ಕರ್ನಾಟಕ

karnataka

ETV Bharat / bharat

ಕುಲ್ಗಾಮ್​ನಲ್ಲಿ ಮೂವರು ಭಯೋತ್ಪಾದಕರು ಸೆರೆ: ಶಸ್ತ್ರಾಸ್ತ್ರ, ಮದ್ದುಗುಂಡು ವಶಕ್ಕೆ - THREE TERRORIST ARRESTED

ಜಂಟಿ ಕಾರ್ಯಾಚರಣೆ ವೇಳೆ ಸೆರೆಸಿಕ್ಕ ಭಯೋತ್ಪಾದಕರಿಂದ ಸೇನಾ ಸಿಬ್ಬಂದಿ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ
ಸಂಗ್ರಹ ಚಿತ್ರ (ETV Bharat)

By ETV Bharat Karnataka Team

Published : 8 hours ago

ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್​ ಜಿಲ್ಲೆಯಲ್ಲಿ ಜಂಟಿ ಶೋಧ ಕಾರ್ಯಾಚರಣೆ ವೇಳೆ ಭದ್ರತಾ ಪಡೆ ಸಿಬ್ಬಂದಿ ಮತ್ತು ಜಮ್ಮು ಹಾಗೂ ಕಾಶ್ಮೀರ ಪೊಲೀಸರು ಮೂವರು ಭಯೋತ್ಪಾದಕರನ್ನು ಬಂಧಿಸಿದ್ದಾರೆ.

ಖೈಮೋಹ್​ ಪೊಲೀಸ್​ ಠಾಣೆಯಲ್ಲಿ ಸೆಕ್ಷನ್​ 13, 18 ಮತ್ತು 39 ಯುಎಪಿಎ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಜಮ್ಮು ಹಾಗೂ ಕಾಶ್ಮೀರ ಪೊಲೀಸರು, 1ಆರ್​ಆರ್​ ಸೇನೆ, ಸಿಆರ್​ಪಿಎಫ್​ 18 ಬೆಟಾಲಿಯನ್​ ಜೊತೆ ಸೇರಿ ಕುಲ್ಗಾಮ್​ನಲ್ಲಿ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ನಿಷೇಧಿತ ಭಯೋತ್ಪಾದಕ ಸಂಘಟನೆ 'ಲಷ್ಕರ್-ಎ-ತೋಯ್ಬಾ' (LET) ಮತ್ತು 'ದಿ ರೆಸಿಸ್ಟೆನ್ಸ್ ಫ್ರಂಟ್' (TRF) ಜೊತೆಗೆ ಸಂಬಂಧ ಹೊಂದಿರುವ ಮೂವರು ಭಯೋತ್ಪಾದಕರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಧಿತರನ್ನು ಉಬೈದ್​ ಖುರ್ಷೀದ್ ಮಿರ್​, ಮಕ್ಸೂದ್​ ಅಹ್ಮದ್​ ಭಟ್​ ಹಾಗೂ ಉಮರ್​ ಬಶೀರ್​ ಎಂದು ಗುರುತಿಸಲಾಗಿದೆ. ಇವರೆಲ್ಲರೂ ದಕ್ಷಿಣ ಕಾಶ್ಮೀರದ ಕುಲ್ಗಾಮ್​ ಜಿಲ್ಲೆಯ ಥೋಕರ್ಪೋರಾ ಖೈಮೋಹ್​ ನಿವಾಸಿಗಳು.

ಬಂಧಿತರಿಂದ 2 ಎಕೆ ರೈಫಲ್​ಗಳು, 8 ಎಕೆ ಮ್ಯಾಗಜಿನ್​ಗಳು, 217 ಎಕೆ ರೌಂಡ್ಸ್​, 5 ಹ್ಯಾಂಡ್​ ಗ್ರೆನೇಡ್‌ಗಳು ಹಾಗೂ 2 ಮ್ಯಾಗಜೀನ್​ ಪೌಚ್​ಗಳು ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಭದ್ರತಾ ಪಡೆಗಳು ನೀಡಿದ ಮಾಹಿತಿ ಪ್ರಕಾರ, ಬಂಧಿತ ಭಯೋತ್ಪಾದಕರರು ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‌ಇಟಿ ಮತ್ತು ಟಿಆರ್‌ಎಫ್‌ನ ಸಕ್ರಿಯ ಭಯೋತ್ಪಾದಕರೊಂದಿಗೆ ನಿಕಟ ಸಂಪರ್ಕದಲ್ಲಿದ್ದರು. ಮತ್ತು ಕುಲ್ಗಾಮ್ ಜಿಲ್ಲೆಯಲ್ಲಿ ಪ್ರಮುಖ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಯೋಜಿಸುತ್ತಿದ್ದರು.

ಇದನ್ನೂ ಓದಿ:ಸುಕ್ಮಾ ಎನ್​ಕೌಂಟರ್​ನಲ್ಲಿ ಮೂವರು ನಕ್ಸಲರು ಹತ; ಡಿಸಿಎಂ ವಿಜಯ್​ ಶರ್ಮಾ

ABOUT THE AUTHOR

...view details