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದರೆ ವಲಯವೂ ಪ್ರಯಾಣಿಕರ ಬೇಡಿಕೆ ಪೂರೈಕೆ ಈಡೇರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದೆ. ಇದರ ಹೊರತಾಗಿ ಟಿಕೆಟ್ ಚೆಕ್ಕಿಂಗ್, ಪಾರ್ಸೆಲ್ಗಳ ಮೂಲಕ ದಕ್ಷಿಣ ಕೇಂದ್ರ ರೈಲ್ವೆ ವಿಭಾಗಕ್ಕೆ ಆದಾಯ ಹರಿದು ಬಂದಿದೆ.
2022- 23ರಲ್ಲಿ ಪ್ರಯಾಣಿಕರರಿಂದ 25.55 ಕೋಟಿ ರೂ ಸಂಗ್ರಹ ಮಾಡಲಾಗಿದೆ. 2023 - 24ರಲ್ಲಿ ದಕ್ಷಿಣ ಕೇಂದ್ರ ರೈಲ್ವೆ ಪ್ರಯಾಣಿಕರ ಮೂಲಕ 5,731.8 ಕೋಟಿ ಸಂಗ್ರಹಿಸಿದ್ದು, 26.2 ಕೋಟಿ ಜನರು ಪ್ರಯಾಣಿಸಿದರು. ಪ್ರಯಾಣಿಕರು ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಈ ವರ್ಷ ವಿಶೇಷ ರೈಲು ಮತ್ತು ಹೆಚ್ಚುವರಿ ಕೋಚ್ಗಳನ್ನು ಅಳವಡಿಸಲಾಗಿದೆ. 2023-24ರಲ್ಲಿ 6,921 ಹೆಚ್ಚುವರಿ ಕೋಚ್ ಅನ್ನು ತಾತ್ಕಾಲಿಕವಾಗಿ ಸೇರಿಸಲಾಗಿದೆ.