ಕರ್ನಾಟಕ

karnataka

ETV Bharat / bharat

ಸೋನಿಯಾ ಗಾಂಧಿ, ನಡ್ಡಾ, ವೈಷ್ಣವ್​ ಸೇರಿ 41 ಮಂದಿ ರಾಜ್ಯಸಭೆಗೆ ಅವಿರೋಧ ಆಯ್ಕೆ - ರಾಜ್ಯಸಭೆಗೆ ಅವಿರೋಧ ಆಯ್ಕೆ

ರಾಜ್ಯಸಭೆಗೆ 41 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 15 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದಿಂದ 10, ಕರ್ನಾಟಕದ 4 ಮತ್ತು ಹಿಮಾಚಲದ ಒಂದು ಸ್ಥಾನ ಬಾಕಿ ಇವೆ.

ರಾಜ್ಯಸಭೆಗೆ ಅವಿರೋಧ ಆಯ್ಕೆ
ರಾಜ್ಯಸಭೆಗೆ ಅವಿರೋಧ ಆಯ್ಕೆ

By ETV Bharat Karnataka Team

Published : Feb 21, 2024, 9:52 AM IST

ನವದೆಹಲಿ:ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಧರ್ಮೇಂದ್ರ ಪ್ರಧಾನ್, ಇತ್ತೀಚೆಗೆ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ ಅಶೋಕ್​ ಚವಾಣ್​ ಸೇರಿದಂತೆ 41 ಜನರು ವಿವಿಧ ರಾಜ್ಯಗಳಿಂದ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕಡೆಯ ದಿನವಾಗಿದ್ದು, ಚುನಾವಣೆ ಘೋಷಣೆಯಾಗಿದ್ದ 56 ಸ್ಥಾನಗಳ ಪೈಕಿ 41 ರಲ್ಲಿ ಯಾವುದೇ ಪ್ರತಿಸ್ಪರ್ಧಿಗಳು ಇಲ್ಲದ ಕಾರಣ ಅವಿರೋಧ ಆಯ್ಕೆ ಘೋಷಿಸಲಾಯಿತು. ಇದರಲ್ಲಿ ಅತಿ ಹೆಚ್ಚು ಬಿಜೆಪಿ ಸಂಸದರೇ ಇದ್ದಾರೆ.

ರಾಜಸ್ಥಾನದಿಂದ ಸೋನಿಯಾ ಆಯ್ಕೆ:ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಅವರು, ರಾಜಸ್ಥಾನದಿಂದ ರಾಜ್ಯಸಭೆಗೆ ಇದೇ ಮೊದಲ ಬಾರಿಗೆ ಪ್ರವೇಶಿಸಿದ್ದಾರೆ. ಇತ್ತೀಚೆಗಷ್ಟೇ ಅವರು ರಾಜಸ್ಥಾನದಿಂದ ಉಮೇದುವಾರಿಕೆ ಸಲ್ಲಿಸಿದ್ದರು. ಇವರ ವಿರುದ್ಧ ಯಾವುದೇ ಅಭ್ಯರ್ಥಿಯನ್ನು ಪಕ್ಷಗಳ ಹಾಕದ ಕಾರಣ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಗುಜರಾತ್​ನಿಂದ, ಕೇಂದ್ರ ಸಚಿವ ಅಶ್ವಿನಿ ವೈಷ್ಟವ್​ ಒಡಿಶಾದಿಂದ, ಎಲ್​ ಮುರುಗನ್​ ಮಧ್ಯಪ್ರದೇಶದಿಂದ, ಅಶೋಕ್​ ಚವಾಣ್​ ಮಹಾರಾಷ್ಟ್ರದಿಂದ, ಅಜಿತ್​ ಪವಾರ್​ ಬಣದ ಎನ್​ಸಿಪಿ ಸೇರಿರುವ ಮಿಲಿಂದ್​​ ದೇವ್ರಾ, ಪ್ರಪುಲ್​ ಪಟೇಲ್​ ಕೂಡ ಇದೇ ರಾಜ್ಯದಿಂದ ಆಯ್ಕೆಯಾಗಿದ್ದಾರೆ.

ಯಾವ ಪಕ್ಷಕ್ಕೆ ಎಷ್ಟು?:ಅವಿರೋಧ ಆಯ್ಕೆಯಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. 20 ಸ್ಥಾನಗಳಲ್ಲಿ ಕಮಲ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್​ 6, ಟಿಎಂಸಿ 4, ವೈಎಸ್​ಆರ್​ಸಿಪಿ 3, ಬಿಜೆಡಿ, ಆರ್​​ಜೆಡಿ ತಲಾ 2, ಎನ್​ಸಿಪಿ, ಶಿವಸೇನೆ ಬಿಆರ್​ಎಸ್​, ಜೆಡಿಯು ತಲಾ 1 ಸ್ಥಾನದಲ್ಲಿ ಜಯ ಕಂಡಿವೆ.

27 ರಂದು ಉಳಿದೆಡೆ ಚುನಾವಣೆ:ಉಳಿದ 15 ಸ್ಥಾನಗಳಿಗೆ ಫೆಬ್ರವರಿ 27 ರಂದು ಚುನಾವಣೆ ನಡೆಯಲಿದೆ. ಅದರಲ್ಲಿ 15 ಸ್ಥಾನಗಳು ಉತ್ತರ ಪ್ರದೇಶದಿಂದ 10, ಕರ್ನಾಟಕದ 4 ಮತ್ತು ಹಿಮಾಚಲದ ಒಂದು ಸ್ಥಾನ ಒಳಗೊಂಡಿವೆ. ರಾಜಕೀಯ ಪ್ರತಿಸ್ಪರ್ಧಿಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದರಿಂದ ಚುನಾವಣೆ ಎದುರಾಗಿದೆ. ವಿಶೇಷವಾಗಿ ಉತ್ತರಪ್ರದೇಶ ಮತ್ತು ಕರ್ನಾಟಕದಲ್ಲಿ ತೀವ್ರ ಸ್ಪರ್ಧೆ ಇರುವ ನಿರೀಕ್ಷೆ ಇದೆ.

ಜೆಪಿ ನಡ್ಡಾ, ಅಶ್ವಿನಿ ವೈಷ್ಣವ್, ಮುರುಗನ್ ಮತ್ತು ವಕ್ತಾರ ಸುಧಾಂಶು ತ್ರಿವೇದಿ ಈ ನಾಲ್ವರನ್ನು ಮಾತ್ರ ಎರಡನೇ ಅವಧಿಗೆ ನಾಮನಿರ್ದೇಶನ ಮಾಡಿದೆ. ಕನಿಷ್ಠ ಒಮ್ಮೆಯಾದರೂ ನೇರವಾಗಿ ಲೋಕಸಭೆಯ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಕ್ಷದ ಸಂಸದರಿಗೆ ಸೂಚಿಸಿದ್ದರು.

ಕರ್ನಾಟಕದಲ್ಲಿ ಕೈ - ಜೆಡಿಎಸ್​ ಸೆಣಸು:ರಾಜ್ಯದಲ್ಲಿ ಕಾಂಗ್ರೆಸ್​ನ ಒಂದು ಸ್ಥಾನವನ್ನು ಕಸಿದುಕೊಳ್ಳಲು ಬಿಜೆಪಿ ಮತ್ತು ಜೆಡಿಎಸ್​ ದೋಸ್ತಿ ಮುಂದಾಗಿದೆ. ಹೀಗಾಗಿ ಕೈ ಪಕ್ಷದ ಜಿಸಿ ಚಂದ್ರಶೇಖರ್​ ವಿರುದ್ಧ ಜೆಡಿಎಸ್​​ ಕುಪೇಂದ್ರ ಸ್ವಾಮಿ ಅವರನ್ನು ಉಮೇದುವಾರಿಯನ್ನಾಗಿ ಕಣಕ್ಕಿಳಿಸಿದೆ. ಕ್ರಾಸ್​ ವೋಟುಗಳ ಲೆಕ್ಕಾಚಾರದಲ್ಲಿ ಜೆಡಿಎಸ್​ ಮೂರನೇ ಅಭ್ಯರ್ಥಿಯನ್ನು ಇಲ್ಲಿ ಅಖಾಡಕ್ಕೆ ಇಳಿಸಿದೆ. 10 ರ ಪೈಕಿ 7 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿರುವ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದಿಂದ ಮೂರನೇ ಸ್ಥಾನವನ್ನು ಕಸಿದುಕೊಳ್ಳಲು ಸಂಜಯ್ ಸೇಠ್ ಅವರನ್ನು ಕಣಕ್ಕಿಳಿಸಿದೆ.

ಇದನ್ನೂ ಓದಿ:ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ- PML-N ನಡುವೆ ಒಪ್ಪಂದ: ಶೆಹಬಾಜ್ ಷರೀಫ್ ಪ್ರಧಾನಿ ಅಭ್ಯರ್ಥಿ

ABOUT THE AUTHOR

...view details