ದೌಸಾ (ರಾಜಸ್ಥಾನ)/ಮಾಲ್ಟಾ: ಯುರೋಪಿಯನ್ ರಾಷ್ಟ್ರ ಮಾಲ್ಟಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ದೌಸಾದ ನಿವಾಸಿ ಧೋಲಿ ಮೀನಾ ಅವರು ನೀಡಿದ ನೃತ್ಯ ಪ್ರದರ್ಶನದಿಂದ ಅಲ್ಲಿ ಸೇರಿದ್ದ ಎಲ್ಲರೂ ಪ್ರಭಾವಿತರಾದರು. ಈ ಕಾರ್ಯಕ್ರಮದಲ್ಲಿ ಧೋಲಿ ಮೀನಾ ಭಾರತ ದೇಶವನ್ನು ಪ್ರತಿನಿಧಿಸಿದ್ದರು ಎಂಬುದು ವಿಶೇಷ ಮತ್ತು 50 ಕ್ಕೂ ಹೆಚ್ಚು ದೇಶಗಳ ಜನರ ಸಮ್ಮುಖದಲ್ಲಿ ರಾಜಸ್ಥಾನಿ ಸಾಂಪ್ರದಾಯಿಕ ನೃತ್ಯ ಘೂಮರ್ನ ಅದ್ಭುತ ಪ್ರದರ್ಶನ ನೀಡಿ ಅಲ್ಲಿ ಸೇರಿದ್ದ ಎಲ್ಲರ ಚಪ್ಪಾಳೆಗೆ ಪಾತ್ರರಾದರು.
ಧೋಲಿ ಮೀನಾ ಪ್ರದರ್ಶನ ಕಂಡು ಪ್ರೇಕ್ಷಕರು ಮನಸೋತರು. ಘೂಮರ್ ಸಪ್ತ ಸಾಗರದಾಚೆಯೂ ರಾಜಸ್ಥಾನ ಮತ್ತು ಭಾರತೀಯ ಸಂಸ್ಕೃತಿಗೆ ಕೀರ್ತಿ ತಂದಂತೆ ತೋರುತ್ತದೆ. ಈ ಕಾರ್ಯಕ್ರಮವನ್ನು 18 ನೇ ಶತಮಾನದಲ್ಲಿ ನಿರ್ಮಿಸಲಾದ ಫೋರ್ಟ್ ಪೆಂಬ್ರೋಕ್ (Pembroke) ನಲ್ಲಿ ಆಯೋಜಿಸಲಾಗಿತ್ತು.
ಸಮಾರಂಭದಲ್ಲಿ ರಾಜಸ್ಥಾನಿ ಪಾಕಪದ್ಧತಿಯ ಪರಿಮಳ:ಧೋಲಿ ಮೀನಾ ಅವರ ಘೂಮರ್ ನೃತ್ಯದ ಜೊತೆಗೆ ಜನರು ಅಂತಾರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ಭಾರತೀಯ ಆಹಾರದ ರುಚಿಯನ್ನು ನೋಡಿದರು ಮತ್ತು ಆಸ್ವಾದಿಸಿದರು. ಈ ವೇಳೆ ಧೋಲಿ ಮೀನಾ ಕಾರ್ಯಕ್ರಮದಲ್ಲಿ ಸ್ಟಾಲ್ ಕೂಡ ಹಾಕಿದ್ದರು. ಈ ಸ್ಟಾಲ್‌ನಲ್ಲಿ ಜನರಿಗೆ ರಾಜಸ್ಥಾನಿ ಸಾಂಪ್ರದಾಯಿಕ ಆಹಾರಗಳಾದ ದಾಲ್, ಬಾಟಿ ಮತ್ತು ಚುರ್ಮಾವನ್ನು ಊಣ ಬಡಿಸಿ, ದೇಶಿಯ ಊಟದ ರುಚಿಯನ್ನು ವಿದೇಶಗಳಲ್ಲಿ ಪರಿಚಯಿಸುವಂತೆ ಮಾಡಿದರು. ಜನರು ನಮ್ಮ ಆಹಾರವನ್ನು ತುಂಬಾ ಇಷ್ಟಪಡುತ್ತಾರೆ ಎಂದು ಧೋಲಿ ಮೀನಾ ಇದೇ ವೇಳೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಭಾರತೀಯ ಸ್ಟಾಲ್ ಅಲ್ಲದೆ ಇತರ 35 ದೇಶಗಳ ಸ್ಟಾಲ್ಗಳನ್ನು ಸಹ ಸ್ಥಾಪಿಸಲಾಗಿತ್ತು ಎಂಬುದು ವಿಶೇಷ.