ಸಾಗರ್ (ಮಧ್ಯ ಪ್ರದೇಶ): ಅಪರೂಪದ ಕಾಯಿಲೆಗಳು ಕೆಲವರಲ್ಲಿ ಜನ್ಮಜಾತವಾಗಿ ಬಂದಿದ್ದು, ಅನೇಕ ಬಾರಿ ಅವುಗಳನ್ನು ಪತ್ತೆ ಮಾಡುವಲ್ಲಿ ವೈದ್ಯರು ಕೂಡ ಎಡವುತ್ತಾರೆ. ಅದೇ ರೀತಿಯ ಪ್ರಕರಣವೊಂದು ಭಾಗ್ಯೋದಯ ತೀರ್ಥ ಆಸ್ಪತ್ರೆಯಲ್ಲಿ ದಾಖಲಾಗಿದೆ. ಶೀತ ಮತ್ತು ಕಡಿಮೆ ವಾಸನೆ ಗ್ರಹಣ ಶಕ್ತಿ ಸಮಸ್ಯೆ ಹೊಂದಿರುವ ಉತ್ತರ ಪ್ರದೇಶದ ಮೂಲದ 20ರ ಯುವತಿಗೆ ಉಸಿರಾಡುವುದು ಬಲು ತ್ರಾಸದಾಯಕ ಸಮಸ್ಯೆ.
ಇವರನ್ನು ಪರೀಕ್ಷಿಸಿ ಇಎನ್ಟಿ ಸರ್ಜನ್ ಡಾ ದಿನೇಶ್ ಪಟೇಲ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಾರಣ ಯುವತಿಗೆ ಇದ್ದಿದ್ದು, ಸಾಮಾನ್ಯ ಸಮಸ್ಯೆಯಲ್ಲ. ಜೀವನ್ಮರಣದಂತಹ ಸಮಸ್ಯೆಯಲ್ಲಿಯೇ 20 ವರ್ಷಗಳ ಕಾಲದಿಂದ ಜೀವಿಸುತ್ತಿದ್ದು, ಈ ಬಗ್ಗೆ ಅವಳು ಯಾವುದೇ ಅರಿವು ಹೊಂದಿರಲಿಲ್ಲ.
ಕೊನಾಲ್ ಅಟ್ರೆಸಿಯಾ ಎಂಬ ಅಪರೂಪದ ಸಮಸ್ಯೆ:ಈ ಯುವತಿ ಹುಟ್ಟಿನಿಂದಲೇ ಕೊನಾಲ್ ಅಟ್ರೆಸಿಯಾ ಎಂಬ ಸಮಸ್ಯೆಯಿಂದ ಬಳಲುತ್ತಿದ್ದಳು, ಈ ಸಮಸ್ಯೆಯಲ್ಲಿ ಮೂಗು ಮತ್ತು ಬಾಯಿ ನಡುವೆ ಸಂಪರ್ಕವಿರುವುದಿಲ್ಲ. ಹುಟ್ಟಿನಿಂದ ಬರುವ ಈ ಸಮಸ್ಯೆಯಲ್ಲಿ ಮಗು ತಾಯಿಯ ಎದೆ ಹಾಲು ಸೇವಿಸುವಾಗಲೇ ಉಸಿರುಗಟ್ಟಿ ಸಾವನ್ನಪ್ಪುತ್ತಾರೆ. ಜಗತ್ತಿನಲ್ಲಿ 8 ಸಾವಿರ ಮಕ್ಕಳಲ್ಲಿ ಒಬ್ಬರಿಗೆ ಈ ಸಮಸ್ಯೆ ಕಾಣುತ್ತದೆ. ಇದೊಂದು ಅಪರೂಪದ ಸಮಸ್ಯೆಯಾಗಿದೆ ಅಂತಾರೆ ವೈದ್ಯರು.
ಈ ರೋಗದ ಲಕ್ಷಣಗಳೇನು?: ಈ ಕುರಿತು ಮಾತನಾಡಿರುವ ವೈದ್ಯರಾದ ಡಾ ದಿನೇಶ್ ಪಟೇಲ್, ಕೊನಾಲ್ ಅಟ್ರಿಸಿಯಾ ಜನ್ಮಜಾತ ಸಮಸ್ಯೆಯಾಗಿದ್ದು, ಹುಟ್ಟಿನಿಂದಲೇ ಈ ಸಮಸ್ಯೆ ಕಂಡು ಬರುತ್ತದೆ. ಈ ಸಮಸ್ಯೆ ಇದ್ದಾಗ ಏಕಕಾಲದಲ್ಲಿ ಕಣ್ಣು, ಮೂಗು ಮತ್ತು ಹೃದಯ ಸಮಸ್ಯೆ ಕಾಣುತ್ತದೆ. ಆದರೆ, ರೋಗಿಯು ಕಳೆದ 20 ವರ್ಷದಿಂದ ಈ ಸಮಸ್ಯೆ ಇದ್ದರೂ ಆರೋಗ್ಯವಾಗಿದ್ದಾರೆ. ಕಾರಣ ಈ ಸಿಂಡ್ರೋಮ್ನಲ್ಲಿ ಎರಡರಿಂದ ಮೂರು ವಿಧವಿದೆ. ಇದರಲ್ಲಿ ಒಂದು ಮೂಗಿನ ಪೊರೆಯು ರಚನೆಯಾಗುವುದಿಲ್ಲ ಅಥವಾ ಎರಡೂ ಮೂಗಿನ ಪೊರೆಗಳು ಇರುವುದಿಲ್ಲ. ಅಥವಾ ಮೂಳೆ ಅಥವಾ ಪೊರೆಯಲ್ಲಿ ಸಮಸ್ಯೆ ಇರುತ್ತದೆ.