ಕರ್ನಾಟಕ

karnataka

ETV Bharat / bharat

ಖ್ಯಾತ ಹೃದ್ರೋಗ ತಜ್ಞ, ಪದ್ಮವಿಭೂಷಣ ಪುರಸ್ಕೃತ ಡಾ.ಎಂ.ಎಸ್.ವಲಿಯಾಥನ್ ನಿಧನ - M S Valiathan Passes Away - M S VALIATHAN PASSES AWAY

ಕೇರಳದ ಖ್ಯಾತ ಹೃದ್ರೋಗ ತಜ್ಞ, ಪದ್ಮವಿಭೂಷಣ ಪುರಸ್ಕೃತ ಡಾ.ಎಂ.ಎಸ್.ವಲಿಯಾಥನ್ ಅವರು ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಿಧನ ಹೊಂದಿದ್ದಾರೆ.

ಡಾ.ಎಂ.ಎಸ್.ವಲಿಯಾಥನ್
ಡಾ.ಎಂ.ಎಸ್.ವಲಿಯಾಥನ್ (ETV Bharat)

By PTI

Published : Jul 18, 2024, 2:22 PM IST

ತಿರುವನಂತಪುರಂ(ಕೇರಳ):ಖ್ಯಾತ ಹೃದ್ರೋಗ ತಜ್ಞ, ಪದ್ಮವಿಭೂಷಣ ಪುರಸ್ಕೃತ ಡಾ.ಎಂ.ಎಸ್.ವಲಿಯಾಥನ್ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಕರ್ನಾಟಕದ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

1934ರಲ್ಲಿ ಜನಿಸಿದ್ದ ವಲಿಯಾಥನ್, ಕೇರಳದ ರಾಜಧಾನಿ ತಿರುವನಂತಪುರಂನಲ್ಲಿರುವ ಶ್ರೀಚಿತ್ರ ತಿರುನಾಳ್ ಇನ್‌ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸಸ್ ಆ್ಯಂಡ್ ಟೆಕ್ನಾಲಜಿಯ ಸ್ಥಾಪಕ ನಿರ್ದೇಶಕ ಹಾಗೂ ಮಣಿಪಾಲ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯೂ ಆಗಿದ್ದರು. ಕಡಿಮೆ ವೆಚ್ಚದ ಕೃತಕ ಕವಾಟಗಳು, ಬಿಸಾಡಬಹುದಾದ ರಕ್ತದ ಚೀಲಗಳು ಮತ್ತು ಆಧುನಿಕ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ದೇಶದ ಶ್ರೇಷ್ಠ ಹೃದಯ ಶಸ್ತ್ರಚಿಕಿತ್ಸಕರಲ್ಲಿ ವಲಿಯಾಥನ್ ಸಹ ಒಬ್ಬರು. ಇವರ ನಿಧನಕ್ಕೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್, 'ವೈದ್ಯಕೀಯ ಜಗತ್ತಿಗೆ ವಲಿಯಾಥಾನ್ ಕೇರಳದ ಬಹುದೊಡ್ಡ ಕೊಡುಗೆ. ಅವರು ಸಾಂಪ್ರದಾಯಿಕ ಮತ್ತು ಆಧುನಿಕ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಗಳ ಏಕೀಕರಣದ ಪ್ರವರ್ತಕರಾಗಿ ಜನಪ್ರಿಯ ವೈದ್ಯರಾಗಿದ್ದರು. ಅವರ ಮುಂದಾಳತ್ವದಿಂದಲೇ ಶ್ರೀಚಿತ್ರ ಸಂಸ್ಥೆಯು ಪ್ರಾಮುಖ್ಯತೆ ಗಳಿಸಿತ್ತು. ಆಯುರ್ವೇದದ ಬಗ್ಗೆ ವಲಿಯಥಾನ್ ಅವರ ವಿಶಿಷ್ಠ ಕೃತಿಗಳಾದ 'ಕಾರಕ ಪರಂಪರೆ', 'ಸುಶ್ರುತ ಪರಂಪರೆ' ಮತ್ತು 'ವಾಗ್ಭಟ ಪರಂಪರೆ' ಸಾಮಾನ್ಯ ಜನರಿಗೆ ಆಯುರ್ವೇದದ ಸಾಧ್ಯತೆಗಳನ್ನು ಅರ್ಥಮಾಡಿಕೊಳ್ಳುವ ಉದ್ದೇಶದಿಂದ ರಚಿಸಲಾಗಿದೆ' ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸಂತಾಪ ಸೂಚಿಸಿ, 'ವಲಿಯಥಾನ್ ಅವರು ಭಾರತದ ಶ್ರೇಷ್ಠ ಹೃದಯ ಶಸ್ತ್ರಚಿಕಿತ್ಸಕರಲ್ಲಿ ಒಬ್ಬರಾಗಿದ್ದರು. ತಿರುವನಂತಪುರಂನಲ್ಲಿರುವ ಶ್ರೀಚಿತ್ರ ತಿರುನಾಳ್ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಮತ್ತು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಎರಡು ಸಂಸ್ಥೆಗಳು ಅವರ ದೂರದೃಷ್ಟಿ ಮತ್ತು ಕೊಡುಗೆಗಳಾಗಿವೆ. ನಂತರದ ವರ್ಷಗಳಲ್ಲಿ ವಲಿಯಾಥನ್ ಅವರು ಆಯುರ್ವೇದದ ವೈಜ್ಞಾನಿಕ ತಳಹದಿಗಳನ್ನು ಮುನ್ನಡೆಸಲು ತಮ್ಮನ್ನು ತೊಡಗಿಸಿಕೊಂಡಿದ್ದರು' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಜಲಪಾತದ ಬಳಿ ರೀಲ್ಸ್‌: 300 ಅಡಿ ಆಳದ ಕಮರಿಗೆ ಬಿದ್ದು ಮಹಿಳಾ ಚಾರ್ಟರ್ಡ್ ಅಕೌಂಟೆಂಟ್‌ ಸಾವು

ABOUT THE AUTHOR

...view details