ಪಾಟ್ನಾ: ಬಿಹಾರರಾಜಧಾನಿ ಪಾಟ್ನಾದಲ್ಲಿ ಭಾನುವಾರ ತಡರಾತ್ರಿ ಟ್ರಕ್ ಮತ್ತು ಆಟೋ ನಡುವೆ ಭಾರಿ ಡಿಕ್ಕಿ ಸಂಭವಿಸಿದೆ. ಅಪಘಾತದ ಭೀಕರತೆಗೆ 7 ಮಂದಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾಟ್ನಾದ ಮಸೌರಿಯಿಂದ ನೌಬತ್‌ಪುರ ಕಡೆಗೆ ತೆರಳುತ್ತಿದ್ದ ಆಟೋ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಆಟೋದಲ್ಲಿ 10 ಜನರಿದ್ದರು ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಎಲ್ಲ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ತನಿಖೆ ಕೈಗೊಂಡಿದ್ದಾರೆ.
ಅಪಘಾತ ಸಂಭವಿಸಿದ್ದು ಹೇಗೆ?: ಮಸೌರಿ ಪಿತ್ವಾನ್ಸ್ ಮಾರ್ಗದ ನೂರಾ ಬಜಾರ್‌ನ ಮೋರಿ ಬಳಿ ಟ್ರಕ್ ಮತ್ತು ಆಟೋ ನಡುವೆ ಭಾರಿ ಡಿಕ್ಕಿ ಸಂಭವಿಸಿದೆ. ಅಪಘಾತದ ನಂತರ ಎರಡೂ ವಾಹನಗಳು ರಸ್ತೆ ಬದಿಯ ನೀರಿನಲ್ಲಿ ಬಿದ್ದಿವೆ. ಮೃತರ ಸಂಬಂಧಿಕರು ಹೇಳುವ ಪ್ರಕಾರ, ಕಾರ್ಮಿಕರೆಲ್ಲರೂ ಮಸೌರಿಯಿಂದ ಖಾರತ್ ಗ್ರಾಮಕ್ಕೆ ಆಟೋದಲ್ಲಿ ಹೋಗುತ್ತಿದ್ದರು. ಇವರೆಲ್ಲ ನಿತ್ಯ ಕೂಲಿ ಕೆಲಸಕ್ಕಾಗಿ ಪಾಟ್ನಾಕ್ಕೆ ತೆರಳಿ ರಾತ್ರಿ ವಾಪಸಾಗುತ್ತಿದ್ದರು. ಭಾನುವಾರ ರಾತ್ರಿಯೂ ಎಂದಿನಂತೆ ಕೆಲಸ ಮುಗಿಸಿಕೊಂಡು ತಮ್ಮೂರುಗಳಿಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಸತ್ತವರಲ್ಲಿ ಹೆಚ್ಚಿನವರು ಕಾರ್ಮಿಕರು: ಮೃತರಲ್ಲಿ 4 ಮಂದಿ ಡೋರಿಪರ್ ಗ್ರಾಮದ ನಿವಾಸಿಗಳು, ಇಬ್ಬರು ಬೇಗಮ್ಚಕ್ ನಿವಾಸಿಗಳಾಗಿದ್ದರೆ, ಚಾಲಕ ಹನ್ಸ್ದಿಹ್ ಗ್ರಾಮದ ನಿವಾಸಿಯಾಗಿದ್ದಾರೆ. ಮೃತರನ್ನು ಹಸದಿಹ್ ನಿವಾಸಿ 30 ವರ್ಷದ ಸುಶೀಲ್ ರಾಮ್ (ತಂದೆ ಲೇಟ್ ಶತ್ರುಘ್ನ ರಾಮ್), ಟೆಂಪೋ ಚಾಲಕ 40 ವರ್ಷದ ಮೆಶ್ ಬಿಂದ್ (ತಂದೆ ಶಿವನಾಥ್ ಬಿಂದ್), 40 ವರ್ಷದ ವಿನಯ್ ಬಿಂದ್ (ತಂದೆ ಲೇಟ್ ಸಂತೋಷಿ ಬಿಂದ್), 30 ವರ್ಷದ ಮಾತೇಂದ್ರ ಬಿಂದ್ (ತಂದೆ ಬಿಂದ್‌ಮೆರ್), 30 ವರ್ಷದ ಉಮೇಶ್ ಬಿಂದ್ (ತಂದೆ ಮಚ್ರು ಬಿಂದ್) ಮತ್ತು ವಯಸ್ಸನ್ನು ಬೇಗಂಚಾಕ್ ನಿವಾಸಿ 20 ವರ್ಷದ ಸೂರಜ್ ಠಾಕೂರ್ (ತಂದೆ ಅರ್ಜುನ್ ಠಾಕೂರ್) ಎಂದು ಗುರುತಿಸಲಾಗಿದೆ.