ಕರ್ನಾಟಕ

karnataka

ETV Bharat / bharat

ಶ್ರೀ ಕೃಷ್ಣ ಜನ್ಮಾಷ್ಟಮಿ 2024: ದೇಶದೆಲ್ಲೆಡೆ 'ಗೋವಿಂದ'ನ ಜಪ; ಮಥುರಾದಲ್ಲಿ 'ರಾಧೇಶ್ಯಾಮ'ನಿಗೆ ವಿಶೇಷ ಆರತಿ - janmashtami 2024 - JANMASHTAMI 2024

ಕೃಷ್ಣನ ಜನ್ಮದಿನವೇ ಶ್ರೀ ಕೃಷ್ಣ ಜನ್ಮಾಷ್ಟಮಿ. ಲೋಕದೆಲ್ಲೆಡೆ ಕೃಷ್ಣನ ಭಕ್ತರು ಉಪವಾಸ ಮಾಡಿ ಪೂಜೆ, ವೃತ ಪಾಲಿಸುತ್ತಿದ್ದಾರೆ. ವಿಶೇಷವಾಗಿ ಕೃಷ್ಣನ ಜನ್ಮ ಸ್ಥಳ ಮಥುರಾದಲ್ಲಿ ಮುಕುಂದನಿಗೆ ಆರತಿ ಬೆಳಗಲಾಯಿತು.

JANMASHTAMI 2024
ಮಥುರಾದಲ್ಲಿ 'ಮುಕಂದ'ನಿಗೆ ವಿಶೇಷ ಆರತಿ (ETV Bharat)

By ETV Bharat Karnataka Team

Published : Aug 26, 2024, 9:17 AM IST

ಮಥುರಾ(ಉತ್ತರ ಪ್ರದೇಶ) : ಭಗವಾನ್​ ಶ್ರೀ ಕೃಷ್ಣನಿಗಿಂದು ಜನ್ಮದಿನದ ಸಂಭ್ರಮ. ಇಡೀ ರಾಷ್ಟ್ರವೇ ಶ್ರೀಕೃಷ್ಣನ ಜನ್ಮದಿನದ ಆಚರಣೆಯಲ್ಲಿ ಮುಳುಗಿದೆ. ಕೃಷ್ಣನ ಭಕ್ತರು ಸಡಗರದಿಂದ ವಿವಿಧ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಕೃಷ್ಣನ ಜನ್ಮಸ್ಥಳ ಮಥುರಾದಲ್ಲಂತೂ ಹಬ್ಬ ಜೋರಾಗಿದೆ. ಮುಂಜಾನೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಉಪವಾಸ ಕೈಗೊಂಡು ಭಕ್ತಿ-ಭಜನೆ, ಆರತಿ ಮಾಡಿ ಶ್ರೀಕೃಷ್ಣನ ದರ್ಶನ ಪಡೆದು ಪಾವನರಾಗುತ್ತಿದ್ದಾರೆ.

ದೇವಾಲಯದಲ್ಲೆಲ್ಲಾ ಗಂಟೆ, ಮೃದಂಗ, ಶಂಖಗಳ ಸದ್ದು ಪ್ರತಿಧ್ವನಿಸುತ್ತಿದೆ. ದೇವಾಲಯಗಳನ್ನು ಬಣ್ಣಬಣ್ಣದ ದೀಪಗಳಿಂದ, ಹೂವುಗಳಿಂದ ಅಲಂಕರಿಸಲಾಗಿದೆ. ವಿಷ್ಣುವಿನ 8 ನೇ ಅವತಾರ ತಾಳಿದ್ದ ಶ್ರೀ ಕೃಷ್ಣನ ಜನ್ಮದಿನ ಕೃಷ್ಣ ಪಕ್ಷದ ಅಷ್ಟಮಿ ಅಥವಾ ಭಾದ್ರಪದ ಮಾಸದ 8ನೇ ದಿನದಂದು ಬರುತ್ತದೆ. ಮತ್ತು ಇದನ್ನು ಕೃಷ್ಣಾಷ್ಟಮಿ, ಗೋಕುಲಾಷ್ಟಮಿ, ಅಷ್ಟಮಿ ರೋಹಿಣಿ, ಶ್ರೀಕೃಷ್ಣ ಜಯಂತಿ ಮತ್ತು ಶ್ರೀ ಜಯಂತಿ ಎಂದೂ ಕರೆಯಲಾಗುತ್ತದೆ.

ಜನ್ಮಾಷ್ಟಮಿಯಂದು ದಹಿ ಹಂಡಿಯೇ ವಿಶೇಷ :ಕೃಷ್ಣ ಜನ್ಮಾಷ್ಟಮಿಯ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದು. ಈ ಹಬ್ಬದಲ್ಲಿ ಪ್ರಮುಖ ಆಚರಣೆ ದಹಿ ಹಿಂಡಿ. ದಹಿ ಹಂಡಿಯೆಂಬುದು ಹಿಂದಿ ಪದ. ಕನ್ನಡದಲ್ಲಿ ನಾವು ಮೊಸರು ಕುಡಿಕೆ ಎಂದು ಕರೆಯುತ್ತೇವೆ. ದಹಿ ಎಂದರೆ ಮೊಸರು. ಹಂಡಿ ಎಂದರೆ ಮೊಸರನ್ನು ಸಂಗ್ರಹಿಸಲು ಬಳಸುವ ಮಡಕೆ. ಪದ್ಧತಿ ಪ್ರಕಾರ ಕೃಷ್ಣ ಜನ್ಮಾಷ್ಟಮಿಯ ಮಾರನೇ ದಿನ ದಹಿ ಹಂಡಿ ಆಚರಣೆಗಳನ್ನು ನಡೆಸಲಾಗುತ್ತದೆ.

"ಮಾಖನ್ ಚೋರ್​" ಕೃಷ್ಣ : ಮೊಸರು ಕುಡಿಕೆ ಆಚರಣೆಯ ಮೂಲಕ ಶ್ರೀಕೃಷ್ಣನ ಜೀವನವನ್ನು ಚಿತ್ರಿಸಲಾಗಿದೆ. ಬಾಲ್ಯ ಜೀವನದಲ್ಲಿ ಶ್ರೀ ಕೃಷ್ಣ ಅತಿಯಾಗಿ ಬೆಣ್ಣೆ, ಮೊಸರನ್ನು ಸೇವಿಸುತ್ತಿದ್ದ. ಇದಕ್ಕಾಗಿ ಅಕ್ಕಪಕ್ಕದ ಮನೆಗಳಲ್ಲೂ ಕೂಡ ಮಡಿಕೆಯಿಂದ ಮೊಸರು, ಬೆಣ್ಣೆ ಕದಿಯುತ್ತಿದ್ದನು. ಇದರಿಂದ ಕೋಪಗೊಂಡಿದ್ದ ತಾಯಿ ಯಶೋದಾ ಹಾಲು, ಬೆಣ್ಣೆ ಮತ್ತು ಮೊಸರನ್ನು ಸಾಕಷ್ಟು ಎತ್ತರದಲ್ಲಿ ತೂಗುಹಾಕಲು ಆರಂಭಿಸಿದರು. ಆದರೂ ಬಿಡದ ಕೃಷ್ಣ ಮತ್ತು ಅವನ ಗೆಳೆಯರು ಬೆಣ್ಣೆಯನ್ನು ಪಡೆಯಲು ಮಾನವ ಪಿರಮಿಡ್‌ಗಳನ್ನು ನಿರ್ಮಿಸುವ ಮೂಲಕ ಬೆಣ್ಣೆಯನ್ನು ಕದ್ದು ಹಂಚಿ ತಿನ್ನುತ್ತಿದ್ದರು. ಇದರ ನೆನಪಿಗಾಗಿ ಪ್ರತಿ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಮೊಸರು ಮಡಿಕೆ ಆಟವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ:ದಸರಾ ಗಜಪಡೆಗೆ ಮೊದಲ ತಾಲೀಮು: ಗಂಭೀರ ಹೆಜ್ಜೆ ಹಾಕಿದ ಅಭಿಮನ್ಯು ಆ್ಯಂಡ್ ಟೀಂ - Elephants Begins Dasara Rehearsal

ABOUT THE AUTHOR

...view details