ಕರ್ನಾಟಕ

karnataka

ETV Bharat / bharat

ಲಘು ಮೋಟಾರ್​ ವಾಹನ ಪರವಾನಗಿ: ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಪುನಾರಂಭ​​ - LMV Driving Licence - LMV DRIVING LICENCE

ಮೋಟಾರ್​ ವಾಹನ ಕಾಯ್ದೆ-1988ಕ್ಕೆ ಸಾಂವಿಧಾನಿಕ ತಿದ್ದುಪಡಿ ಪೂರ್ಣಗೊಂಡಿದೆ. ಆದರೆ, ಈ ತಿದ್ದುಪಡಿಯ ಬಿಲ್​ ಅನ್ನು ಸಂಸತ್‌ನಲ್ಲಿ​ ಮಂಡಿಸಬೇಕಿದೆ ಎಂದು ಅಟಾರ್ನಿ ಜನರಲ್​ ಆರ್.ವೆಂಟಕರಮಣಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

sc-resumes-hearing-on-issue-of-lmv-driving-licence
ಸುಪ್ರೀಂ ಕೋರ್ಟ್​ (ETV Bharat)

By PTI

Published : Aug 21, 2024, 3:02 PM IST

ನವದೆಹಲಿ: ಲಘು ಮೋಟಾರು ವಾಹನ (ಎಲ್​ಎಂವಿ) ಚಾಲನಾ ಪರವಾನಗಿ​​ ಹೊಂದಿರುವವರು 7,500 ಕೆ.ಜಿಗಿಂತ ಹೆಚ್ಚಿಲ್ಲದ ತೂಕದ ವಾಹನ ಚಲಾಯಿಸಲು ಅರ್ಹತೆಯ ಕುರಿತು ಸುಪ್ರೀಂ ಕೋರ್ಟ್ ಇಂದು​ ಅರ್ಜಿ ವಿಚಾರಣೆ ಪುನರಾರಂಭಿಸಿದೆ.

ಮುಖ್ಯ ನಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ಪಂಚ ಸದಸ್ಯರ ಪೀಠ ವಿಚಾರಣೆ ನಡೆಸುತ್ತಿದೆ. ಈ ಕುರಿತು ನ್ಯಾಯಾಲಯದ ಮುಂದೆ ಹಾಜರಾದ ಅಟಾರ್ನಿ ಜನರಲ್​ ಆರ್. ವೆಂಟಕರಮಣಿ, ಮೋಟಾರ್​ ವಾಹನ ಕಾಯ್ದೆ-1988ರ ತಿದ್ದುಪಡಿ ಮಸೂದೆಯನ್ನು ಸಂಸತ್‌ನಲ್ಲಿ​ಮಂಡಿಸಬೇಕಿದೆ ಎಂದರು.

ಲಘು ವಾಹನ ಚಾಲನಾ ಪರವಾನಗಿ ಹೊಂದಿರುವವರು ಸಾರಿಗೆ ವಾಹನ ಚಲಾಯಿಸುವಾಗ ಆಗುವ ಅಪಾಘಾತದಲ್ಲಿ ವಿಮಾ ಕಂಪನಿಗಳು ಪಾವತಿ ನೀಡುವಲ್ಲಿ ಆಗುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಹಲವು ಕಾನೂನಾತ್ಮಕ ಪ್ರಶ್ನೆಗಳು ಎದ್ದಿವೆ. ಹೀಗಾಗಿ ಪ್ರಕರಣ ಕೋರ್ಟ್‌ ಮೆಟ್ಟಿಲೇರಿದೆ.

ಇದನ್ನೂ ಓದಿ: ಎಲ್​ಎಂವಿ ಪರವಾನಗಿ ಹೊಂದಿರುವವರು ಲಘು ಸಾರಿಗೆ ವಾಹನ ಓಡಿಸಬಹುದೇ?; ಕೇಂದ್ರಕ್ಕೆ ಸ್ಪಷ್ಟನೆ ಕೇಳಿದ ಸುಪ್ರೀಂಕೋರ್ಟ್

ABOUT THE AUTHOR

...view details