ಕರ್ನಾಟಕ

karnataka

ETV Bharat / bharat

ಮೊಬೈಲ್​ ಕದ್ದು ಸುಡಾನ್​ಗೆ ರವಾನಿಸುತ್ತಿದ್ದ ಗ್ಯಾಂಗ್​​ ಬಂಧನ: 1.75 ಕೋಟಿ ಮೌಲ್ಯದ ಫೋನ್​​ಗಳು ವಶಕ್ಕೆ - mobile Smuggling gang arrested - MOBILE SMUGGLING GANG ARRESTED

ಮೊಬೈಲ್​ ಕಳ್ಳತನ ಮಾಡಲು ಯುವಕರನ್ನು ಪ್ರತಿ ತಿಂಗಳು ವೇತನದ ಆಧಾರದ ಮೇಲೆ ಕಳ್ಳತನದ ಗ್ಯಾಂಗ್​​ ನೇಮಕ ಮಾಡಿಕೊಂಡಿತ್ತು

smuggling-gang-delivering-stolen-phones-to-sudan-dot-dot-dot-phones-worth-rs-dot-1-75-crore-seized-dot-dot-dot-17-people-including-five-sudanese-nationals-arrested
smuggling-gang-delivering-stolen-phones-to-sudan-dot-dot-dot-phones-worth-rs-dot-1-75-crore-seized-dot-dot-dot-17-people-including-five-sudanese-nationals-arrested

By ETV Bharat Karnataka Team

Published : Apr 27, 2024, 11:29 AM IST

ಹೈದರಾಬಾದ್​: ರಾಜ್ಯದಲ್ಲಿ ಸ್ಮಾರ್ಟ್​ಫೋನ್​ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ 12 ಜನರ ಗ್ಯಾಂಗ್​ವೊಂದನ್ನು ಹೈದರಾಬಾದ್​ ದಕ್ಷಿಣ ವಲಯದ ಟಾಸ್ಕ್​ ಫೋರ್ಸ್​​ ಪೊಲೀಸರು ಬಂಧಿಸಿದ್ದಾರೆ. ಐದು ಜನರ ತಂಡ ಮೊಬೈಲ್​ ಕದ್ದು ಅದನ್ನು ಸುಡಾನ್​ಗೆ ರವಾನಿಸುತ್ತಿದ್ದರು. ಬಂಧಿತರ ಬಳಿ 1.75 ಕೋಟಿಯ ಮೌಲ್ಯದ 703 ಸ್ಮಾರ್ಟ್​​ಫೋನ್ ಮತ್ತು ಒಂದು ಬೈಕ್​​​ ಕೂಡಾ ವಶಕ್ಕೆ ಪಡೆಯಲಾಗಿದೆ.

ಬಶೀರ್​ ಭಾಗ್​​ನಲ್ಲಿ ಪ್ರಕರಣದ ವಿವರ ನೀಡಿದ ಹೈದರಾಬಾದ್​ ಪೊಲೀಸ್​ ಕಮಿಷನರ್​​ ಕೊಟ್ಟಕೊಟಾ ಶ್ರೀನಿವಾಸ್​ ರೆಡ್ಡಿ ಮಾಹಿತಿ ನೀಡಿದರು. ಈ ಗ್ಯಾಂಗ್​ ಮೊಬೈಲ್​ ಕಳ್ಳತನ ಮಾಡಲು ಯುವಕರನ್ನು ಪ್ರತಿ ತಿಂಗಳು ವೇತನದ ಆಧಾರದ ಮೇಲೆ ನೇಮಕ ಮಾಡಿಕೊಂಡಿತ್ತು ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ತಂಡ ಸಿಕ್ಕಿಬಿದ್ದಿದ್ದು ಹೀಗೆ: ತಾಡ್ಬಂಡ್​ನಲ್ಲಿ ಡೆಕೊರೇಷನ್​​ ಕೆಲಸ ಮಾಡುತ್ತಿದ್ದ ಮೊಹಮ್ಮದ್​ ಮುಜಾಮಿಲ್​ ಆಲಿಯಾಸ್​ ಮುಜ್ಜು (19) ಮತ್ತು ಜಹನುಮದಲ್ಲಿ ಡ್ರೈವರ್​ ಆಗಿದ್ದ ಸೈಯದ್​ ಅಬ್ರಾರ್​​ (19) ಇತ್ತೀಚಿಗೆ ಎಲ್​ಬಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಬೈಕ್​ವೊಂದನ್ನು ಕದ್ದಿದ್ದರು. ಇದೇ ವಾಹನದಲ್ಲಿ ಸಾಗಿದ ಅವರು ಬಂಡ್ಲಗುಂಡ ಪೊಲೀಸ್​ ಠಾಣೆ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ವಾಚ್​ಮಾನ್​ ಮೇಲೆ ಹಲ್ಲೆ ಮಾಡಿ ಸೆಲ್​ ಫೋನ್​ ಕಿತ್ತು ಪರಾರಿಯಾಗಿದ್ದರು. ಇತ್ತೀಚಿನ ದಿನದಲ್ಲಿ ಮೊಬೈಲ್​ ಫೋನ್​ ಕಳ್ಳತನ ಪ್ರಕರಣದಲ್ಲಿ ಜನರು ಗಾಯಗೊಳ್ಳುತ್ತಿದ್ದು ಹೆಚ್ಚಾಗಿದ್ದು, ಈ ಕುರಿತು ತನಿಖೆಗೆ ಆಯುಕ್ತರಾದ ಶ್ರೀನಿವಾಸ್​ ರೆಡ್ಡಿ ತನಿಖೆಗೆ ಆದೇಶ ನೀಡಿದ್ದರು.

ಈ ಪ್ರಕರಣ ಭೇದಿಸಲು ಮುಂದಾದ ದಕ್ಷಿಣ ವಲಯ ಟಾಸ್ಕ್​ ಫೋರ್ಸ್​ ಪೊಲೀಸರು, ಮೊಹಮ್ಮದ್​ ಮುಜಾಮಿಲ್​ ಮತ್ತು ಸೈಯದ್​​ ಅಬ್ರಾರ್​ನನ್ನು ಬಂಧಿಸಿ ತನಿಖೆ ಮಾಡಿದಾಗ ಅವರು, ಈ ಸ್ಮಾಗಲಿಂಗ್​ ಗ್ಯಾಂಗ್​ ಬಗ್ಗೆ ಬಾಯ್ಬಿಟ್ಟಿದ್ದಾರೆ. ಮುಜಾಮಿಲ್ ಮತ್ತು ಅಬ್ರಾರ್ ಜಗದೀಶ್ ಮಾರ್ಕೆಟ್‌ನ ಅಂಗಡಿಯವರು, ವ್ಯಾಪಾರಿಗಳು ಮತ್ತು ತಂತ್ರಜ್ಞರ ಸೋಗಿನಲ್ಲಿ ಫೋನ್​ ಅನ್ನು ವಿವಿಧ ರೀತಿ ಖದ್ದು, ಖರೀದಿಸಿ ಮತ್ತು ಮಾರಾಟ ಮಾಡುತ್ತಿದ್ದಾರೆ. ಮೊಹಮ್ಮದ್ ಜಾಕೀರ್, ಮೊಹಮ್ಮದ್ ಅಖ್ತರ್, ಶೇಖ್ ಅಜರ್, ಮೊಹಮ್ಮದ್ ಖಾಜಾ ನಿಜಾಮುದ್ದೀನ್ ಅಲಿಯಾಸ್ ಕೈಸರ್, ಮೊಹಮ್ಮದ್ ಶಫಿ ಅಲಿಯಾಸ್ ಬಬ್ಲು, ಜೆ.ಎಲಮಂಡ ರೆಡ್ಡಿ, ಸೈಯದ್ ಲೇಖ್, ಶೇಖ್ ಅಜರ್ ಮೈನುದ್ದೀನ್, ಪಠಾಣ್ ರಬ್ಬಾನಿ ಖಾನ್, ಮೊಹಮ್ಮದ್ ಸಲೀಂ ಕೂಡ ಭಾಗಿಯಾಗಿದ್ದಾರೆ.

ಇವರಲ್ಲಿ ಹೈದರಾಬಾದ್​ನಲ್ಲಿ ನೆಲೆಸಿರುವ ಮೊಹಮ್ಮದ್ ಶಫಿ ಅಲಿಯಾಸ್ ಬಬ್ಲೂ ಐವರು ಸುಡಾನ್‌ನ ಗ್ಯಾಂಗ್‌ಗೆ ಫೋನ್‌ಗಳನ್ನು ಮಾರಾಟ ಮಾಡುತ್ತಿದ್ದ. ಆ ಗ್ಯಾಂಗ್‌ನ ಮೊಹಮ್ಮದ್ ಅಲ್ಬದ್ವಿ, ಉಸ್ಮಾನ್ ಬಾಬಿಕರ್, ಸಾಲಿ ಅಬ್ದುಲ್ಲಾ, ಸಿದ್ದಿಗ್ ಅಹ್ಮದ್, ಮತ್ತು ಎಲ್ತಾಯೆಬ್ ಮೊಹಮ್ಮದ್ ಪ್ಯಾಕಿಂಗ್​ ಆಹಾರದ ಮಧ್ಯೆ ಫೋನ್​ ಬಚ್ಚಿಟ್ಟು ಸುಡಾನ್​ಗೆ ಹಡಗುಗಳ ಮೂಲಕ ಸಾಗಿಸುತ್ತಿದ್ದರು. ಈಗಾಗಲೇ ಆರೋಪಿಗಳು ಸಾವಿರಾರು ಫೋನ್​ಗಳನ್ನು ಮಾರಾಟ ಮಾಡಿರುವ ಶಂಕೆ ಇದೆ. ವ್ಯಾಪಾರ ಮತ್ತು ಶಿಕ್ಷಣದ ಹೆಸರಿನಲ್ಲಿ ಭಾರತಕ್ಕೆ ಬಂದ ಸುಡಾನ್ ಪ್ರಜೆಗಳು ಬಂಜಾರಾ ಹಿಲ್ಸ್ ಮತ್ತು ಮಸಾಬ್ಟಾಂಕ್ ಪ್ರದೇಶಗಳಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.

ಜಗದೀಶ್ ಮಾರ್ಕೆಟ್‌ನ ಜೆ.ಎಳಮಂಡ ರೆಡ್ಡಿ ಎಂಬ ಸೆಲ್‌ಫೋನ್ ಅಂಗಡಿಯ ಮಾಲೀಕ ಕದ್ದ ಐಫೋನ್‌ಗಳನ್ನು ಮಾತ್ರ ಖರೀದಿಸುತ್ತಿದ್ದ. ಅಮೆರಿಕ ಮತ್ತು ಇತರ ದೇಶಗಳಲ್ಲಿ ಕೆಲವು ಐಫೋನ್‌ಗಳು ಕಳೆದು ಹೋಗಿವೆ ಎಂದು ಸುಳ್ಳು ವಿಮೆ ಕ್ಲೈಮ್‌ಗಳನ್ನು ಮಾಡಿ ನಂತರ ಆ ಫೋನ್‌ಗಳನ್ನು ಭಾರತಕ್ಕೆ ತಂದು ಇಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದು ಬಯಲಾಗಿದೆ.

ಇದನ್ನೂ ಓದಿ: ಪತಿಗಾಗಿ ಗುಡಿ ಕಟ್ಟಿಸಿದ ಪತ್ನಿ; ಈ ಅಪರೂಪದ ದೇವಸ್ಥಾನ ಇರೋದೆಲ್ಲಿ ಗೊತ್ತಾ?

ABOUT THE AUTHOR

...view details