ಕರ್ನಾಟಕ

karnataka

ETV Bharat / bharat

ಜಾತಿ ರಾಜಕೀಯ ಹೆಸರಲ್ಲಿ ಕೆಲವರಿಂದ ಶಾಂತಿ ಕದಡುವ ಯತ್ನ: ಪ್ರಧಾನಿ ಮೋದಿ - GRAMEEN BHARAT MAHOTSAV

ಗ್ರಾಮೀಣ ಜನರಿಗೆ ಘನತೆಯ ಬದುಕು ರೂಪಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆ ಆಗಿದೆ. ನಮ್ಮ ಗುರಿ ಗ್ರಾಮೀಣ ಭಾರತವನ್ನು ಸಬಲೀಕರಣಗೊಳಿಸುವುದು ಎಂದು ಪ್ರಧಾನಿ ಮೋದಿ ಹೇಳಿದರು.

since-2014-i-have-been-continuously-working-towards-serving-rural-india-pm-modi
ಪ್ರಧಾನಿ ನರೇಂದ್ರ ಮೋದಿ (IANS)

By ANI

Published : Jan 4, 2025, 1:54 PM IST

ನವದೆಹಲಿ:ಕೆಲವರು ಜಾತಿ ರಾಜಕೀಯ ಹೆಸರಿನಲ್ಲಿ ವಿಷ ಹರಡುವ ಮೂಲಕ ಶಾಂತಿ ಕದಡುವ ಯತ್ನವನ್ನು ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಸಾಮರಸ್ಯ ಮತ್ತು ಶಾಂತಿ ಬಲಗೊಳಿಸುವಲ್ಲಿ ನಾವು ಕಾರ್ಯ ನಿರ್ವಹಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ದೆಹಲಿಯ ಭಾರತ್​ ಮಂಟಪ್​ನಲ್ಲಿ ಗ್ರಾಮೀಣ ಭಾರತ್​​ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 2014ರಲ್ಲಿ ಪ್ರಧಾನಿಯಾದಾಗಿನಿಂದ ಪ್ರತಿ ಕ್ಷಣವೂ ಗ್ರಾಮೀಣ ಭಾರತ ಸಬಲೀಕರಣಕ್ಕೆ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದರು.

2025ರ ವರ್ಷದ ಆರಂಭದಲ್ಲೇ ಗ್ರಾಮೀಣ ಭಾರತ್​ ಮಹೋತ್ಸವ್​​ ಬೃಹತ್​ ಕಾರ್ಯಕ್ರಮವನ್ನು ಭಾರತದ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಪರಿಚಯಿಸಲಾಗಿದೆ. ಇದು ಹೊಸ ಗುರುತು ಸೃಷ್ಟಿಸಲಿದ್ದು, ಈ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ನಬಾರ್ಡ್​ ಮತ್ತು ಇತರೆ ಉದ್ಯೋಗಿಗಳಿಗೆ ಶುಭಾಶಯ ತಿಳಿಸಿದರು.

ಗ್ರಾಮೀಣ ಪ್ರದೇಶಗಳು ಎದುರಿಸುತ್ತಿರುವ ಸವಾಲಿನ ನಡುವೆ ನಾನು ನನ್ನ ಬಾಲ್ಯವನ್ನು ಗ್ರಾಮೀಣ ಪ್ರದೇಶದಲ್ಲಿ ಕಳೆದ. ಇದರಿಂದಾಗಿ ಅಲ್ಲಿನ ಸವಾಲುಗಳನ್ನು ಎದುರಿಸುವುದು ಕಲಿತೆ ಹಾಗೇ ಅವರ ಸಾಮರ್ಥ್ಯ ಅರಿತೆ. ಗ್ರಾಮೀಣ ಪ್ರದೇಶದ ಜನರು ಕಠಿಣ ಶ್ರಮದ ಹೊರತಾಗಿ ಅವರು ಸೀಮಿತ ಸೌಲಭ್ಯದಿಂದಾಗಿ ಅವಕಾಶದ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದರು.

ಮೂಲಭೂತ ಸೌಲಭ್ಯದ ಖಾತ್ರಿಯ ಪ್ರಚಾರ : 2014ರಿಂದ ನಾನು ಕಚೇರಿ ಅಧಿಕಾರ ವಹಿಸಿಕೊಂಡಾಗಿನಿಂದಾಗಲೂ ಪ್ರತಿ ಘಳಿಗೆ ಗ್ರಾಮೀಣ ಭಾರತದ ಸೇವೆಗಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಗ್ರಾಮೀಣ ಜನರಿಗೆ ಘನತೆಯ ಬದುಕು ರೂಪಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆ ಆಗಿದೆ. ನಮ್ಮ ಗುರಿ ಗ್ರಾಮೀಣ ಭಾರತವನ್ನು ಸಬಲೀಕರಣಗೊಳಿಸುವುದು. ಅವರಿಗೆ ಅವಕಾಶಗಳ ನೀಡುವ ಮೂಲಕ ಮುನ್ನಡೆ ಸಾಧಿಸಲು ಸಹಾಯ ಮಾಡಿ, ವಲಸೆ ತಪ್ಪಿಸಿ, ಆರಾಮದಾಯಕ ಬದುಕು ಕಲ್ಪಿಸುವುದಾಗಿದೆ. ಇದನ್ನು ಸಾಧಿಸಲು ಪ್ರತಿ ಗ್ರಾಮದಲ್ಲಿ ಮೂಲಭೂತ ಸೌಲಭ್ಯದ ಖಾತ್ರಿಯ ಪ್ರಚಾರವನ್ನು ನಾವು ಆರಂಭಿಸಿದ್ದಾಗಿ ತಿಳಿಸಿದರು.

ಬಡತನ ಇಳಿಕೆ : ಈ ಹಿಂದಿನ ಸರ್ಕಾರಗಳು ಎಸ್​ಸಿ, ಎಸ್​ಟಿ ಮತ್ತು ಒಬಿಸಿ ಅಗತ್ಯತೆಗೆ ಗಮನ ನೀಡಲಿಲ್ಲ. ಗ್ರಾಮಗಳಲ್ಲಿ ವಲಸೆಗಳು ನಿರಂತರವಾಗಿ ಬಡತನ ಕೂಡ ಹೆಚ್ಚಾಯಿತು. ಪರಿಣಾಮ ನಗರ ಮತ್ತು ಗ್ರಾಮಗಳ ನಡುವಿನ ಅಂತರ ಹೆಚ್ಚಾಗುತ್ತಲೇ ಹೋಗಿತ್ತು. ದಶಕಗಳ ಹಿಂದೆ ಅಭಿವೃದ್ಧಿಯಿಂದ ವಂಚಿತವಾದ ಪ್ರದೇಶಗಳು ಇದೀಗ ಸಮಾನ ಹಕ್ಕು ಪಡೆಯುತ್ತಿವೆ. ನಿನ್ನೆಯಷ್ಟೇ ಎಸ್​ಬಿಐ ವರದಿ ಕೂಡ ಬಿಡುಗಡೆಯಾಗಿದ್ದು, ಅದರಲ್ಲಿ 2012ಕ್ಕೆ ಹೋಲಿಕೆ ಮಾಡಿದಾಗ ಶೇ 26ರಷ್ಟಿದ್ದ ಬಡತನವೂ 2024ರಲ್ಲಿ ಶೇ 5ಕ್ಕೆ ಕುಸಿದಿದೆ ಎಂದು ಉಲ್ಲೇಖಿಸಿದರು.

ಸರ್ಕಾರದ ಕ್ರಮಗಳ ಮೂಲ ಸುಧಾರಿತ ಬದುಕು : ಕಳೆದೊಂದು ದಶಕದಿಂದ ನಮ್ಮ ಸರ್ಕಾರೂ ಗ್ರಾಮೀಣ ಭಾರತವನ್ನು ಮೇಲೆತ್ತು ಕಾರ್ಯದಲ್ಲಿ ನಿರತವಾಗಿದೆ, ಪ್ರಧಾನ ಮಂತ್ರಿ ಫಸಲ್​ ಭೀಮಾ ಯೋಜನಾ ಮತ್ತು ಪಿಎಂ ಕಿಸಾನ್​ ಸಮ್ಮಾನ್​ ನಿಧಿಯಂತಹ ಆರ್ಥಿಕ ನೀತಿಯ ಉಪಕ್ರಮವನ್ನು ಜಾರಿ ಮಾಡಲಾಗಿದೆ.

ಗ್ರಾಮೀಣ ಜನರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಅವಕಾಶ ಸೃಷ್ಟಿಸುವ ಮೂಲಕ ಅವರಿಗೆ ಗರಿಷ್ಠ ಆರ್ಥಿಕ ಬೆಂಬಲವನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಪಿಎಂ ಕಿಸಾನ್​ ಸಮ್ಮಾನ್​ ನಿಧಿ ಮೂಲಕ ರೈತರಿಗೆ ಮೂರು ಲಕ್ಷ ಕೋಟಿಯನ್ನು ಒದಗಿಸಲಾಗಿದೆ. ಕಳೆದ 10 ವರ್ಷದಲ್ಲಿ ರೈತರಿಗೆ ನೀಡುತ್ತಿರುವ ಕೃಷಿ ಸಾಲವನ್ನು 3.5 ಪಟ್ಟು ಹೆಚ್ಚಿಸಲಾಗಿದೆ ಎಂದರು.

ಕಳೆದೊಂದು ದಶಕದಿಂದ ನಿರಂತರವಾಗಿ ಹಲವು ಬೆಳೆಗಳಿಗೆ ರೈತರ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ. ಸ್ವಾಮಿತ್ವ ಯೋಜನೆಯಂತಹ ಕ್ರಮಗಳು ಗ್ರಾಮೀಣ ಜನರಿಗೆ ಆಸ್ತಿ ಪತ್ರವನ್ನು ನೀಡುತ್ತಿದೆ. ಗ್ರಾಮೀಣ ಜನರ ಖರೀದಿ ಸಾಮರ್ಥ್ಯವು ಗಮನಾರ್ಹವಾಗಿ ಸುಧಾರಣೆ ಕಂಡಿದೆ. ಮೊದಲಬಾರಿಗೆ ತಮ್ಮ ಆದಾಯದದಲ್ಲಿ ಆಹಾರದ ಮೇಲೆ ಗ್ರಾಮೀಣ ಜನರು ವ್ಯಯ ಮಾಡುತ್ತಿರುವುದು ಶೇ 50ರಷ್ಟು ಕಡಿಮೆಯಾಗಿದ್ದು, ಇದು ಇತರೆ ಅಗತ್ಯತೆ ಮೇಲೆ ಹೆಚ್ಚು ಖರ್ಚು ಮಾಡಲ ಅವಕಾಶ ನೀಡಿದೆ ಎಂದರು.

ವಿಕಸಿತ ಭಾರತ 2047 ಗಾಗಿ ಸುಧಾರಿತ ಗ್ರಾಮೀಣ ಭಾರತವನ್ನು ನಿರ್ಮಿಸುವುದು ಎಂಬ ಧ್ಯೇಯದ ಮೇರೆಗೆ ಭಾರತ್​ ಮಂಟಪ್​ನಲ್ಲಿ ಇಂದಿನಿಂದ ಜನವರಿ 9ರ ವರೆಗೆ ಆರು ದಿನಗಳ ಕಾಲ ಈ ಗ್ರಾಮೀಣ ಭಾರತ್​​ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. (ಪಿಟಿಐ/ಎಎನ್​ಐ/ಐಎಎನ್​ಎಸ್​)

ಇದನ್ನೂ ಓದಿ:'ನನಗಾಗಿ ಐಷಾರಾಮಿ ಬಂಗಲೆ ಕಟ್ಟಿಕೊಂಡಿಲ್ಲ, ಬಡವರಿಗಾಗಿ 4 ಕೋಟಿ ಸೂರು ನಿರ್ಮಿಸಿದ್ದೇವೆ': ಕೇಜ್ರಿವಾಲ್​​ಗೆ ಮೋದಿ ಟಾಂಗ್

ABOUT THE AUTHOR

...view details